Wednesday, August 12, 2020

ASIAN GAMES

ಪ್ಯಾರಾ ಏಷ್ಯನ್ ಗೇಮ್ಸ್: ರಕ್ಷಿತಾ ಗೆ ಚಿನ್ನ, ರಾಧಾಗೆ ಬೆಳ್ಳಿ

ಏಜೆನ್ಸಿಸ್ ಜಕಾರ್ತಾ  ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರಿ ಎರಡನೇ ದಿನದಂತ್ಯಕ್ಕೆ ಒಟ್ಟು 3 ಚಿನ್ನ,  6 ಬೆಳ್ಳಿ  8 ಕಂಚಿನ ಪಾದಕಗಳೊಂದಿಗೆ ಒಟ್ಟು 17 ಪದಕಗಳನ್ನು...

ATHLETICS

80,000 ಟನ್ ಹಳೆ ಮೊಬೈಲ್ ನಲ್ಲಿ ಅರಳಿದ ಟೊಕಿಯೋ ಒಲಿಂಪಿಕ್ಸ್ ಮೆಡಲ್!

ಸ್ಪೋರ್ಟ್ಸ್ ಮೇಲ್ ವರದಿ ಒಲಿಂಪಿಕ್ಸ್‌ನಲ್ಲಿ ನೀಡುವ ಚಿನ್ನದ ಪದಕದಲ್ಲಿ ಚಿನ್ನ ಇರುವುದಿಲ್ಲ, ಅದು ಬರೇ ಲೇಪನ ಎಂಬುದು ಎಲ್ಲರಿಗೂ ಗೊತ್ತು. ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಪುನರ್ ಬಳಕೆ ಮಾಡುವಲ್ಲಿ ಜಪಾನ್ ಈ ಜಗತ್ತಿಗೇ ಮಾದರಿ....

SCHOOL GAMES

ಅದಿತಿ, ಸಮ್ಯಕಾ ಟಿಟಿ ಚಾಂಪಿಯನ್ಸ್

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಧಾರವಾಡದ ಕಾಸ್ಮೋಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ರಾಜ್ಯ ರಾಂಕಿಂಗ್...

ಚೆಸ್: ಕೋಟದ ಪೂರ್ಣೇಶ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಸ್ಪೋರ್ಟ್ಸ್ ಮೇಲ್ ವರದಿ  ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರು ರಾಯಚೂರಿನಲ್ಲಿ ನಡೆಸಿದ ಪದವಿ ಪೂರ್ವ ಶಿಕ್ಷಣ ವಿಧ್ಯಾರ್ಥಿಗಳ ರಾಜ್ಯ...

ಸುರಾನಾ ಕಾಲೇಜಿಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ವಿಶ್ವವಿದ್ಯಾನಿಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸುರಾನಾ ಕಾಲೇಜು ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಬೆಂಗಳೂರಿನ  ಬಸವನಗುಡಿ...

CRICKET

ಕೆಐಒಸಿ: ಫಿಟ್ನೆಸ್ ಜತೆ ಕ್ರಿಕೆಟಿಗೆ ಮರು ಜೀವ

ಸ್ಪೋರ್ಟ್ಸ್ ಮೇಲ್ ವರದಿ ಕೊರೊನಾದ ನಡುವೆಯೇ ಬದುಕು ನಡೆಸುವ ಅನಿವಾರ್ಯತೆ ಬಂದೊದಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಅನುಮತಿ ನೀಡಿದೆ. ಜುಲೈ 8ರಿಂದ ಪಂದ್ಯಗಳು ಆರಂಭಗೊಳ್ಳಲಿವೆ....

BADMINTON

ಬ್ಯಾಂಕ್ ಸಿಬ್ಬಂದಿಗಳಿಗೆ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವಾರು ರೀತಿಯ ಕ್ರೀಡಾ ಚಟುವಟಿಕೆಗಳನ್ನು ನಡೆಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ...

ನಿಯತಿ: ಓದಿನಲ್ಲಿ ಟಾಪ್, ಆಟದಲ್ಲೂ ಶ್ರೇಷ್ಠ!

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಗಳು...

ಏಷ್ಯಾ ಚಾಂಪಿಯನ್‌ಶಿಪ್: ಸೈನಾ ಶುಭಾರಂಭ

ವೂಹಾನ್:  ಭಾರತದ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರು 2019ರ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ...

SPECIAL STORY

PARA SPORTS

- Advertisement -

OTHER SPORTS

LATEST ARTICLES

ಕಿಕ್ ಬಾಕ್ಸಿಂಗ್ ಗೆ ಸಜ್ಜಾದ ಸಾಫ್ಟ್ ವೇರ್ ಎಂಜಿನಿಯರ್ ಹರಿಕೃಷ್ಣ

ಸ್ಪೋರ್ಟ್ಸ್ ಮೇಲ್ ವರದಿ ಆತ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್, ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಕಾಲೇಜು ದಿನಗಳಿಂದ ಕ್ರೀಡೆಯನ್ನು ಉಸಿರಾಗಿಸಕೊಂಡವ. ಉತ್ತಮ ದೇಹದಾರ್ಢ್ಯ ಪಟುವಾಗಿರುವ ಹರಿಕೃಷ್ಣನ್ ಶ್ರೀರಾಮನ್ ಈಗ ಬೆಂಗಳೂರಿನಲ್ಲಿ ಎಲ್ಲರ ನೆಚ್ಚಿನ...

ಈ ವಿಶ್ವ ಚಾಂಪಿಯನ್ ಇನ್ನೂ ಟೈಪಿಸ್ಟ್ ಆಗಿರಬೇಕೆ?

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಎರಡು ಬಾರಿ ವಿಶ್ವ ಚಾಂಪಿಯನ್ ಪಟ್ಟ, 10 ಅಂತಾರಾಷ್ಟ್ರೀಯ ಪದಕ, ರಾಷ್ಟ್ರಮಟ್ಟದಲ್ಲಿ 7 ಬಾರಿ ಚಿನ್ನದ ಪದಕ, 5 ಬೆಳ್ಳಿ, 6 ಕಂಚು, ರಾಜ್ಯಮಟ್ಟದಲ್ಲಿ 15 ಬಾರಿ ಚಾಂಪಿಯನ್, ಕ್ಲಬ್...

ಸಾವಿಗೆ ಜೀವ ತುಂಬುವ ಚಾಂಪಿಯನ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಸಾವಿನ ನಂತರ ಮನುಷ್ಯನ ಜೀವಕ್ಕೆ ಬೆಲೆ ಇರುವುದಿಲ್ಲ. ಆದರೆ ಬೆಲೆ ಇಲ್ಲವೆಂದು ಮೃತ ದೇಹವನ್ನು ಮನಬಂದಂತೆ ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಪ್ರತಿಯೊಂದು ಧರ್ಮದಲ್ಲೂ ಹುಟ್ಟಿಗೆ ಯಾವ ರೀತಿಯ ಶಿಷ್ಟಾಚಾರಗಳಿರುತ್ತವೆಯೋ...

ಅವರ ಬದುಕಿಗಾಗಿ ಇವರ ಓಟ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಈ ಬದುಕೇ ಒಂದು ಓಟ ಇದ್ದಂತೆ.  ನಮ್ಮ ನಮ್ಮ ಬದುಕನ್ನು ರೂಪಿಸಿಕೊಳ್ಳುವುದರಲ್ಲೇ ನಮ್ಮ ಬದುಕಿನ ಓಟ ಸಾಗುತ್ತಿರುತ್ತದೆ…ಪೂರ್ಣಗೊಳ್ಳುತ್ತದೆ. ಕೆಲವೊಮ್ಮೆ ಗುರಿ ತಲುಪದೆ ವಿರಮಿಸುತ್ತೇವೆ. ಈ ನಡುವೆ ಬೇರೆಯವರ ಬದುಕಿಗಾಗಿ...

ಪಿಎಂ ಕೇರ್ ಗೆ ಕೊಡುಗೆ

ಸ್ಪೋರ್ಟ್ಸ್ ಮೇಲ್ ವರದಿ ಕೊರೊನಾ ಸಂಕಷ್ಟದಲ್ಲಿರುವವರ ನೆರವಿಗಾಗಿ ಪ್ರಧಾನ ಮಂತ್ರಿಯವರ ಪಿ.ಎಂ. ಕೇರ್ ನಿಧಿಗೆ ಎಂಆರ್ಪಿಎಲ್ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಶಿಕ್ಷಕರ ವರ್ಗ 1,94,500 ರೂ. ಕೊಡುಗೆ ನೀಡಿದೆ. ಶಾಲೆಯ ಪ್ರಾಂಶುಪಾಲರು ಹಾಗೂ ಖ್ಯಾತ...

ಕೆಐಒಸಿ: ಫಿಟ್ನೆಸ್ ಜತೆ ಕ್ರಿಕೆಟಿಗೆ ಮರು ಜೀವ

ಸ್ಪೋರ್ಟ್ಸ್ ಮೇಲ್ ವರದಿ ಕೊರೊನಾದ ನಡುವೆಯೇ ಬದುಕು ನಡೆಸುವ ಅನಿವಾರ್ಯತೆ ಬಂದೊದಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಅನುಮತಿ ನೀಡಿದೆ. ಜುಲೈ 8ರಿಂದ ಪಂದ್ಯಗಳು ಆರಂಭಗೊಳ್ಳಲಿವೆ....

ಅಣ್ಣನ ಬದಲಿಗೆ ಹುಡುಗರ ತಂಡದಲ್ಲಿ ಆಡಿ ಸರಣಿಶ್ರೇಷ್ಠಳೆನಿಸಿದ ಶಫಾಲಿ!!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್   ಈ ಭೂಮಿಯ ಮೇಲೆ ಸಾಧಕಿಯೊಬ್ಬಳ ಜೀವನಗಾಥೆಯನ್ನು ಗಮನಿಸಿದಾ, ನೆನಪಾಗುವುದು ಜಿ.ಎಸ್. ಶಿವರುದ್ರಪ್ಪನರ ಕವಿತೆಯ ಸಾಲು…ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ…..ಈ ಬಾರಿ ಟಿ20 ವಿಶ್ವಕಪ್...

ಲಾರಿಯಸ್ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ ಸಚಿನ್, ಮೆಸ್ಸಿ

ಪ್ರದೀಪ್ ಕುಮಾರ್, ಪಡುಕರೆ ಕ್ರೀಡಾ ಲೋಕದ ಅತ್ಯುನ್ನತ  ಪ್ರಶಸ್ತಿಯಾದ ಕ್ರೀಡಾ ಆಸ್ಕರ್ ಎಂದೇ  ಕರೆಯಲ್ಪಡುವ ಪ್ರತಿಷ್ಠಿತ 'ಲಾರಿಯಸ್ ಪ್ರಶಸ್ತಿ'ಯ  20ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳವಾರ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ವರ್ಣರಂಜಿತವಾಗಿ ನಡೆಯಿತು.  ಭಾರತದ ಕ್ರಿಕೆಟ್ ದೇವರು 'ಲಾರಿಯಸ್ ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ' ದ ಪ್ರಶಸ್ತಿಯನ್ನು ಪಡೆದರೆ, 'ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು'  ಪ್ರಶಸ್ತಿಯನ್ನು ಬ್ರೀಟನ್ನಿನ ವಿಶ್ವ ಶ್ರೇಷ್ಠ  ಫಾರ್ಮಲ್ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಮತ್ತು ಅರ್ಜೆಂಟೈನಾದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಜಂಟಿಯಾಗಿ ಪಡೆದರು.   ಕ್ರಿಕೆಟ್ ದೇವರಿಗೆ ಲಾರಿಯಸ್ ಪ್ರಶಸ್ತಿ  ಸತತ 22 ವರುಷಗಳ ಕಾಯುವಿಕೆಯ ನಂತರ ತವರು ಮೈದಾನ ವಾಂಖೇಡೆಯಲ್ಲಿ ವಿಶ್ವಕಪ್‌ಗೆ ಸಚಿನ್ ಮುತ್ತಿಕ್ಕಿದಾಗ, ಸಹ ಆಟಗಾರರು ಅವರನ್ನು ಭುಜದ ಮೇಲೆ ಕೂರಿಸಿ ತ್ರಿವರ್ಣ ಧ್ವಜ ಹಾರಿಸುತ್ತಾ ಹೊತ್ತು ತಿರುಗಿದ ಭಾವನಾತ್ಮಕ ಕ್ಷಣಕ್ಕೆ ಲಾರಿಯಸ್ 2000-2020  ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ ಪ್ರಶಸ್ತಿ ಲಭಿಸಿತು. 24 ವರ್ಷಗಳ ತನ್ನ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್  ಜೀವನದಲ್ಲಿ ಆರು ವಿಶ್ವಕಪ್ ಆಡಿರುವ ಸಚಿನ್ ಕೊನೆಯ ಭಾರಿ ಪ್ರಶಸ್ತಿ ಎತ್ತಲು ಯಶಸ್ವಿಯಾಗಿದ್ದರು. ಲಾರಿಯಸ್ ಪ್ರಶಸ್ತಿ ಪಡೆದ ಮೊದಲ ಭಾರತಿಯ, ಮೊದಲ ಕ್ರಿಕೆಟಿಗ ಎನ್ನುವ ಮತ್ತೊಂದು ರೆಕಾರ್ಡ್ ದಾಖಲೆಗಳ ಸರದಾರ  ಸಚಿನ್ ತೆಂಡೂಲ್ಕರ್ ಗರಿ ಸೇರಿತು. ಜರ್ಮನ್ ಟೆನಿಸ್ ದಂತಕಥೆ ಬೋರಿಸ್ ಬೇಕರ್ ಸಚಿನ್ ಹೆಸರನ್ನು ಪ್ರಕಟಿಸದರೆ, ಆಸ್ಟ್ರೇಲಿಯಾ ಲೆಜೆಂಡರಿ ಕಪ್ತಾನ ಸ್ಟೀವ್ ವಾ ಸಚಿನ್‌ಗೆ ಪ್ರಶಸ್ತಿ ನೀಡಿದರು. ಫುಟ್ಬಾಲ್‌, ರಗ್ಬಿ, ಟೆನಿಸ್, ಬಾಸ್ಕೆಟ್ ಬಾಲ್ ಅಂತ ವಿಶ್ವವ್ಯಾಪಿ ಆಟದ ನಡುವೆ ಕ್ರಿಕೆಟ್ ಗೆ ಪ್ರಶಸ್ತಿ ಬಂದಿರುವುದು ಅಚ್ಚರಿ ಹಾಗೆ ಸಂತೋಷ ಕೂಡ..  ಇತಿಹಾಸ ನಿರ್ಮಿಸಿದ ಮೆಸ್ಸಿ ವಿಶ್ವದಾಖಲೆಯ 6 ಬಾರಿ ಬ್ಯಾಲಾನ್ ಡಿ’ಓರ್ ಪ್ರಶಸ್ತಿ ವಿಜೇತ, ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲೀಯೊನೆಲ್ ಮೆಸ್ಸಿ  'ಲಾರಿಯಸ್ ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು'  ಪ್ರಶಸ್ತಿಯನ್ನು ಫಾರ್ಮುಲ್ ಒನ್ ಚಾಂಪಿಯನ್ ಲೂಯಿಸ್  ಹ್ಯಾಮಿಲ್ಟನ್ ಜೊತೆ ಜಂಟಿಯಾಗಿ ಪಡೆದರು. ಈ ಮೂಲಕ ಲಾರಿಯಸ್ ವರ್ಷದ ಆಟಗಾರ ಪ್ರಶಸ್ತಿ ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. ಟೀಮ್ ಗೇಮ್ನ ಆಟಗಾರನೊಬ್ಬ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದು ಕೂಡ ಇದೇ ಮೊದಲು. ಇವರ ಜೊತೆ ಜಂಟಿಯಾಗಿ ಪ್ರಶಸ್ತಿ ಪಡೆದ ಬ್ರಿಟಿಷ್ ಫಾರ್ಮುಲ್ ಒನ್ ರೇಸರ್ ಲೂಯೀಸ್  ಹ್ಯಾಮಿಲ್ಟನ್ ಈಗಾಗಲೇ 6 ಬಾರಿ ವಿಶ್ವಚಾಂಪಿಯನ್ಷಿಪ್ ಗೆದ್ದು ಮೈಕಲ್ ಶುಮಾಕರ್ ಅವರ 7  ವಿಶ್ವಾದಾಖಲೆಯನ್ನು  ಸಮಬಲ ಮಾಡುವತ್ತ ಈ ವರ್ಷ ಕಣ್ಣಿಟ್ಟಿದ್ದಾರೆ. ಲಾರಿಯಸ್ ಪ್ರಶಸ್ತಿಯ ಇತಿಹಾಸ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಯಿತು. ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು, ಶ್ರೇಷ್ಠ ಮಹಿಳಾ ಕ್ರೀಡಾಪಟು, ಟಿಮ್ ಆಫ್ ದಿ ಇಯರ್, ಕಮ್ ಬ್ಯಾಕ್ ಆಫ್ ದಿ ಇಯರ್ ಹೀಗೆ ಇನ್ನೊಂದಿಷ್ಟು ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.  ಅತಿ ಹೆಚ್ಚು ಬಾರಿ ಈ ಪ್ರಶಸ್ತಿ ಗೆದ್ದ ವಿಶ್ವದಾಖಲೆ ಟೆನಿಸ್ ಲೆಜೆಂಡ್ ರೊಜರ್ ಫೆಡರರ್ ಹೆಸರಲ್ಲಿದೆ. ಅವರು 5 ಬಾರಿ ಮೆನ್ಸ್ ಪ್ಲೆಯರ್ ಆಫ್ ದಿ ಇಯರ್, ಮತ್ತೊಂದು ಬಾರಿ ಕಮ್ ಬ್ಯಾಕ್ ಆಫ್ ದಿ  ಇಯರ್  ಗೆದ್ದಿದ್ದರು. ಮತ್ತುಳಿದಂತೆ ಚಿರತೆ ವೇಗದ ಓಟಗಾರ ಉಸೇನ್ ಬೋಲ್ಟ್ ಮತ್ತು ಟೆನಿಸ್‌ನ ಇನ್ನೊಬ್ಬ  ಲೆಜೆಂಡರಿ ನೊವಾಕ್  ಜೋಕೊವಿಕ್ ನಾಲ್ಕು ಬಾರಿ ಲಾರಿಯಸ್ ಪ್ರಶಸ್ತಿಯನ್ನು ಮುಡಿಗರೆರಿಸಿಕೊಂಡಿದ್ದಾರೆ. ಗಾಲ್ಫ್ ದಿಗ್ಗಜ ಟೈಗರ್ ವುಡ್ಸ್ ಕೂಡ ನಾಲ್ಕು ಬಾರಿ ಗೆದ್ದಿದ್ದಾರೆ. ಸಚಿನ್ ತೆಂಡೂಲ್ಕರ್  ಗೆದ್ದಿದ್ದು ಬಿಟ್ಟರೆ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ 2002ರಲ್ಲಿ ಒಮ್ಮೆ ಟಿಮ್ ಆಫ್ ದಿ ಇಯರ್ ಆಗಿದ್ದೆ ಕ್ರಿಕೆಟ್‌ನ ಸಾಧನೆ...
- Advertisement -
- Advertisement -