Friday, January 10, 2025

ಮೀನು ಹಿಡಿಯಲು ಹೋಗಿ ಬದುಕಿನ ಪಾಠ ಕಲಿತ ನಡಾಲ್‌

ಇತ್ತೀಚಿಗೆ ಟೆನಿಸ್‌ಗೆ ವಿದಾಯ ಹೇಳಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಅವೇ ಬರೆದ ಲೇಖನವೊಂದನ್ನು ಓದುತ್ತಿದ್ದೆ. ಅವರು ಚಿಕ್ಕಂದಿನಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತ, ಮೀನು ಹಿಡಿಯುವ ಬಗ್ಗೆಯೂ ಬರೆದಿದ್ದರು. ಟೆನಿಸ್‌ ಅಭ್ಯಾಸ ಬಿಟ್ಟು ಸಮುದ್ರಕ್ಕೆ ಮೀನು ಹಿಡಿಯಲು ಹೋಗಿ ಪಂದ್ಯದಲ್ಲಿ ಸೋತು, ಆ ದಿನವೇ ಬದುಕಿನ ಪಾಠ ಕಲಿತದ್ದನ್ನು ನಡಾಲ್‌ ಅವರೇ ನಿವೃತ್ತಿಯ ನಂತರ ಹೇಳಿಕೊಂಡಿದ್ದಾರೆ. “ಆಗ ನನಗೆ ಎಷ್ಟು ವಯಸ್ಸು ಎಂಬುದು ಸರಿಯಾಗಿ ಗೊತ್ತಿಲ್ಲ. ಆದರೆ 12 ವರ್ಷ ವಯಸ್ಸಾಗಿರಬಹುದು ಎಂಬ ನಂಬಿಕೆ. ಆ ವಯಸಿನಲ್ಲಿ ನನಗೆ ಮೀನು ಹಿಡಿಯುವದೆಂದರೆ ಬಹಳ ಇಷ್ಟ. ನನಗೆ ಸಮುದ್ರವೆಂದರೆ ಪಂಚ ಪ್ರಾಣ. ಏಕೆಂದರೆ ನಾನು ಮಲ್ಲೋರಿಯಾದಿಂದ ಬಂದವನು.  Rafael Nadal loved Fishing, loved Sea because he is from Mallorca.

“ಸಮುದ್ರ ನನ್ನ ಬದುಕಿನ ಭಾಗವಾಗಿದೆ. ಸಮುದ್ರದ ಜೊತೆ ಬದುಕುವುದೆಂದದರೆ ಅದೊಂದು ಅದ್ಭುತ ಅನುಭವ. ಒಂದು ದಿನ ಟೆನಿಸ್‌ ತರಬೇತಿ ಮಾಡುವ ಬದಲು ಮೀನು ಹಿಡಿಯಲು ಹೋಗಿದ್ದೆ, ಮರುದಿನ ಪಂದ್ಯದಲ್ಲಿ ಸೋಲನುಭವಿಸಿದೆ. ಮನೆಗೆ ಬರುವಾಗ ಕಾರಿನಲ್ಲಿ ಸೋಲನ್ನು ನೆನೆದು ಅಳತೊಡಗಿದೆ. ನನಗೆ ಟೆನಿಸ್‌ನಲ್ಲಿ ಅಪಾರರ ಪ್ರೀತಿ ಹೆಚ್ಚಲು ನನ್ನ ಚಿಕ್ಕಪ್ಪ ಕಾರಣ. ಅವರು ನನ್ನ ಮೇಲೆ ಅಪಾರ ಪ್ರಭಾವ ಬೀರಿದ ವ್ಯಕ್ತಿ. “ಇರಲಿ, ಅದನ್ನು ಬಿಟ್ಟು ಬಿಡು. ಅದು ಕೇವಲ ಒಂದು ಟೆನಿಸ್‌ ಪಂದ್ಯ. ಈಗ ಅಳಬೇಡ, ಈಗ ಅಳುವುದರಲ್ಲಿ ಅರ್ಥವಿಲ್ಲ, ನೀನು ಮೀನು ಹಿಡಿಯುವುದಾದರೆ ಮೀನು ಹಿಡಿ, ಯಾವುದೇ ಅಭ್ಯಂತರ ಇಲ್ಲ. ಸಮಸ್ಯೆಯೂ ಇಲ್ಲ. ಮೀನು ಹಿಡಿಯುತ್ತಿರು, ನೀನು ಸೋಲುವೆ. ನೀನು ಗೆಲ್ಲಬೇಕಾದರೆ ನೀನು ಮೊದಲು ಯಾವುದನ್ನು ಮಾಡಬೇಕೋ ಅದನ್ನು ಮೊದಲು ಮಾಡು,” ಎಂದರು. ಅವರ ಆಡಿದ ಮಾತು ನನ್ನ ಮೇಲೆ ಅಪಾರ ಪರಿಣಾಮ ಬೀರಿತು. ಅದರಿಂದ ನಾನು ಬದುಕಿನಲ್ಲಿ ದೊಡ್ಡ ಪಾಠ ಕಲಿತೆ. ಇಂದು ಜನರು ನನ್ನನ್ನು ಪರಿಪೂರ್ಣತಾವಾದಿ ಎಂದು ಗುರುತಿಸುತ್ತಿದ್ದರೆ ಅದಕ್ಕೆ ಅಂದು ನನ್ನ ಚಿಕ್ಕಪ್ಪ ಕಾರ್‌ ರೈಡ್‌ ಮಾಡುವಾಗ ಹೇಳಿದ ಮಾತೇ ಕಾರಣ. ಅದು ನನ್ನ ಅಂತರಾಳದಲ್ಲಿ ಇಂದಿಗೂ ಮಾರ್ಧನಿಸುತ್ತಿದೆ. ಆ ನುಡಿ ಇಂದಿಗೂ ನನ್ನ ಬದುಕಿನ ಭಾಗವಾಗಿದೆ. “ಒಂದು ದಿನ ನಾನು ಸಮುದ್ರದಲ್ಲಿ ಇರಬಹುದು, ಇಂದು ಮತ್ತು ನಾಳೆ ನಾನು ಅಭ್ಯಾಸ ಮಾಡಲೇಬೇಕು.”

ರಾಫೆಲ್‌ ನಡಾಲ್‌ ಚಿಕ್ಕಂದಿನಲ್ಲಿ ಕಲಿತ ಪಾಠವನ್ನು ಮರೆತಿಲ್ಲ. ಚಿಕ್ಕಪ್ಪನ ಮಾತಿಗೆ ಬೆಲೆಕೊಟ್ಟು ಟೆನಿಸ್‌ ಅಭ್ಯಾಸ ಮಾಡುತ್ತ, ಮೀನು ಹಿಡಿಯುತ್ತ ಜಗತ್ತಿನ ಶ್ರೇಷ್ಠ ಟೆನಿಸ್‌ ತಾರೆ ಎನಿಸಿದರು. 22 ಗ್ರ್ಯಾನ್‌ ಸ್ಲ್ಯಾಮ್‌ ಪ್ರಶಸ್ತಿ ಗೆದ್ದಿರುವ ನಡಾಲ್‌ ತಂದೆಯವರೊಂದಿಗೆ ಮೀನು ಹಿಡಿಯುತ್ತಿದ್ದ ಬೋಟನ್ನು ಇಂದಿಗೂ ಕಾಯ್ದುಕೊಂಡಿದ್ದಾರೆ ಮಾತ್ರವಲ್ಲ, ಸುಮಾರು 80 ಕೋಟಿ ರೂ. ಬೆಲೆಯ ಐಶಾರಾಮಿ ಬೋಟನ್ನು ಖರೀದಿಸಿದ್ದಾರೆ. ಸುಮಾರು 5000 ಕೋಟಿ ಬೆಲೆಬಾಳುವ ನಡಾಲ್‌ ಈಗ ಮತ್ತೆ ಕಡಲಿನ ಜೊತೆ ಬಂಧ ಬೆಳೆಸಿದ್ದಾರೆ. ಆದರೆ ಈಗ ಐಶಾರಾಮಿ ಹಡಗಿನಲ್ಲಿ.

Related Articles