Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಶತಕ ವೀರ ಸಂಜು ಸ್ಯಾಮ್ಸನ್‌ಗೆ ಕೇರಳ ತಂಡದಲ್ಲೇ ಸ್ಥಾನವಿಲ್ಲ!

ಬೆಂಗಳೂರು: ಕ್ರೀಡೆ ಯಾವುದೇ ಇರಲಿ, ಎಷ್ಟೇ ಸಾಧನೆ ಮಾಡಿರಲಿ, ಶಿಸ್ತು ಇಲ್ಲವೆಂದರೆ ಆ ಆಟಗಾರನಿಗೆ ಮನೆಯಲ್ಲೇ ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಆಟಗಾರ ಕೇರಳದ ಸಂಜು ಸ್ಯಾಮ್ಸನ್‌ ಉತ್ತಮ ನಿದರ್ಶನ. Sanju Samson dropped from Kerala Vijay Hazare Trophy team.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಶತಕ ಸಿಡಿಸಿ ದಾಖಲೆ ಬರೆದಿದ್ದ ಸಂಜು ಸ್ಯಾಮ್ಸನ್‌ ತಾಯ್ನಾಡಿಗೆ ಹಿಂದಿರುಗಿದ ನಂತರ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಕೇರಳ ತಂಡದ ನಾಯಕತ್ವ ವಹಿಸಿ ಉತ್ತಮವಾಗಿ ಆಡಿದ್ದರು. ಆದರೂ ವಿಜಯ ಹಜಾರೆ ಟ್ರೋಫಿಯಿಂದ ಕೇರಳ ಕ್ರಿಕೆಟ್‌ ಸಂಸ್ಥೆಯ ಆಯ್ಕೆ ಸಮಿತಿ ಸ್ಯಾಮ್ಸನ್‌ ಅವರನ್ನು ಕೈಬಿಟ್ಟಿದೆ.

ಇದು ಎಲ್ಲರಿಗೂ ಅಚ್ಚರಿ ತರುವಂಥ ಸಂಗತಿ. ಇಷ್ಟೊಳ್ಳೆ ಆಡುತ್ತಿದ್ದ ಸಂಜು ಸ್ಯಾಮ್ಸನ್‌ ಅವರನ್ನು ತಂಡದಿಂದ ಕೈ ಬಿಡಲು ಕಾರಣವಾದರೂ ಏನು? ಕಾರಣ ಏನೂ ಇಲ್ಲ .. ಅಶಿಸ್ತು.

ವಯನಾಡಿನಲ್ಲಿ ಕೇರಳ ರಾಜ್ಯ ಕ್ರಿಕೆಟ್‌ ಸಂಸ್ಥೆ ಸಂಭಾವ್ಯ ಆಟಗಾರರನ್ನು ಪಟ್ಟಿ ಮಾಡಿ ಅವರಿಗೆ ಶಿಬಿರವನ್ನು ಹಮ್ಮಿಕೊಂಡಿತ್ತು. ಸಂಭಾವ್ಯರ ಪಟ್ಟಿಯಲ್ಲಿದ್ದವರು ಆಯ್ಕೆ ಟ್ರಯಲ್ಸ್‌ಗೆ ಹಾಜರಾಗುವುದು ಕಡ್ಡಾಯ. ಆತ ಅಂತಾರಾಷ್ಟ್ರೀಯ ಆಟಗಾರನಿದ್ದರೂ ಅಲ್ಲಿ ಹಾಜರಿರಬೇಕು. ಆದರೆ ವಯನಾಡಿನಲ್ಲಿ ನಡೆದ ಶಿಬಿರದಲ್ಲಿ ಸಂಜು ಸ್ಯಾಮ್ಸನ್‌ ಪಾಲ್ಗೊಂಡಿರಲಿಲ್ಲ. ಇದರಿಂದ ಆಯ್ಕೆ ಸಮಿತಿ ಅಂತಿಮ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್‌ ಅವರ ಹೆಸರನ್ನು ಬಿಟ್ಟು ತಂಡವನ್ನು ಪ್ರಕಟಿಸಿದೆ.

ಕೇರಳ ರಾಜ್ಯ ಕ್ರಿಕೆಟ್‌ ಸಂಸ್ಥೆ ಮೂಲಗಳ ಪ್ರಕಾರ ತರಬೇತಿ ಶಿಬಿರಕ್ಕೆ ಬಂದಿಲ್ಲ ಎಂಬುದು ಒಂದು ಕಾರಣವಾದರೆ, ಸ್ವತಃ ಸ್ಯಾಮ್ಸನ್‌ ಅವರೇ ಟೂರ್ನಿಯಿಂದ ಹೊರಗಿರಲು ನಿರ್ಧರಿಸಿದ್ದಾರೆ ಎಂಬುದು ಮಾಧ್ಯಮಗಳು ಹೇಳುತ್ತಿರುವ ಮತ್ತೊಂದು ಕಾರಣ. ದೇಶದ ಎಲ್ಲ ಆಟಗಾರರು ಅಭ್ಯಾಸದ ದೃಷ್ಟಿಯಿಂದ ಪಂದ್ಯಗಳನ್ನಾಡುವ ತವದಕಲ್ಲಿದ್ದರೆ ಸ್ಯಾಮ್ಸನ್‌ ಟೂರ್ನಿಯಿಂದ ಹೊರಗುಳಿಯಲು ಬಯಸಿದ್ದು ಅಚ್ಚರಿಯ ಸಂಗತಿ.

ಇದು ಸಂಜು ಅಭಿಮಾನಿಗಳಿಗೆ ಅಚ್ಚರಿ ಎನಿಸಬಹುದು, ಆದರೆ ನೈಜ ಕ್ರೀಡಾಪಟುಗಳ ಪಾಲಿಗೆ ಇದು ಸೂಕ್ತ ಕ್ರಮ ಎಂದೆನಿಸುವುದು ಸಹಜ. ಇತ್ತೀಚಿಗೆ ಸಂಜು ಸ್ಯಾಮ್ಸನ್‌ ಅವರ ತಂದೆ ವಿಶ್ವನಾಥ್‌ ಸ್ಯಾಮ್ಸನ್‌ ,”ನನ್ನ ಮಗನ 10 ವರ್ಷಗಳ ಕ್ರಿಕೆಟ್‌ ಬದುಕನ್ನು ಹಾಳುಗೆಡವಿದ್ದು, ಧೋನಿ, ರೋಹಿತ್‌ ಶರ್ಮಾ ಹಾಗೂ ರಾಹುಲ್‌ ದ್ರಾವಿಡ್‌,” ಎಂದು ಹೇಳಿಕೆ ನೀಡಿದ್ದು ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ವಿಜಯ ಹಜಾರೆ ಟ್ರೋಫಿ ಕೇರಳ ತಂಡದಲ್ಲಿ ಇನ್ನೋರ್ವ ಅನುಭವಿ ಆಟಗಾರ ಸಚಿನ್‌ ಬೇಬಿಗೂ ಅವಕಾಶ ನೀಡಲಿಲ್ಲ.


administrator