Wednesday, December 4, 2024

ಡಿಸೆಂಬರ್‌ 6 ತಪ್ಪದೇ ಬನ್ನಿ ತಗ್ಗರ್ಸೆ ಕಂಬಳಕ್ಕೆ

ಬೈಂದೂರು: ಬೈಂದೂರು ತಾಲೂಕಿನ ತಗ್ಗರ್ಸೆಯಲ್ಲಿ ಡಿಸೆಂಬರ್‌ 6 ರಂದು ಇತಿಹಾಸ ಪ್ರಸಿದ್ಧ ತಗ್ಗರ್ಸೆ ಹೆಗ್ಡೆಯವರ ಮನೆಯ ಕಂಬಳ ಗದ್ದೆಯಲ್ಲಿ ನಡೆಯಲಿರುವ ಕಂಬಳ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. Historical Thaggarse Hegde family Kambala on December 6th Friday.

ತಗ್ಗರ್ಸೆ ಹೆಗ್ಡೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒಂದಾಗಿ ನಡೆಸುವ ಈ ಆನುವಂಶಿಕ ಕಂಬಳದ ಕೋಳಗಳ ಓಟವು ಸ್ಥಳೀಯ ಕಂಬಳ ಗದ್ದೆಯ ಸಾಂಪ್ರದಾಯಿಕ ಕಂಬಳದ ನಿಯಮಗಳಿಗೆ ಅನುಗುಣವಾಗಿ ನಡೆಸಲಾಗುವುದು, ಜೊತೆಯಲ್ಲಿ ಸರಕಾರ ಮತ್ತು ಸಮಿತಿ ನಿಯಮಗಳಿಗನುಸಾರವಾಗಿ ಕಂಬಳ ನಡೆಯುತ್ತದೆ ಎಂದು ಸಂಘಟಕರು ತಿಳಿಸಿರುತ್ತಾರೆ.

ತಗ್ಗರ್ಸೆಯ ಮೂಕಾಂಬಿಕಾ ಗೇರುಬೀಜ ಕಾರ್ಖಾನೆಯವರು ಈ ಬಾರಿಯ ವಿಜೇತ ಕೋಣಗಳಿಗೆ ನಗದು ಬಹುಮಾನವನ್ನು ನೀಡಲಿದ್ದಾರೆ.

ವಿಭಾಗಗಳು: ಹಲಗೆ ವಿಭಾಗ, ಹಗ್ಗ ವಿಭಾಗ ಹಿರಿಯ, ಹಗ್ಗ ವಿಭಾಗ ಕಿರಿಯ (ಎ), ಹಗ್ಗ ವಿಭಾಗ ಕಿರಿಯ (ಬಿ) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿಯೊಂದು ವಿಭಾಗಕ್ಕೂ ಪ್ರಥಮ ಹಾಗೂ ದ್ವಿತೀಯ ನಗದು ಬಹುಮಾನವಿರುತ್ತದೆ. ಕೋಣಗಳನ್ನು ಓಡಿಸುವವರಿಗೂ ಮತ್ತು ಕೋಣಗಳನ್ನು ಉತ್ತಮ ರೀತಿಯಲ್ಲಿ ಶ್ರಂಗಾರ ಮಾಡಿ ತಂದವರಿಗೂ ಬಹುಮಾನವಿರುತ್ತದೆ.

ಬಹುಮಾನಗಳು:  

ಹಲಗೆ ವಿಭಾಗ: ಪ್ರಥಮ ಬಹುಮಾನ – ರೂ.12,006 ಮತ್ತು ಫಲಕ, ದ್ವಿತೀಯ ಬಹುಮಾನ 10,008 ಮತ್ತು ಫಲಕ.

ಹಗ್ಗ ವಿಭಾಗ ಹಿರಿಯ: ಪ್ರಥಮ ಬಹುಮಾನ-ರೂ.12,006 ಮತ್ತು ಫಲಕ, ದ್ವಿತೀಯ ಬಹುಮಾನ 10,008 ಮತ್ತು ಫಲಕ.

ಹಗ್ಗ ವಿಭಾಗ ಕಿರಿಯ (ಎ): ಪ್ರಥಮ ಬಹುಮಾನ ರೂ. 8,001 ಮತ್ತು ಫಲಕ, ದ್ವಿತೀಯ ಬಹುಮಾನ- ರೂ. 7,002 ಮತ್ತು ಫಲಕ.

ಹಗ್ಗ ವಿಭಾಗ ಕಿರಿಯ (ಬಿ): ಪ್ರಥಮ ಬಹುಮಾನ ರೂ. 8,001 ಮತ್ತು ಫಲಕ, ದ್ವಿತೀಯ ಬಹುಮಾನ- ರೂ. 7,002 ಮತ್ತು ಫಲಕ.

ಕೋಣಗಳನ್ನು ಓಡಿಸುವವರಿಗೆ ಬಹುಮಾನ: ಹಗ್ಗ ವಿಭಾಗ- ಪ್ರಥಮ ಬಹುಮಾನ ರೂ. 1,008, ದ್ವಿತೀಯ ಬಹುಮಾನ ರೂ. 504.

ಹಗ್ಗ ವಿಭಾಗ ಹಿರಿಯ: ಪ್ರಥಮ ಬಹುಮಾನ ರೂ. 1,008, ದ್ವಿತೀಯ ಬಹುಮಾನ ರೂ. 504.

ಹಗ್ಗ ವಿಭಾಗ ಕಿರಿಯ (ಎ): ಪ್ರಥಮ ಬಹುಮಾನ ರೂ. 1,008, ದ್ವಿತೀಯ ಬಹುಮಾನ ರೂ. 504.

ಉತ್ತಮ ವೇಷಭೂಷಣಗಳೊಂದಿಗೆ ಅತಿ ಹೆಚ್ಚು ಕೋಣಗಳನ್ನು ತಂದವರಿಗೆ ರೂ. 1,107 ಬಹುಮಾನವಿರುತ್ತದೆ.

Related Articles