ಮುಂಬಯಿ: ವಿಶ್ವಕಪ್ ಸೆಮಿಫೈನಲ್ ತಲುಪಿರುವ ನಾಯಕರುಗಳ ಜೆರ್ಸಿ ನಂಬರ್ ಗಮನಿಸಿದಾಗ ಅಲ್ಲೊಂದು ಅಚ್ಚರಿ ಇದೆ. ಈ ಎಲ್ಲ ನಾಯಕರ ಜೆರ್ಸಿ ನಂಬರ್‌ನಲ್ಲಿರುವ ಅಂಕೆಗಳನ್ನು ಕೂಡಿಸಿದರೆ ಬರುವುದು 18, ಇದು ವಿರಾಟ್ ಅಭಿಮಾನಿಗಳಿಗೆ ಹೆಮ್ಮೆ ತರುವಂಥ ಸಂಗತಿ. 4+5+2+2+1+1+3+0= 18 that is Virat Kohli jersey number.
ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ತಲುಪಿವೆ. ಬಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಜೆರ್ಸಿ ಸಂಖ್ಯೆ 45, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಯಮ್ಸನ್ ಅವರ ಜೆರ್ಸಿ ಸಂಖ್ಯೆ 22, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ಜೆರ್ಸಿ ಸಂಖ್ಯೆ 30, ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರ ಜೆರ್ಸಿ ಸಂಖ್ಯೆ 11. ಅಂದರೆ 4+5+2+2+1+1+3+0= 18.
ವಿರಾಟ್ ಕೊಹ್ಲಿಯ ಜೆರ್ಸಿ ನಂಬರ್ 18 ಯಾಕೆ ಎಂಬ ವಿಷಯ ಕ್ರಿಕೆಟ್ ಜಗತ್ತಿಗೇ ಗೊತ್ತಿದೆ. 2008 ರ ಆಗಸ್ಟ್ 18 ರಂದು ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ಈ ಕಾರಣಕ್ಕಾಗಿ ಜೆರ್ಸಿ ನಂಬರ್ 18 ಎಂದು ಹೆಸರಿಸಲು ಒಂದು ಕಾರಣ. ಇನ್ನೊಂದು ಪ್ರಮುಕ ಕಾರಣ 2006ರ ಡಿಸೆಂಬರ್ 18 ರಂದು ವಿರಾಟ್ ಕೊಹ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಅವರು ನಿಧನರಾದದ್ದು 2006 ಡಿಸೆಂಬರ್ 18 ರಂದು. ಈ ಕಾರಣಕ್ಕಾಗಿ ಜೆರ್ಸಿ ನಂಬರ್ 18 ತನ್ನ ಬದುಕಿಗೆ ಅವಿಸ್ಮರಣೀಯ ನಂಬರ್ ಆಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅಲ್ಲಿ ಧರಿಸುವುದೂ 18 ನಂಬರ್ ಜೆರ್ಸಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತೃಾಷ್ಟ್ರೀಯ ಪಂದ್ಯವಿರಲಿ ಅಥವಾ ಐಪಿಎಲ್ ಪಂದ್ಯವಿರಲಿ ವಿರಾಟ್ ಅಭಿಮಾನಿಗಳು ಧರಿಸುವುದು 18 ನಂಬರಿನ ಜರ್ಸಿಯನ್ನೇ.