Friday, November 22, 2024

ದೇವಧರ್ ಟ್ರೋಫಿ: ಸಮರ್ಥ್ ಶತಕಕ್ಕೆ ಸಿಗದ ಫಲ, ಕರ್ನಾಟಕ ರನ್ನರ್ಸ್ ಅಪ್

ಧರ್ಮಶಾಲಾ: ಬಲಿಷ್ಠ ಕರ್ನಾಟಕ ತಂಡ ದೇವಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ‘ಬಿ’ ತಂಡಕ್ಕೆ ಮಣಿಯುವ ಮೂಲಕ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ಕಳೆದ ವಾರ ಹೊಸದಿಲ್ಲಿಯಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಸೌರಾಷ್ಟ್ರ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದ ಕರ್ನಾಟಕ, ದೇವಧರ್ ಟ್ರೋಫಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿತು.
PC: Twitter/Karun Nair
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 6 ವಿಕೆಟ್‌ಗಳಿಂದ ಕರ್ನಾಟಕಕ್ಕೆ ಭಾರತ ‘ಬಿ’ ತಂಡಕ್ಕೆ ಮಣಿಯಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ, 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 279 ರನ್‌ಗಳನ್ನು ಕಲೆ ಹಾಕಿದರೆ, ಗುರಿ ಬೆನ್ನತ್ತಿದ ಭಾರತ ‘ಬಿ’ ತಂಡ 48.2 ಓವರ್‌ಗಳಲ್ಲಿ 4 ವಿಕೆಟ್‌ಗೆ 281 ರನ್ ಗಳಿಸಿ ವಿಜಯಶಾಲಿಯಾಗಿ ಹೊರ ಹೊಮ್ಮಿತು.
ಕರ್ನಾಟಕ ಪರ ಉದಯೋನ್ಮುಖ ಬ್ಯಾಟ್ಸ್‌ಮನ್ ಆರ್.ಸಮರ್ಥ್ ಗಳಿಸಿದ ಶತಕ ವ್ಯರ್ಥವಾಯಿತು. 120 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 107 ರನ್ ಗಳಿಸಿದ ಸಮರ್ಥ್, 5ನೇ ವಿಕೆಟ್‌ಗೆ ವಿಕೆಟ್ ಕೀಪರ್ ಸಿ.ಎಂ ಗೌತಮ್ (76 ರನ್) ಅವರೊಂದಿಗೆ 132 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಆದರೆ ಕೊನೆಯಲ್ಲಿ ಕರ್ನಾಟಕ ಸೋಲುವುದರೊಂದಿಗೆ ಸಮರ್ಥ್ ಶತಕ ವ್ಯರ್ಥವಾಯಿತು.
ಭಾರತ ‘ಬಿ’ ತಂಡದ ಪರ ಆರಂಭಿಕರಾದ ರುತುರಾಜ್ ಗಾಯಕ್ವಾಡ್(58 ರನ್) ಮತ್ತು ಅಭಿಮನ್ಯು ಈಶ್ವರನ್ ಅಭಿಮನ್ಯು ಈಶ್ವರನ್(69 ರನ್) ಮೊದಲ ವಿಕೆಟ್‌ಗೆ 84 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿತು. ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ನಾಯಕ ಶ್ರೇಯಸ್ ಅಯ್ಯರ್(61 ರನ್) ಮತ್ತು ಮನೋಜ್ ತಿವಾರಿ(ಅಜೇಯ 59 ರನ್) ತಂಡಕ್ಕೆ ಸುಲಭ ಜಯ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 279 ರನ್
ಮಯಾಂಕ್ ಅಗರ್ವಾಲ್ 14, ಕರುಣ್ ನಾಯರ್ 10, ಆರ್.ಸಮರ್ಥ್ 107, ಪವನ್ ದೇಶಪಾಂಡೆ 13, ಸಿ.ಎಂ ಗೌತಮ್ 76; ಉಮೇಶ್ ಯಾದವ್2/48, ಜಯಂತ್ ಯಾದವ್ 1/71, ಖಲೀಲ್ ಅಹ್ಮದ್ 3/49.
ಭಾರತ ‘ಬಿ’: 48.2 ಓವರ್‌ಗಳಲ್ಲಿ 4 ವಿಕೆಟ್‌ಗೆ 281 ರನ್
ರುತುರಾಜ್ ಗಾಯಕ್ವಾಡ್ 58, ಅಭಿಮನ್ಯು ಈಶ್ವರನ್ 69, ಶ್ರೇಯಸ್ ಅಯ್ಯರ್ 61, ಮನೋಜ್ ತಿವಾರಿ ಅಜೇಯ 59; ರೋನಿತ್ ಮೋರೆ 1/52, ಶ್ರೇಯಸ್ ಗೋಪಾಲ್ 2/55, ಸ್ಟುವರ್ಟ್ ಬಿನ್ನಿ 1/32.

Related Articles