Sunday, December 22, 2024

ಹಾರ್ದಿಕ್ ಪಾಂಡ್ಯ ಗರ್ಲ್ ಫ್ರೆಂಡ್‌ಗೆ ನಿಗಿ ನಿಗಿ ಕೋಪ… ಅಷ್ಟಕ್ಕೂ ಆಕೆಯ ಸಿಟ್ಟಿಗೆ ಕಾರಣವೇನು?

ದಿ ಸ್ಪೋರ್ಟ್ಸ್ ಬ್ಯೂರೋ
ಬೆಂಗಳೂರು: ಟೀಮ್ ಇಂಡಿಯಾದ ಸನ್ಸೇಶನಲ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಈಗಾಗಲೇ ಕ್ರಿಕೆಟ್ ಮೈದಾನದಲ್ಲಿ ತಮ್ಮ ಖತರ್ನಾಕ್ ಬೌಲಿಂಗ್ ಹಾಗೂ ಹಾರ್ಡ್ ಹಿಟ್ಟಿಂಗ್ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದಾರೆ. ಕ್ರಿಕೆಟ್‌ನಲ್ಲಿ ಹಣ, ಹೆಸರು, ಖ್ಯಾತಿ ಸಿಗುತ್ತಿದ್ದಂತೆ ಕ್ರಿಕೆಟಿಗರ ಜೊತೆಗೆ ನಟಿಯರು, ಮಾಡೆಲ್‌ಗಳ ಹೆಸರು ಥಳಕು ಹಾಕಿಕೊಳ್ಳುವುದು ಸರ್ವೇ ಸಾಮಾನ್ಯ. ಹಾಗೆಯೇ ಹಾರ್ದಿಕ್ ಪಾಂಡ್ಯ ಅವರ ಹೆಸರಿನೊಂದಿಗೂ ಎಲಿ ಅವ್ರಾಮ್ ಎಂಬ ನಟಿ ಕಂ ಮಾಡೆಲ್ ಹೆಸರು ಥಳಕು ಹಾಕಿಕೊಂಡಿದೆ.

PC: Twitter/Elli Avram

ಹಾರ್ದಿಕ್ ಹಾಂಡ್ಯ ಮತ್ತು ಎಲಿ ಅವ್ರಾಮ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರೂ ಹಲವಾರು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಡೆದ ತಮ್ಮ ಸಹೋದರ ಕೃಣಾಲ್ ಪಾಂಡ್ಯ ಅವರ ಮದುವೆಯಲ್ಲೂ ಹಾರ್ದಿಕ್ ಪಾಂಡ್ಯ, ತಮ್ಮ ಗೆಳತಿಗೇ ಅಂಟಿ ಕೊಂಡಿದ್ದರು.
ಇದೀಗ ಪಾಂಡ್ಯ ಜೊತೆಗಿನ ಡೇಟಿಂಗ್ ಬಗ್ಗೆ ಎಲಿ ಅವ್ರಾಮ್ ವೌನ ಮುರಿದಿದ್ದಾರೆ. ‘ನಾನು ಮತ್ತು ಪಾಂಡ್ಯ ಉತ್ತಮ ಸ್ನೇಹಿತರಷ್ಟೇ. ನಮ್ಮಿಬ್ಬರ ಮಧ್ಯೆ ಅಂಥದ್ದೇನೂ ಇಲ್ಲ. ನಮ್ಮ ವಿಚಾರದಲ್ಲಿ ಕೇಳಿ ಬರುತ್ತಿರುವ ಊಹಾಪೋಹಗಳಿಗೆಲ್ಲಾ ಪ್ರತಿಕ್ರಿಯೆ ನೀಡುವುದರಲ್ಲಿ ಅರ್ಥವಿಲ್ಲ’ ಎಂದಿದ್ದಾರೆ. ಹಾರ್ದಿಕ್ ಪಾಂಡ್ಯ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಯನ್ನಾಡುತ್ತಿದ್ದಾರೆ.

Related Articles