Sunday, December 22, 2024

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್‌ ವಿದಾಯ

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. Ravichandran Ashwin announces retirement from International cricket.

ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುತ್ತಿದ್ದಂತೆ ಅಶ್ವಿನ್‌ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿಯನ್ನು ಈ ಕೂಡಲೇ ಅನ್ವಯವಾಗುವಂತೆ ಪ್ರಕಟಿಸಿದರು.  106 ಟೆಸ್ಟ್‌ ಪಂದ್ಯಗಳನ್ನಾಡಿರುವ ಅಶ್ವಿನ್‌ 537 ವಿಕೆಟ್‌ ಗಳಿಸಿರುತ್ತಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್‌ ಗಳಿಸಿದ ಎರಡನೇ ಆಟಗಾರ. ಅನಿಲ್‌ ಕುಂಬ್ಳೆ 619 ವಿಕೆಟ್‌ ಗಳಿಸಿರುತ್ತಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಲ್ರೌಂಡರ್‌ ಆಗಿ ಆಡಿರುವ ಅಶ್ವಿನ್‌ 3503 ರನ್‌ ಗಳಿಸಿರುತ್ತಾರೆ. ಅದರಲ್ಲಿ ಆರು ಶತಕ ಹಾಗೂ 14 ಅರ್ಧ ಶತಕ ಸೇರಿದೆ.

Related Articles