ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಜಿಮ್ಸಾಸ್ಟಿಕ್ ತಾರೆ ದೀಪಾ ಕರ್ಮಕಾರ್, ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದಾರೆ.
ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕರ್ಮಕಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರ ಕೋಚ್ ಬಿಶ್ವೇಶ್ವರ್ ನಂದಿ ತಿಳಿಸಿದ್ದಾರೆ.
‘‘ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ದೀಪಾ ಕರ್ಮಕಾರ್ ಪೂರ್ಣ ಫಿಟ್ ಆಗಿಲ್ಲ. ಸಂಪೂರ್ಣ ಚೇತರಿಸಿಕೊಂಡ ನಂತರವಷ್ಟೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲುವತ್ತ ಚಿತ್ತ ಹರಿಸಿದ್ದಾಳೆ,’’ ಎಂದು ಕರ್ಮಕಾರ್ ಕೋಚ್ ಬಿಶ್ವೇಶ್ವರ್ ಹೇಳಿದ್ದಾರೆ.
ಏಷ್ಯನ್ ಗೇಮ್ಸ್ ಆ.18ರಿಂದ ಸೆ.2ರವರೆಗೆ ನಡೆಯಲಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಮೊದಲ ಜಿಮ್ನಾಸ್ಟಿಕ್ ಪಟು ಎಂಬ ಹಿರಿಮೆ ಕರ್ಮಕಾರ್ ಅವರದ್ದಾಗಿದೆ. 2016ರ ರಿಯೊ ಒಲಿಂಪಿಕ್ಸ್‌ನ ಮಹಿಳಾ ವಾಲ್ಟ್ ವಿಭಾಗದಲ್ಲಿ ಕರ್ಮಕಾರ್ ನಾಲ್ಕನೇ ಸ್ಥಾನ ಪಡೆದಿದ್ದರು.