ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಭಾರತದ ಮಹಿಳಾ ಕ್ರಿಕೆಟ್ ತಾರೆಗಳ ಶ್ರಮಕ್ಕೆ ಬಿಸಿಸಿಐ ತಕ್ಕ ಫಲ ನೀಡಿದೆ.
ಇದೇ ಮೊದಲ ಬಾರಿ ಮಹಿಳಾ ತಾರೆಗಳನ್ನು ವಾರ್ಷಿಕ ಒಪ್ಪಂದ ಪಟ್ಟಿಗೆ ಬಿಸಿಸಿಐ ಸೇರಿಸಿದ್ದು, ಆಟಗಾರ್ತಿಯರನ್ನು ‘ಎ’, ‘ಬಿ’ ಮತ್ತು ‘ಸಿ’ ಗ್ರೇಡ್‌ಗಳನ್ನಾಗಿ ವಿಭಾಗಿಸಲಾಗಿದೆ. ‘ಎ’ ಗ್ರೇಡ್‌ನಲ್ಲಿರುವವರಿಗೆ 50 ಲಕ್ಷ ರೂ., ‘ಬಿ’ ಗ್ರೇಡ್‌ನಲ್ಲಿರುವವರಿಗೆ 30 ಲಕ್ಷ ರೂ. ಮತ್ತು ‘ಸಿ’ ಗ್ರೇಡ್‌ನಲ್ಲಿರುವವರಿಗೆ 10 ಲಕ್ಷ ರೂ.ಗಳನ್ನು ಬಿಸಿಸಿಐ ವಾರ್ಷಿಕವಾಗಿ ನೀಡಲಿದೆ.
ಭಾರತ ತಂಡದ ನಾಯಕಿ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ‘ಎ’ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಹೆಮ್ಮೆಯ ಆಟಗಾರ್ತಿಯರಾದ ವೇದಾ ಕೃಷ್ಣ ಮೂರ್ತಿ ರಾಜೇಶ್ವರಿ ಗಾಯಕ್ವಾಡ್ ಸಹಿತ ಪೂನಂ ಯಾದವ್, ಏಕ್ತಾ ಬಿಷ್ಟ್, ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ ‘ಬಿ’ ಗ್ರೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಎ’ ಗ್ರೇಡ್(50 ಲಕ್ಷ ರೂ.): ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ.
‘ಬಿ’ ಗ್ರೇಡ್(30 ಲಕ್ಷ ರೂ.): ವೇದಾ ಕೃಷ್ಣ ಮೂರ್ತಿ ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ಏಕ್ತಾ ಬಿಷ್ಟ್, ಶಿಖಾ ಪಾಂಡೆ, ದೀಪ್ತಿ ಶರ್ಮಾ.