Saturday, December 21, 2024

ಡೆಲ್ಲಿ ಗೌರವಕ್ಕಾಗಿ, ಚೆನ್ನೈ ಭದ್ರತೆಗಾಗಿ ಆಟ

ಡೆಲ್ಲಿ: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಡೈನಾಮೊಸ್ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ  ಗೆದ್ದು ಗೌರವ ಕಾಯ್ದುಕೊಳ್ಳುವುದಕ್ಕಾಗಿ ಚೆನ್ನೈ ಎಫ್‌ಸಿ ವಿರುದ್ಧ ಪಂದ್ಯವನ್ನಾಡಲಿದೆ.
ಈ ಪಂದ್ಯದಲ್ಲಿನ ಫಲಿತಾಂಶ ಡೆಲ್ಲಿ ತಂಡದ ಅದೃಷ್ಟವನ್ನು ಬದಲಾಯಿಸದು. ಆದರೆ ಚೆನ್ನೈ ತಂಡ ಗೆದ್ದರೆ ಅಗ್ರ ನಾಲ್ಕರಲ್ಲಿ ಭದ್ರವಾಗಿ ಉಳಿಯಲಿದೆ. ಒಂದು ವೇಳೆ ಚೆನ್ನೈ ಸೋತರೆ ಆ ತಂಡದ ಅಗ್ರ ನಾಲ್ಕರ ಸ್ಥಾನಕ್ಕೆ ಅಡ್ಡಿಯಾಗಲಿದೆ. ಏಕೆಂದರೆ  23ಅಂಕ ಗಳಿಸಿ ಮೂರನೇ ಸ್ಥಾನದಲ್ಲಿರುವ ಚೆನ್ನೈನ ಸ್ಥಾನವನ್ನು ಇತರ ತಂಡಗಳು ಆಕ್ರಮಿಸಿಕೊಳ್ಳಬಹುದು. ಆದರೆ ಜಯ ಎರಡನೇ ಸ್ಥಾನಕ್ಕೆ ಕೊಂಡೊಯ್ಯಲಿದೆ. ಸೋತರೂ ಮೂರನೇ ಸ್ಥಾನಕ್ಕೆ ಅಡ್ಡಿಯಾಗದು.
ಆಡಿರುವ 10 ಪಂದ್ಯಗಳಲ್ಲಿ ಕಾಕತಾಳೀಯವೆಂಬಂತೆ ಚೆನ್ನೈಯಿನ್ ಎಫ್‌ಸಿ ಒಂದು ಪಂದ್ಯ ಬಿಟ್ಟು ಇನ್ನೊಂದರಲ್ಲಿ ಜಯ ಕಂಡಿದೆ. ಹಿಂದಿನ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ ಸೋಲನುಭವಿಸಿರುವುದರಿಂದ ನಾಳೆ ಪಂದ್ಯದಲ್ಲಿ ಚೆನ್ನೈ ಗೆಲ್ಲುತ್ತದೆ ಎಂಬ ಲೆಕ್ಕಾಚಾರ. ಡೆಲ್ಲಿ ಡೈನಾಮೋಸ್ ಇದುವರೆಗೂ ಇಡೀ ಋತುವಿನಲ್ಲಿ ಗೆದ್ದಿರುವುದು ಕೇವಲ ಎರಡು ಪಂದ್ಯಗಳು ಮಾತ್ರ. ಆದ್ದರಿಂದ ಚೆನ್ನೈಯಿನ್ ಎಫ್‌ಸಿ ಗೆಲ್ಲುವ  ಫೇವರಿಟ್ ಎನಿಸಿಕೊಳ್ಳುವುದು ಸಹಜ.

Related Articles