ಮುಂಬೈ: ಕರ್ನಾಟಕದ ಕಿಶನ್ ಗಂಗೊಳ್ಳಿ ಮುಂಬೈನಲ್ಲಿ ನಡೆದ ಅಂಧರ ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಕಿಶನ್ ಸತತ 5ನೇ ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.
ಗುಜರಾತ್‌ನ ಅಶ್ವಿನ್ ಮಕ್ವಾನ 2ನೇ ಸ್ಥಾನ ಪಡೆದರೆ, ಒಡಿಶಾದ ಸೌಂದರ್ಯ ಕುಮಾರ್ ಪ್ರಧಾನ್ 3ನೇ ಸ್ಥಾನ ಪಡೆದಿದ್ದಾರೆ.
13 ಸುತ್ತುಗಳ ಅಂತ್ಯಕ್ಕೆ ಕಿಶನ್ ಗಂಗೊಳ್ಳಿ 10.5 ಅಂಕಗಳನ್ನು ಸಂಪಾದಿಸಿದರೆ, ಮಕ್ವಾನ 9.5 ಪಾಯಿಂಟ್ಸ್ ಹಾಗೂ ಸೌಂದರ್ಯ ಕುಮಾರ್ 9 ಅಂಕಗಳನ್ನು ಗಳಿಸಿದರು.