ಬೆಂಗಳೂರು: ಹರ್ಯಾಣದ ಪ್ರತಿಭಾವಂತ ಶೂಟರ್, ಮನು ಭೇಕರ್ ಮೆಕ್ಸಿಕೊ ಶೂಟಿಂಗ್ ವಿಶ್ವಕಪ್‌ನ ಮಹಿಳೆಯ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್(ಐಎಸ್‌ಎಸ್‌ಎಫ್) ಆಶ್ರಯದಲ್ಲಿ ನಡೆದ ಟೂರ್ನಿಯಲ್ಲಿ ಸ್ವರ್ಣ ಗೆದ್ದ ಮನು, ಭಾರತಕ್ಕೆ ಕೀರ್ತಿ ತಂದಿದ್ದಾರೆ.
16 ವರ್ಷದ ಮನು ಭೇಕರ್, ಅಕ್ಟೋಬರ್‌ನಲ್ಲಿ ನಡೆಯಲಿರುವ 2018ರ ಯುವ ಒಲಿಂಪಿಕ್ಸ್ ಗೇಮ್ಸ್‌ಗೆ ಇತ್ತೀಚೆಗಷ್ಟೇ ಅರ್ಹತೆ ಪಡೆದಿದ್ದರು. ಚಿನ್ನದ ಸಾಧನೆಯ ವೇಳೆ ಮನು ಒಟ್ಟಾರೆ 237.5 ಅಂಕಗಳನ್ನು ಕಲೆ ಹಾಕಿದರು.
ಸ್ವರ್ಣ ಗೆದ್ದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮನು ಭೇಕರ್ ‘ಚಿನ್ನ ಗೆದ್ದಿರುವುದು ಅತೀವ ಹರ್ಷ ತಂದಿದೆ. ಇದು ವಿಶ್ವಕಪ್‌ನಲ್ಲಿ ನನ್ನ ಮೊದಲ ಪದಕ. ಮುಂದಿನ ಸ್ಪರ್ಧೆಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರುವುದನ್ನು ಎದುರು ನೋಡುತ್ತಿದ್ದೇನೆ,’’ಎಂದಿದ್ದಾರೆ.