Thursday, January 2, 2025

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಆಸ್ಟ್ರೇಲಿಯಾ ಕ್ರಿಕೆಟಿಗನ ಪ್ರೇಯಸಿ!

ಬ್ರಿಸ್ಬೇನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ಅವರ ಪ್ರೇಯಸಿ ರಷೆಲ್ ಮೆಕ್‌ಲೆಲಾನ್ ಕ್ಯಾಥೊಲಿಕ್ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

PC: Instagram/Usman Khawaja

ಪಾಕಿಸ್ತಾನ ಸಂಜಾತ 31 ವರ್ಷದ ಉಸ್ಮಾನ್ ಖವಾಜ, ಮುಂದಿನ ತಿಂಗಳು (ಏಪ್ರಿಲ್) ರಷೆಲ್ ಅವರನ್ನು ಇಸ್ಲಾಂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಬ್ರಿಸ್ಬೇನ್ ಮೂಲದ ರಷೆಲ್ ಅವರಿಗೆ 22 ವರ್ಷ ವಯಸ್ಸು.

PC: Twitter/Rachel McLellan

ನಾನು ಭೇಟಿ ಮಾಡಿದ ಮೊದಲ ಮುಸ್ಲಿ ವ್ಯಕ್ತಿ ಉಸೀ(ಉಸ್ಮಾನ್ ಖವಾಜ). ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಆತನಿಂದಾಗಲೀ, ಆತನ ಕುಟುಂಬ ಸದಸ್ಯರಿಂದಾಗಲೀ ಯಾವುದೇ ಒತ್ತಡವಿರಲಿಲ್ಲ. ಇದು ಅವನಿಗೆ ತುಂಬಾ ಮುಖ್ಯ ಎಂದು ನನಗನ್ನಿಸಿತು.
– ರಷೆಲ್ ಮೆಕ್‌ಲೆಲಾನ್, ಉಸ್ಮಾನ್ ಖವಾಜ ಅವರ ಪ್ರೇಯಸಿ.

ಪಾಕಿಸ್ತಾನ ಮೂಲದ ಉಸ್ಮಾನ್ ಖವಾಜ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಆಡಿದ ಮೊದಲ ಮುಸ್ಲಿಂ ಆಟಗಾರ. ಪತ್ನಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ಬಗ್ಗೆ ಉಸ್ಮಾನ್ ಖವಾಜ ಪ್ರತಿಕ್ರಿಯಿಸಿದ್ದಾರೆ.

PC: Twitter/Usman Khawaja

ರಷೆಲ್ ತಲೆಗೆ ಬಂದೂಕು ಇಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರವಾಗು ಎಂದು ನಾನು ಆಕೆಗೆ ಹೇಳಿಲ್ಲ. ನೀನು ನಮ್ಮ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಬಯಸುತ್ತೇನೆ ಎಂದು ಹೇಳಿದ್ದೆ. ಆದರೆ ಅದಕ್ಕೆ ನನ್ನ ಒತ್ತಡವಿರಲಿಲ್ಲ. ಆ ಬಗ್ಗೆ ಆಕೆಯೇ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇಂತಹ ಸಂಗತಿಗಳು ಮನಸ್ಸಿನಿಂದ, ಹೃದಯದಿಂದ ಬರದಿದ್ದರೆ ಯಾವ ಪ್ರಯೋಜನವೂ ಇಲ್ಲ.
– ಉಸ್ಮಾನ್ ಖವಾಜ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ.

Related Articles