Thursday, March 28, 2024

ಪತಿಯ ವಿರುದ್ಧವೇ ಮ್ಯಾಚ್ ಫಿಕ್ಸಿಂಗ್ ಆರೋಪ: ಶಮಿ ಪತ್ನಿಗೆ ಎಸಿಯು ಫುಲ್ ಡ್ರಿಲ್

ಕೋಲ್ಕತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವಿರುದ್ಧ ಪತ್ನಿ ಹಸೀನ್ ಜಹಾನ್ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಬಿಸಿಸಿಐ ತನಿಖೆ ಆರಂಭಿಸಿದೆ.
ಈ ಕುರಿತ ತನಿಖೆಗಾಗಿ ಬಿಸಿಸಿಐನ ಭ್ರಷ್ಟಾಚಾರ ವಿರೋ ಘಟಕ (ಎಸಿಯು)ದ ನಾಲ್ವರು ಸದಸ್ಯರ ತಂಡ ಶನಿವಾರವೇ ಕೋಲ್ಕತಾಗೆ ಆಗಮಿಸಿದೆ. ಲಾಲ್‌ಬಜಾರ್‌ನಲ್ಲಿರುವ ಕೋಲ್ಕತಾ ಪೊಲೀಸ್ ಮುಖ್ಯ ಕಚೇರಿಗೆ ಹಸೀನ್ ಜಹಾನ್ ಅವರನ್ನು ಸತತ 3 ಗಂಟೆಗಳ ಕಾಲ ಎಸಿಯು ತಂಡ ತನಿಖೆಗೆ ಒಳ ಪಡಿಸಿದೆ ಎಂದು ಕೋಲ್ಕತಾದ ಪೊಲೀಸ್ ಮೂಲಗಳು ತಿಳಿಸಿವೆ.

PC: Twitter/ABP News

ಮೊಹಮ್ಮದ್ ಶಮಿ ಅವರ ವಿರುದ್ಧ ಕೋಲ್ಕತಾದಲ್ಲಿ ಕೊಲೆ ಯತ್ನ, ಕಿರುಕುಳದ ಕೇಸ್ ದಾಖಲಿಸಿರುವ ಹಸೀನ್ ಜಹಾನ್, ಶಮಿ ಮ್ಯಾಚ್ ಫಿಕ್ಸಿಂಗ್‌ನಲ್ಲೂ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಲಂಡನ್ ಮೂಲದ ಮೊಹಮ್ಮದ್ ಭಾಯ್ ಎಂಬಾತನ ಸೂಚನೆಯಂತೆ ಶಮಿ ದುಬೈನಲ್ಲಿ ಪಾಕಿಸ್ತಾನ ಮೂಲದ ಅಲೀಶ್ಬಾ ಮಹಿಳೆಯಿಂದ ದುಡ್ಡು ಪಡೆದಿದ್ದು, ಇದಕ್ಕೆ ತಮ್ಮ ಬಳಿ ಸಾಕ್ಷಿ ಇದೆ ಎಂದು ಹಸೀನ್ ಆರೋಪಿಸಿದ್ದರು.
ಶಮಿ ಅವರ ವೈಯಕ್ತಿ ಜೀವನದಲ್ಲಿ ಕೇಳಿ ಬಂದಿರುವ ಆರೋಪಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಬಿಸಿಸಿಐ, ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಮಾತ್ರ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲಿಸಬೇಕೆಂದು ಮಾರ್ಚ್ 14ರಂದು ಎಸಿಯುಗೆ ಸೂಚಿಸಿತ್ತು. ಅದರಂತೆ ತನಿಖೆ ಆರಂಭವಾಗಿದೆ.

Related Articles