ಉತ್ತರಾಖಂಡ್ : ಉತ್ತರಾಖಂಡ್ನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಎರಡನೇ ದಿನದಲ್ಲಿ ಕರ್ನಾಟಕ ತಂಡ ಒಟ್ಟು 12 ಪದಕಗಳನ್ನು ಗೆದ್ದು ಅಗ್ರ ಸ್ಥಾನ ಕಾಯ್ದುಕೊಂಡಿದೆ. 38th National Games Karnataka top in Medal Tally on Day 2.
ಈಜಿನಲ್ಲಿ 6 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿರುವುದು ಕರ್ನಾಟಕ ಅಗ್ರ ಸ್ಥಾನ ಕಾಯ್ದುಕೊಳ್ಳಲು ಸಾಧ್ಯವಾಯಿತು. ಮೊದಲ ದಿನದಲ್ಲಿ ಒಟ್ಟು 7 ಪದಕಗಳನ್ನು ಗೆದ್ದಿದ್ದ ಕರ್ನಾಟಕ ಎರಡನೇ ದಿನದಲ್ಲಿ ಅದೇ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. 4×100 ಮೀ ಮೆಡ್ಲೇ ರಿಲೇಯಲ್ಲಿ ಪುರುಷರ ತಂಡ ಚಿನ್ನ ಗೆದ್ದರೆ ವನಿತೆಯರ ತಂಡ ಕಂಚಿಗೆ ತೃಪ್ತಿಪಟ್ಟಿತು.
ಪುರುಷರ 40 ಕಿಮೀ ರೋಡ್ ಸೈಕ್ಲಿಂಗ್ನಲ್ಲಿ ಕರ್ನಾಟಕದ ನವೀನ್ ಥಾಮಸ್ ಜಾನ್ ಚಿನ್ನದ ಪದಕ ಗೆದ್ದರು. ವನಿತೆಯರ ವಿಭಾಗದಲ್ಲಿ ರಾಜ್ಯದ ಮೇಘಾ ಗೊಗದ್ ಅವರು ಕಂಚಿನ ಪದಕ ಗೆದ್ದರು. ಕರ್ನಾಟಕ ಒಟ್ಟಾರೆ ಎರಡನೇ ದಿನದಂತ್ಯಕ್ಕೆ 7 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದು ಅಗ್ರ ಸ್ಥಾನದಲ್ಲಿದೆ.