Tuesday, April 16, 2024

ಹಾಕಿ: ಸುಲ್ತಾನ್ ಅಜ್ಲಾನ್ ಶಾ ಕಪ್‌ಗೆ ಭಾರತದ ಸಂಭಾವ್ಯ ತಂಡ ಪ್ರಕಟ

PC: Twitter/Hockey India

ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿ ಸೇರಿದಂತೆ ಪ್ರಮುಖ ಟೂರ್ನಿಗಳಿಗೆ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂಬಂತೆ ಭಾರತದ 30 ಆಟಗಾರರ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ.

ಈ ಸಂಭಾವ್ಯ ತಂಡ ಭಾನುವಾರ(ಫೆಬ್ರವರಿ 11)ರಿಂದ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.
ಸುಲ್ತಾನ್ ಅಜ್ಲಾನ್ ಶಾ ಕಪ್ ಮಾರ್ಚ್ 3ರಿಂದ 10ರವರೆಗೆ ನಡೆಯಲಿದೆ. ಇದ್ದಾಗ ನಂತರ ಏಪ್ರಿಲ್‌ನಲ್ಲಿ ಭಾರತ ತಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಲಿದೆ. ಆಗಸ್ಟ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪಾಲ್ಗೊಳ್ಳಲಿದೆ. ಈ 3 ಪ್ರಮುಖ ಟೂರ್ನಿಗಳಿಗೆ ಸಜ್ಜಾಗುವ ನಿಟ್ಟಿನಲ್ಲಿ ಭಾರತ ತಂಡದ ರಾಷ್ಟ್ರೀಯ ಶಿಬಿರ ಆರಂಭವಾಗಲಿದೆ.
ಭಾರತ ಸಂಭಾವ್ಯ ಹಾಕಿ ತಂಡ: ಸೂರಜ್ ಕರ್ಕೆರ, ಆಕಾಶ್ ಚಿಕ್ಟೆ, ಪಿ.ಆರ್. ಶ್ರೀಜೇಶ್, ಕೃಷ್ಣನ್ ಪಾಠಕ್, ಹರ್ಮನ್‌ಪ್ರೀತ್ ಸಿಂಗ್, ದಿಪ್ಸಾನ್ ಟಿರ್ಕೆ, ವರುಣ್ ಕುಮಾರ್, ರೂಪಿಂದರ್ ಪಾಲ್ ಸಿಂಗ್, ಬಿರೇಂದ್ರ ಲಾಕ್ರಾ, ಅಮಿತ್ ರೋಹಿದಾಸ್, ಸುರೇಂದ್ರ ಕುಮಾರ್, ಗುರಿಂದರ್ ಸಿಂಗ್, ನೀಲಂ ಸಂಜೀಪ್, ಸರ್ದಾರ್ ಸಿಂಗ್‌ಮನ್‌ಪ್ರೀತ್ ಸಿಂಗ್, ಎಸ್.ಕೆ. ಉತ್ತಪ್ಪ, ಚಿಂಗ್ಲೆನ್ಸನ ಸಿಂಗ್, ಸುಮಿತ್, ಕೋತಾಜಿತ್ ಸಿಂಗ್, ಸತ್ಬೀರ್ ಸಿಂಗ್, ನೀಲಕಂಠ ಶರ್ಮಾ, ಸಿರ್ಮಂಜೀತ್ ಸಿಂಗ್, ಹರ್ಜೀತ್ ಸಿಂಗ್, ಎಸ್.ವಿ. ಸುನಿಲ್, ಆಕಾಶ್‌ದೀಪ್ ಸಿಂಗ್, ಮಂದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ರಮಣ್‌ದೀಪ್ ಸಿಂಗ್, ಅರ್ಮಾನ್ ಖುರೇಶಿ, ಆಫಾನ್ ಯೂಸಫ್, ಗುರ್ಜಂತ್ ಸಿಂಗ್, , ಸುಮಿತ್ ಕುಮಾರ್, ತಲ್ವಿಂದರ್ ಸಿಂಗ್.

Related Articles