ಕ್ರಿಕೆಟ್‌ನಲ್ಲಿ 1 ಎಸೆತಕ್ಕೆ 286 ರನ್ ಗಳಿಸಲು ಸಾಧ್ಯವೇ? ಹಾಗೆ ಸಾಧ್ಯವಾದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪಾಕ್ ತಂಡವನ್ನು ಟ್ರೋಲ್ ಮಾಡಲಾಗುತ್ತಿದೆ. In one ball batsman earned 286 run Pakistan trolled.
ಅಂದ ಹಾಗೆ 1 ಎಸೆತಕ್ಕೆ 286 ರನ್ ಗಳಿಸಲು ಸಾಧ್ಯವೇ? ಅದು ಸಾಧ್ಯವಾಗಿದೆ ಎನ್ನುತ್ತಿದೆ ಕ್ರಿಕೆಟ್ ಇತಿಹಾಸ. ಒಂದು ಎಸೆತದಲ್ಲಿ ಹೆಚ್ಚೆಂದರೆ 4 ರನ್ ಓಡಬಹುದು, ಒಂದು ಎಸೆತದಲ್ಲಿ 7 ರನ್ ಗಳಿಸಬಹುದು. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯವೊಂದರಲ್ಲಿ ಬ್ಯಾಟ್ಸ್‌ಮನ್ ಒಂದು ಎಸೆತಕ್ಕೆ 286 ರನ್ ಗಳಿಸಿದ್ದು ಈಗ ವಿಶ್ವಕಪ್ ವೇಳೆ ಮತ್ತೆ ಸುದ್ದಿಯಾಗುತ್ತಿದೆ. ಲಂಡನ್‌ನ ಪಾಲ್ ಮಾಲ್ ಗ್ಯಾಜೆಟ್ ಎಂಬ ಪತ್ರಿಕೆ 1865ರಲ್ಲಿ ಈ ಸುದ್ದಿಯನ್ನು ವರದಿ ಮಾಡಿದೆ ಎಂದು ದಾಖಲೆಗಳು ಹೇಳುತ್ತಿವೆ. ಈ ಪ್ರತ್ರಿಕೆ, 1894, ಜನವರಿ 15ರಂದು ಮಾಡಿರುವ ಪರಿಷ್ಕೃತ ವರದಿ ಪ್ರಕಾರ, ವೆಸ್ಟರ್ನ್ ಆಸ್ಟ್ರೇಲಿಯಾದ ಬನ್‌ಬರೀ ಎಂಬಲ್ಲಿ ವಿಕ್ಟೋರಿಯಾ ಹಾಗೂ ಸ್ಥಳೀಯ ಆಟಗಾರರನ್ನೊಳಗೊಂಡ ತಂಡಗಳ ನಡುವೆ ಪಂದ್ಯ ನಡೆಸಲು ತೀರ್ಮಾನಿಸಲಾಯಿತು. ವಿಕ್ಟೋರಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಎಸೆದ ಮೊದಲ ಎಸೆತವೇ ಬ್ಯಾಟ್ಸ್‌ಮನ್ ಹೊಡೆದ ಹೊಡೆತಕ್ಕೆ ಕ್ರೀಡಾಂಣದಲ್ಲೇ ಇರುವ ಮರವೊಂದರ ರೆಂಬೆಗಳ ನಡುವೆ ಸಿಕ್ಕಿಹಾಕಿಕೊಂಡಿತು. ಕೂಡಲೇ ಸ್ಥಳೀಯ ತಂಡ ಚೆಂಡು ಕಳೆದು ಹೋಗಿದೆ ಎಂದು ಮನವಿ ಮಾಡಿತು. ಆದರೆ ಅಂಪೈರ್‌ಗೆ ಚೆಂಡು ಬಿದ್ದ ಜಾಗ ಕಾಣಿಸುತ್ತಿರುವುದರಿಂದ ಚೆಂಡು ಕಳೆದು ಹೋಗಿದೆ ಎಂಬ ಮನವಿಗೆ ಪುರಸ್ಕಾರ ನೀಡಲಿಲ್ಲ. ಈ ನಡುವೆ ಬ್ಯಾಟ್ಸ್‌ಮನ್ ಓಡುತ್ತಲೇ ಇದ್ದಾರೆ.
ಈ ನಡುವೆ ವ್ಯಕ್ತಿಯೊಬ್ಬರು ರೈಫಲ್‌ನಿಂದ ಗುರಿ ಇಟ್ಟು ಚೆಂಡನ್ನು ಉರುಳಿಸುವ ಪ್ರಯತ್ನ ನಡೆಸಿದರು. ದಾಂಡಿಗರು ಓಡುತ್ತಲೇ ಇದ್ದಾರೆ. ಅಂತಿಮವಾಗಿ ಚೆಂಡನ್ನು ಧರೆಗುರುಳಿಸಲಾಯಿತು. ಈ ಸಂದರ್ಭದಲ್ಲಿ ಕ್ಯಾಚ್ ಕಬಳಿಸುವ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಬ್ಯಾಟ್ಸ್‌ಮನ್ ಒಂದೇ ಎಸೆತದಲ್ಲಿ 286 ರನ್ ಓಡಿ ವಿಶ್ವದಾಖಲೆ ನಿರ್ಮಿಸಿದ್ದರು. ಈ ಘಟನೆ ನಡೆದಿಯೋ ಇಲ್ಲವೋ ಎನ್ನುವುದ ದಾಖಲೆಗಳಿಲ್ಲ. ಇದೊಂದು ಕಾಲ್ಪಕನಿಕ ಕತೆ ಎಂದೂ ಹೇಳುವವರಿದ್ದಾರೆ. ಆಸ್ಟ್ರೇಲಿಯಾದ ಕೆಲವು ಮಾಧ್ಯಮಗಳು ಇದನ್ನು ಇದನ್ನು ಕಟ್ಟಕತೆ ಎಂದಿವೆ. ಇದು ಕಟ್ಟು ಕತೆಯೋ, ವಾಸ್ತವವೋ ಬೇರೆ ವಿಷಯ ಆದರೆ ಆಧುನಿಕ ಜಗತ್ತಿನಲ್ಲಿ ಪಾಕಿಸ್ತಾನ ತಂಡವನ್ನು ಟ್ರೋಲ್ ಮಾಡಲು ವಿಷಯವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸೆಮಿಫೈನಲ್ ತಲುಪಲು ಸ್ಪಷ್ಟ ಯೋಜನೆ ಇದೆ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಾಮ್ ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.