Friday, November 22, 2024

ಅಶ್ವಿನ್ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ… ಐಪಿಎಲ್‌ಗೆ ಸ್ಪಿನ್ ಮಾಂತ್ರಿಕನ ಡೆಡ್ಲಿ ವೆಪನ್!

ನಾಗ್ಪುರ: ಟೆಸ್ಟ್ ಕ್ರಿಕೆಟ್‌ನಲ್ಲಿ 311 ವಿಕೆಟ್ಸ್‌, ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ಸ್‌, ಟಿ20 ಕ್ರಿಕೆಟ್‌ನಲ್ಲಿ 52 ವಿಕೆಟ್ಸ್‌… ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 513 ವಿಕೆಟ್‌ಗಳನ್ನು ಕಬಳಿಸಿರುವ ರವಿಚಂದ್ರನ್ ಅಶ್ವಿನ್ ಸ್ಪಿನ್ ಆಧುನಿಕ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ. ಇಷ್ಟೂ ವಿಕೆಟ್‌ಗಳನ್ನು ತಮ್ಮ ಕರಾರುವಾಕ್ ಆ್ಸ್ಪಿನ್ ಬೌಲಿಂಗ್‌ನಿಂದ ಕಬಳಿಸಿರುವ ರವಿಚಂದ್ರನ್ ಅಶ್ವಿನ್ ಈಗ ಲೆಗ್ ಸ್ಪಿನ್ನರ್ ಕೂಡ ಹೌದು.
ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ವಿದರ್ಭ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ಅಶ್ವಿನ್ ಲೆಗ್ ಸ್ಪಿನ್ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಪರಿಣತ ಲೆಗ್ ಸ್ಪಿನ್ನರ್ ರೀತಿಯಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್, ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ತಮ್ಮ ಲೆಗ್ ಸ್ಪಿನ್ ಅಸವನ್ನು ಪ್ರಯೋಗಿಸಿದ ತಮಿಳುನಾಡಿನ ಸ್ಪಿನ್ ಮಾಂತ್ರಿಕ, ತಮ್ಮ ಬತ್ತಳಿಕೆಗೆ ಮತ್ತೊಂದು ಅಸವನ್ನು ಸೇರಿಸಿಕೊಂಡಿದ್ದಾರೆ. ಈ ಮೂಲಕ ಏಪ್ರಿಲ್ 7ರಂದು ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಅಶ್ವಿನ್ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ಪರ ಆಡುವ ಸಂದರ್ಭದಲ್ಲಿ ಅಶ್ವಿನ್ ಲೆಗ್ ಸ್ಪಿನ್ ಬೌಲಿಂಗ್ ಮಾಡಿದ್ದರು.
PC: BCCI/Ashwin
ಕ್ರಿಕೆಟ್‌ನಲ್ಲಿ ಪ್ರತಿದಿನವೂ ಕಲಿಯುವುದು ಸಾಕಷ್ಟಿರುತ್ತದೆ. ಎಷ್ಟೇ ದೊಡ್ಡ ಆಟಗಾರನಾದರೂ ಕಲಿಕೆ ನಿರಂತರ. ಕ್ರೀಡೆ ಬೆಳೆದಂತೆಲ್ಲಾ ಆಟಗಾರರು ಹೊಸತನಕ್ಕೆ ಒಗ್ಗಿಕೊಳ್ಳಲೇಬೇಕಿದೆ. ಕ್ರಿಕೆಟ್‌ನ ವಿಧೇಯ ವಿದ್ಯಾರ್ಥಿಯಾಗಿರುವ ಅಶ್ವಿನ್, ಸ್ಪಿನ್ ಮಾಂತ್ರಿಕನೆಂದು ಕರೆಸಿಕೊಂಡ ನಂತರವೂ ಕಲಿಯುವುದನ್ನು ಬಿಟ್ಟಿಲ್ಲ. ಇದಕ್ಕೆ ಅವರು ಈಗ ಪ್ರಯೋಗಿಸುತ್ತಿರುವ ಲೆಗ್ ಸ್ಪಿನ್ ಅಸವೇ ಸಾಕ್ಷಿ. ಟೀಮ್ ಇಂಡಿಯಾದ ಅಭ್ಯಾಸದ ಸಂದರ್ಭಗಳಲ್ಲಿ ನೆಟ್ ಪ್ರಾಕ್ಟೀಸ್ ವೇಳೆ ಲೆಗ್ ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ಅಶ್ವಿನ್, ಅದನ್ನೀಗ ಇರಾನಿ ಕಪ್ ಪಂದ್ಯದಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದಾರೆ.

Related Articles