Sunday, December 22, 2024

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1) ಚಾಂಪಿಯನ್‌

ಬೆಂಗಳೂರು: ಆಲೂರು (1) ಅಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸೋಷಿಯಲ್‌ ಕ್ರಿಕೆಟರ್ಸ್‌ ವಿರುದ್ಧ 24 ರನ್‌ ಅಂತರದಲ್ಲಿ ಜಯ ಗಳಿಸಿದ ಸ್ವಸ್ತಿಕ್‌ ಯೂನಿಯನ್‌ (1) ತಂಡ ಕೆಎಸ್‌ಸಿಎ ಗ್ರೂಪ್‌ I-I ಮತ್ತು III ಡಿವಿಜನ್‌ 14 ವರ್ಷ ವಯೋಮಿತಿಯ ಅಂತರ್‌ ಕ್ಲಬ್‌ ಟೂರ್ನಮೆಂಟ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Swastik Union Cricket Club (1) KSCA U14 Inter Club Champion.

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌‌ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿತ್ತು,ಇದಕ್ಕೆ ಉತ್ತರವಾಗಿ ಸೋಷಿಯಲ್‌ ಕ್ರಿಕೆಟರ್ಸ್‌ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 258 ರನ್‌ ಗಳಿಸಿ 24 ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌‌ ಕ್ಲಬ್‌ ಪರ ನಿತೀಶ್‌ ಆರ್ಯ 160 ರನ್‌ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ನಿತೀಶ್‌ 140 ಎಸೆತಗಳನ್ನೆದುರಿಸಿ 18 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ ಅಬ್ಬರದ ಆಟವಾಡಿದರು. ಸಮರ್ಥ್‌ ಸುರೇಶ್‌ 44 ಹಾಗೂ ರೋಹಿತ್‌ ರೆಡ್ಡಿ 46 ರನ್‌ ಗಳಿಸುವುದರೊಂದಿಗೆ ತಂಡ 282 ರನ್‌ ಗಳಿಸಿತು.

283 ರನ್‌ ಜಯದ ಗುರಿ ಹೊತ್ತ ಸೋಷಿಯಲ್‌ ಕ್ರಿಕೆಟರ್ಸ್‌ ಪರ ರಾಫಾ ಪೂಣಚ ಬಲ್ಲಚಂಡ 81 ರನ್‌ ಗಳಿಸಿದರು. 78 ಎಸೆತಗಳನ್ನೆದುರಿಸಿದ ರಾಫಾ ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು. ನರಸಿಂಹ ಅಜೇಯ 61 ರನ್‌ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ನರಸಿಂಹ 46 ಎಸೆತಗಳನ್ನೆದುರಿಸಿ ಆಡಿದ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಸೇರಿತ್ತು. ತನ್ಷ್‌ ಕೃಷ್ಣ 33 ಮತ್ತು ಆದ್ಯೋತ್‌ ಪಾಂಡೆ 21 ರನ್‌ ಗಳಿಸಿದರು. ಸ್ವಸ್ತಿಕ್‌ ಯೂನಿಯನ್‌ ಪರ ವೆಹಾನ್‌ ಪ್ರಭಾಕರ್‌ 55 ರನ್‌ಗೆ 2 ವಿಕೆಟ್‌ ಗಳಿಸಿದರು.

Related Articles