ಗೋವಾ: ಅಮೆರಿಕದಲ್ಲಿ ನೆಲೆಸಿರುವ ಮೈಸೂರಿನ ಚೆಸ್ ಆಟಗಾರ್ತಿ ಕಾವ್ಯಶ್ರೀ ಮಲ್ಲಣ್ಣ ತಾವು ಕಟ್ಟಿ ಬೆಳೆಸಿರುವ ಚೆಸ್ ಅಕಾಡೆಮಿ ಸೆಲೆಸ್ಟಿಯಲ್ ಮೈಂಡ್ಸ್ Celestial Minds ಸಂಸ್ಥೆಯ 20ನೇ ವಾರ್ಷಿಕೋತ್ಸವವನ್ನು ಇತ್ತೀಚಿಗೆ ಗೋವಾದಲ್ಲಿ ಆಚರಿಸಿದರು. 20th anniversary event of America’s well known chess school Celestial Minds recently held in Goa.
ಸೆಂಟೆನರಿ ಚೆಸ್ ಕ್ಲಬ್ ಹಾಗೂ ಮರ್ಮಗೋವಾ ತಾಲೂಕು ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಕಿಶೋರ್ ಬೆಂಡೆಕರ್ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರು. ಮೊದಲ ದಿನದಲ್ಲೇ ಆರು ರಾಜ್ಯಗಳಿಂದ 200ಕ್ಕೂ ಹೆಚ್ಚು ಆಟಗಾರರು ಪಾಲ್ಗೊಂಡಿದ್ದರು. ಇಂಟರ್‌ನ್ಯಾಷನಲ್ ಮಾಸ್ಟರ್ಸ್, ಫಿಡೆ ಮಾಸ್ಟರ್ಸ್, ಕ್ಯಾಂಡಿಡೆಟ್ಸ್ ಚೆಸ್ ಮಾಸ್ಟರ್ಸ್,ರಾಜ್ಯ ಮಾಜಿ ಚಾಂಪಿಯನ್ನರು, ವಿಭಿನ್ನ ವಯೋಮಿತಿಯ ಆಟಗಾರರು ಪಾಲ್ಗೊಂಡಿದ್ದರು. ಗೋವಾದ ರಾಷ್ಟ್ರೀಯ ಆಟಗಾರ್ತಿ ಐಎಂ ಭಕ್ತಿ ಕುಲಕರ್ಣಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಮಾಹಾರಾಷ್ಟ್ರದ ಐಎಂ ಸಮ್ಮದ್ ಜಯ್‌ಕುಮಾರ್ ಪ್ರಥಮ ಸ್ಥಾನ ಗಳಿಸಿದರೆ, ಮಧ್ಯಪ್ರದೇಶದ ಎಫ್‌ಎಂ ಆಯುಷ್ ಶರ್ಮಾ ದ್ವಿತೀಯ ಹಾಗೂ ಮಾಹಾರಾಷ್ಟ್ರದ ಎಫ್‌ಎಂ ವಾಘ್ ಸುಯೋಗ್ ತೃತೀಯ ಸ್ಥಾನ ಗಳಿಸಿದರು. ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದು, ಅವರೆಲ್ಲರಿಗೂ ತಾನು ಚಿರಋಣಿ ಎಂದು ಸೆಲೆಸ್ಟಲ್ ಮೈಡ್ಸ್‌ನ ಸ್ಥಾಪಕಿ ಕಾವ್ಯಶ್ರೀ ಮಲ್ಲಣ್ಣ ಹೇಳಿದ್ದಾರೆ.
ಕಾರ್ಯಕ್ರಮದ ಯಶಸ್ಸಿನಲ್ಲಿ ಕಿಶೋರ್ ಮಂಗೇಶ್ ಬಾಂಡೇಕರ್ ಅವರ ಪಾತ್ರ ಪ್ರಮುಖವಾಗಿತ್ತು. ಪ್ರತಿಯೊಂದು ವಿಭಾಗದಲ್ಲೂ ಅವರ ಪ್ರೋತ್ಸಾಹ ಅವಿಸ್ಮರಣೀಯ. ಹೊರ ರಾಜ್ಯಗಳಿಂದ ಬಂದ ಚೆಸ್ ಆಟಗಾರರಿಗೆ ಪ್ರತಿಯೊಂದು ರೀತಿಯಲ್ಲೂ ನೆರವು ನೀಡಿದರು. ಆಟಗಾರರಿಗೆ ಉಚಿತ ಊಟ ವ್ಯವಸ್ಥೆ ಮಾಡಿರುವುದಲ್ಲದೆ, ಮಕ್ಕಳ ಪೋಷಕರ ಆರೈಕೆಯನ್ನೂ ಮಾಡಿದರು. ಈ ಕ್ರೀಡಾ ಹಬ್ಬ ಯಶಸ್ಸು ಕಾಣಲು ವಿಜಯ ಚೌಗಲೆ, ಅಂತಾರಾಷ್ಟ್ರೀಯ ತೀರ್ಪುಗಾರ ಸಂಜರ್ ಕಾವೆಲ್ಕರ್, ಅವಿಜಿತ್ ರೇ, ರಾಜೀವ್ ಅರೋಂಡೆಕರ್ ಅವರ ಕೊಡುಗೆ ಅಪಾರ. ಗೋವಾ ಕ್ರೀಡಾ ಪ್ರಾಧಿಕಾರ (SGA) ಹಾಗೂ ಗೋವಾ ರಾಜ್ಯ ಚೆಸ್ ಅಸೋಸಿಯೇಷನ್ (GCA) ಹಾಗೂ ಅಖಿಲ ಭಾರತ ಚೆಸ್ ಸಂಸ್ಥೆ (AICF) ಪ್ರೋತ್ಸಾಹ ಪ್ರಮುಖವಾಗಿತ್ತು.
ಉಳಿದಂತೆ ಮುಕುಂದ್ ಕಾಂಬ್ಳಿ, ಪುಷ್ಪಶೀಲ್ ಸತಾಡ್ಕರ್, ಪುಂಡಲೀಕ್, ಅನಿಲ್, ದೀಪಕ್ ಗವಾಸ್, ಅನೀಶ್, ಮೈತ್ರಿ, ತೀರ್ಪುಗಾರ ತಾನಿಷ್ಕ್ ಕಾವ್ಲೆಕರ್, ಪ್ರೆಟ್ಟಿ ಮೆಂಡೀಸ್, ಸಚಿಂದ್ರ ನಾಯ್ಕ್, ರಾಜ್ಯ ಚೆಸ್ ಚಾಂಪಿಯನ್ ಮೈಸೂರಿನ ಎನ್.ಸಂಜಯ್ ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಶ್ರಮಿಸಿದ್ದಾರೆ.