ಬೆಂಗಳೂರು: ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಮುಂಬರುವ ಮಹಿಳಾ ತ್ರಿಕೋನ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ಕೈಬಿಡಲಾಗಿದೆ.
ಬಿಜಾಪುರ ಜಿಲ್ಲೆಯವರಾದ 26 ವರ್ಷದ ರಾಜೇಶ್ವರಿ ಗಾಯಕ್ವಾಡ್ ಇದುವರೆಗೆ ಭಾರತ ಪರ ಒಂದು ಟೆಸ್ಟ್, 33 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನಾಡಿದ್ದು ಒಟ್ಟು 81 ವಿಕೆಟ್ ಪಡೆದಿದ್ದಾರೆ.
ಭಾರತ, ಪ್ರವಾಸಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳನ್ನೊಳಗೊಂಡ ತ್ರಿಕೋನ ಟಿ20 ಸರಣಿ ಮಾರ್ಚ್ 22ರಿಂದ ಆರಂಭವಾಗಲಿದೆ. ಟೂರ್ನಿಗೆ ಆಯ್ಕೆ ಮಾಡಲಾಗಿರುವ ಹರ್ಮನ್ಪ್ರೀತ್ ಕೌರ್ ನಾಯಕತ್ವದ ತಂಡದಲ್ಲಿ 15 ಆಟಗಾರ್ತಿಯರಿಗೆ ಸ್ಥಾನ ನೀಡಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಅನುಭವಿ ಮಧ್ಯಮ ವೇಗದ ಬೌಲರ್ ಜೂಲನ್ ಗೋಸ್ವಾಮಿ ತಂಡಕ್ಕೆ ಮರಳಿದ್ದಾರೆ.
ಮಹಿಳಾ ಟಿ20 ತ್ರಿಕೋನ ಸರಣಿಗೆ ಭಾರತ ತಂಡ: ಹರ್ಮನ್ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧಾನ(ಉಪ ನಾಯಕಿ), ಮಿಥಾಲಿ ರಾಜ್, ವೇದಾ ಕೃಷ್ಣಮೂರ್ತಿ, ಜೆಮಿಮಾ ರಾಡ್ರಿಗಸ್, ಅನುಜಾ ಪಾಟೀಲ್, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ಪೂನಂ ಯಾದವ್, ಜೂಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ರುಮೇಲಿ ಧರ್, ಮೋನಾ ಮೇಶ್ರಮ್, ಏಕ್ತಾ ಬಿಷ್ಟ್.