Friday, March 29, 2024

‘ವಿಶ್ವ ಮಹಿಳಾ ದಿನ’ಕ್ಕೆ ಅರ್ಥಪೂರ್ಣ ಸಂದೇಶ ಸಾರಿದ ವಿರಾಟ್ ಕೊಹ್ಲಿ

ಬೆಂಗಳೂರು: ಗುರುವಾರ ವಿಶ್ವ ಮಹಿಳಾ ದಿನ. ಈ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಗುಣಗಾನ ನಡೆಯುತ್ತಿದೆ. ಗಣ್ಯ ವ್ಯಕ್ತಿಗಳು ವಿಭಿನ್ನ, ವಿಶಿಷ್ಠ ರೀತಿಯಲ್ಲಿ ಮಹಿಳಾ ದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಇವರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಅರ್ಥಪೂರ್ಣವಾಗಿ ಮಹಿಳೆಯರಿಗೆ ಶುಭಾಶಯ ಕೋರಿದ್ದಾರೆ.
PC: Twitter/Virat Kohli
39 ಸೆಕೆಂಡ್‌ಗಳು ವೀಡಿಯೊ ಸಂದೇಶದಲ್ಲಿ ವಿರಾಟ್ ಕೊಹ್ಲಿ, ಪುರುಷ ಮತ್ತು ಮಹಿಳೆಯರು ಇನ್ನೂ ಸಮಾನರಾಗಿಲ್ಲ. ಸಮಾನರಾಗಿರಬೇಕೆಂಬುದು ನನ್ನ ಭಾವನೆ. ಲೈಂಗಿಕ ಕಿರುಕುಳ, ತಾರತಮ್ಯ, ಲಿಂಗ ತಾರತಮ್ಯ, ಮನೆಗಳಲ್ಲಿ ಹಿಂಸೆ, ಬೆದರಿಕೆ… ಹೀಗೆ ಮಹಿಳೆಯ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳ ಪಟ್ಟಿ ಸಾಗುತ್ತಲೇ ಇರುತ್ತದೆ. ಇವೆಲ್ಲದರ ನಡುವೆಯೂ ಜೀವನದ ಎಲ್ಲಾ ಹೆಜ್ಜೆಗಳಲ್ಲೂ ಮಹಿಳೆಯರು ಪುಟಿದೆದ್ದು ನಿಂತು ಮಿನುಗುತ್ತಿದ್ದಾರೆ. ಮಹಿಳೆಯರು ಪುರುಷರಿಗೆ ಖಂಡಿತಾ ಸಮಾನರಲ್ಲ. ಅದಕ್ಕಿಂತಲೂ ಉತ್ತಮರು. ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು,ಎಂದು ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರ ಈ ಅರ್ಥಪೂರ್ಣ ಟ್ವೀಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೊಹ್ಲಿ ಅವರ ವೀಡಿಯೊ ಸಂದೇಶವನ್ನು ಟ್ವಿಟರ್‌ನಲ್ಲಿ 30 ಸಾವಿರಕ್ಕೂ ಲೈಕ್ ಮಾಡಿದ್ದಾರೆ. ಅಲ್ಲದೆ 4 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ.

Related Articles