Friday, November 22, 2024

ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ನ ಕ್ರಿಕೆಟ್ ದಿಗ್ಗಜ ಕೆವಿನ್ ಪೀಟರ್ಸನ್!

ಬೆಂಗಳೂರು: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್, ತಮ್ಮ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಹಾಗೂ ಇನ್ಸ್‌ಟಾಗ್ರಾಂ ಖಾತೆಗಳ ಮೂಲಕ ಕೆವಿನ್ ಪೀಟರ್ಸನ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಅಲ್ಲದೆ ಇನ್ಸ್‌ಟಾಗ್ರಾಂನಲ್ಲಿ ವಿದಾಯದ ನುಡಿಗಳನ್ನಾಡಿದ್ದಾರೆ.
PC: Twitter/Kevin Pietersen

ವೃತ್ತಿಪರ ಕ್ರಿಕೆಟ್‌ನಲ್ಲಿ 152 ಅರ್ಧಶತಕಗಳು ಹಾಗೂ 68 ಶತಕಗಳ ಸಹಿತ 30,000+ ರನ್ ಗಳಿಸಿದ್ದೇನೆ. ತವರಿನಲ್ಲಿ ಮತ್ತು ತವರಿನ ಹೊರಗೆ 4 ಆ್ಯಶಸ್ ಗೆಲುವುಗಳು, ಟಿ20 ವಿಶ್ವಕಪ್, ಭಾರತವನ್ನು ಅವರದ್ದೇ ನೆಲದಲ್ಲಿ ಸೋಲಿಸಿದ್ದು, ಪ್ರಮುಖ ಟೆಸ್ಟ್ ರಾಷ್ಟ್ರಗಳ ವಿರುದ್ಧ ತವರು ಮತ್ತು ತವರಿನ ಹೊರಗೆ ಶತಕಗಳನ್ನು ಬಾರಿಸಿದ್ದೇನೆ. ಈ ಎಲ್ಲಾ ಸಾಧನೆಗಳು ನನಗೆ ಬೆಂಗಾವಲಾಗಿ ನಿಂತ ನನ್ನ ಕುಟುಂಬಕ್ಕೆ ಅರ್ಪಣೆ. ಎಲ್ಲವನ್ನೂ ಪಡೆದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಅಭಿಮಾನಿಗಳೇ, ನಿಮ್ಮ ಪ್ರೀತಿಯ ಸಂದೇಶಗಳಿಗೆ ಧನ್ಯವಾದಗಳು. ನಿಮ್ಮನ್ನು ಮನರಂಜಿಸಿದ್ದಕ್ಕೆ ಖುಷಿಯಿದೆ. ಕ್ರಿಕೆಟ್ ಆಟವನ್ನು ಪ್ರೀತಿಸುತ್ತೇನೆ.

 

ದಕ್ಷಿಣ ಆಫ್ರಿಕಾ ಸಂಜಾತ, 37 ವರ್ಷದ ಕೆವಿನ್ ಪೀಟರ್ಸನ್ 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 32 ಶತಕಗಳನ್ನು ಬಾರಿಸಿರುವ ಪೀಟರ್ಸನ್, ಇಂಗ್ಲೆಂಡ್ ಕ್ರಿಕೆಟ್ ಕಂಡ ದಿಗ್ಗಜ ಆಟಗಾರರಲ್ಲೊಬ್ಬರು.

ಕೆವಿನ್ ಪೀಟರ್ಸನ್ ಟೆಸ್ಟ್ ಸಾಧನೆ

ಪಂದ್ಯ     ರನ್      ಬೆಸ್ಟ್     ಸರಾಸರಿ   ಶತಕ    ಅರ್ಧಶತಕ
104     8181   227    47.28    23     35

ಏಕದಿನ ಸಾಧನೆ

ಪಂದ್ಯ     ರನ್      ಬೆಸ್ಟ್     ಸರಾಸರಿ   ಶತಕ    ಅರ್ಧಶತಕ
136     4440   130     40.73   09     25

ಟಿ20 ಸಾಧನೆ

ಪಂದ್ಯ     ರನ್      ಬೆಸ್ಟ್     ಸರಾಸರಿ   ಶತಕ    ಅರ್ಧಶತಕ
37       1176   79       37.93   00      07

Related Articles