ಬೆಂಗಳೂರು: ನಗರದಲ್ಲಿ ನಡೆದ ಬೆಂಗಳೂರು ವಲಯ ಮತ್ತು ಅಂತರ ವಲಯ ಮಹಿಳಾ ವಾಲಿಬಾಲ್ ಪಂದ್ಯಾವಳಿಯ ಬೆಂಗಳೂರು ವಲಯದಲ್ಲಿ ತಿಪಟೂರಿನ ಕರ್ನಾಟಕ ಇನ್ಸಿಟ್ಯೂಟ್ ಆ್ ಟೆಕ್ನಾಲಜಿ(ಕೆಐಟಿ)ಹಾಗೂ ಅಂತರ ವಲಯದಲ್ಲಿ ಮಂಗಳೂರಿನ ನಿಟ್ಟೆ ಕಾಲೇಜ್ ಮೊದಲ ಸ್ಥಾನ ಗಳಿಸಿವೆ.
ಯಲಹಂಕದ ಕೋಗಿಲು ಮುಖ್ಯರಸ್ತೆಯಲ್ಲಿನ ಆದಿತ್ಯ ಕಾಲೇಜಿನ ಕ್ರೀಡಾಂಗಣದಲ್ಲಿ ಆದಿತ್ಯ ಅಕಾಡೆಮಿ ಆ್ ಆರ್ಕಿಟೆಕ್ಚರ್ ಆ್ಯಂಡ್ ಡಿಸೈನ್ (ಎಎಎಡಿ), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ.ಟಿ.ಯು) ಆಯೋಜಿಸಿದ್ದ ನಾಲ್ಕು ದಿನಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ನಗರ ಹಾಗೂ ರಾಜ್ಯದ ವಿವಿಧ ಕಾಲೇಜುಗಳ 20 ಮಹಿಳಾ ತಂಡಗಳು ಪಾಲ್ಗೊಂಡಿದ್ದವು.
ಬೆಂಗಳೂರು ವಲಯದಲ್ಲಿ ಭಾಗವಹಿಸಿದ್ದ ತಂಡಗಳಲ್ಲಿ ತಿಪಟೂರಿನ ಕರ್ನಾಟಕ ಇನ್ಸಿಟ್ಯೂಟ್ ಆ್ ಟೆಕ್ನಾಲಜಿ(ಕೆಐಟಿ) ಮೊದಲ ಸ್ಥಾನ ಗಳಿಸಿದರೆ, ಯಲಹಂಕದ ಬಿಎಂಎಸ್ಸಿಇ ಕಾಲೇಜಿನ ವಿದ್ಯಾರ್ಥಿನಿಯರು ಎರಡನೇ ಸ್ಥಾನಗಳಿಸಿದರು.
ಅಂತರವಲಯದಲ್ಲಿ ಮಂಗಳೂರಿನ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಹಾಗೂ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಯರು ಎರಡನೇ ಸ್ಥಾನ ಗಳಿಸಿವೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆತಿದೆ ಎಂದು ಆದಿತ್ಯ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಎಂ.ವಿಶ್ವನಾಥ್ ತಿಳಿಸಿದ್ದಾರೆ.