Thursday, January 2, 2025

ಟಿ20ಯಲ್ಲಿ ವಿನೂತನ ದಾಖಲೆ ಬರೆದ ಕನ್ನಡಿಗ ಕೆ.ಎಲ್ ರಾಹುಲ್!

ಕೊಲಂಬೊ: ಕರ್ನಾಟಕದ ಕ್ರಿಕೆಟ್ ಸೂಪರ್‌ಸ್ಟಾರ್ ಕೆ.ಎಲ್ ರಾಹುಲ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್ ಮೂಲಕ ಔಟಾದ ಭಾರತದ ಮೊದಲ ಆಟಗಾರನೆಂಬ ಅನಪೇಕ್ಷಿತ ದಾಖಲೆಗೆ ರಾಹುಲ್ ಪಾತ್ರರಾಗಿದ್ದಾರೆ.

PC: Twitter/KL Rahul

ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಆತಿಥೇಯ ಶ್ರೀಲಂಕಾ ವಿರುದ್ಧದ ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಈ ಘಟನೆ ನಡೆಯಿತು. 18 ರನ್ ಗಳಿಸಿ ಆಡುತ್ತಿದ್ದ ರಾಹುಲ್, ಲಂಕಾ ಆಲ್ರೌಂಡರ್ ಜೀವನ್ ಮೆಂಡಿಸ್ ಅವರ ಎಸೆತವನ್ನು ಆನ್‌ಡ್ರೈವ್ ಮಾಡುವ ಯತ್ನದಲ್ಲಿದ್ದಾಗ, ಅವರ ಕಾಲು ಸ್ಟಂಪ್‌ಗೆ ಬಡಿದು ಹಿಟ್ ವಿಕೆಟ್ ಆದರು.
ಇದು 2017ರ ಡಿಸೆಂಬರ್‌ನ ನಂತರ ರಾಹುಲ್ ಆಡಿದ ಮೊದಲ ಟಿ20 ಅಂತರಾಷ್ಟ್ರೀಯ ಪಂದ್ಯವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಟಿ20 ಸರಣಿ ಗೆದ್ದ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿದ್ದರಾದರೂ, 3 ಪಂದ್ಯಗಳಲ್ಲಿ ಒಂದರಲ್ಲಿಯೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲೂ ರಾಹುಲ್ ಅವಕಾಶ ವಂಚಿತರಾಗಿದ್ದರು. ಆದರೆ 3ನೇ ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ಹೊರಗಿಟ್ಟು ರಾಹುಲ್‌ಗೆ ಅವಕಾಶ ನೀಡಲಾಯಿತು. ಆದರೆ ರಾಹುಲ್ ಬ್ಯಾಡ್ ಲಕ್. ಹಿಟ್ ವಿಕೆಟ್ ಆಗಿ ಔಟಾಗಬೇಕಾಯಿತು.
ಭಾರತ ತಂಡ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಗುರುವಾರ ನಡೆಯಲಿದೆ.

Related Articles