Tuesday, December 3, 2024

ಖೇಲೊ ಇಂಡಿಯಾ: ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

ಹೊಸದಿಲ್ಲಿ: ಇಲ್ಲಿನ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಮೊದಲ ಖೇಲೊ ಇಂಡಿಯಾ ಸ್ಕೂಲ್ ಗೇಮ್ ಚಾಂಪಿಯನ್ ನಲ್ಲಿ ಒಟ್ಟು 15 ಚಿನ್ನದ ಪದಕಗಳನ್ನು ಗೆದ್ದಿರುವ ಕರ್ನಾಟಕ ತಂಡ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಹೋರಾಟ ಮುಂದುವರಿಸಿದೆ.
20 ಚಿನ್ನದ ಪದಕಗಳನ್ನು ಗೆದ್ದಿರುವ ಹರಿಯಾಣ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿಕೊಂಡಿದೆ.

PC: Twitter/Khelo India

ವಾಲಿಬಾಲ್ ಹಾಗೂ ಕಬಡ್ಡಿಯಲ್ಲಿ ಅಗ್ರ ಸ್ಥಾನ ಗಳಿಸಿದ ದಿಲ್ಲಿ ತಂಡ 18 ಚಿನ್ನದ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿಯಿತು.
ಮಹಾರಾಷ್ಟ್ರ 16 ಪದಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ.
ಬಾಲಕಿಯರ ವಾಲಿಬಾಲ್ ನಲ್ಲಿ ಪದಕ ಗೆಲ್ಲುವ ಮೂಲಕ ಪಶ್ಚಿಮ ಬಂಗಾಳ ತಂಡ ಚಿನ್ನದ ಖಾತೆ ತೆರೆಯಿತು. ಶ್ರಭಾನಿ ದಾಸ್ 48ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಬಂಗಾಳ ತಂಡ ಒಂದೇ ದಿನದಲ್ಲಿ ಎರಡು ಚಿನ್ನ ಗೆದ್ದ ಸಾಧನೆ ಮಾಡಿತು.

Related Articles