Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸುನಾಮಿಯ ಸಾವಿನ ಅಲೆ ದಾಟಿ ಬಂದ ಚಾಂಪಿಯನ್‌ ದೆಬೋರ

2004ರ ಡಿಸೆಂಬರ್‌ 26ರಂದು ಸಂಭವಿಸಿದ ಸುನಾಮಿ 20 ವರುಷಗಳನ್ನು ನೆನಪಿಸಿ ಹೋಯಿತು. 2,27,898 ಜೀವಗಳು ಆ ದೈತ್ಯ ಅಲೆಗಳಿಗೆ ಸಿಲುಕಿ ಮರೆಯಾದವು, ಮನೆಗಳು ಕೊಚ್ಚಿ ಹೋದವು, ಮರ, ಗಿಡ ಪ್ರಾಣಿ ಪಕ್ಷಿಗಳ ಸಾವನ್ನು ಲೆಕ್ಕ ಇಟ್ಟವರಿಲ್ಲ. ತಮಿಳುನಾಡಿನಲ್ಲೇ ಸಾವಿರಾರು ಮಂದಿ ಜೀವ ಕಳೆದುಕೊಂಡರು. ಅಂಡಮಾನ್‌ ನಿಕೋಬಾರ್‌ನಲ್ಲಿ ಸುಮಾರು 7000 ಜನರು ಅಸುನೀಗಿದರು. ಈ ಅಂಡಮಾನ್‌ ನಿಕೋಬಾರ್‌ನಲ್ಲಿ ಬದುಕಿ ಉಳಿದ ಬುಡಕಟ್ಟು ಬಾಲಕಿಯೊಬ್ಬಳು ಸೈಕ್ಲಿಂಗ್‌ನಲ್ಲಿ ಏಷ್ಯನ್‌ ಚಾಂಪಿಯನ್‌ ಆಗುತ್ತಾಳೆ…. ಆಕೆಯೇ ದೆಬೋರಾ ಹೆರಾಲ್ಡ್‌. 20 years of Indian Ocean Tsunami, we got champion Deborah Herold.

2004ರ ಡಿಸೆಂಬರ್‌ 26ರಂದು ಅಂಡಮಾನ್‌ ನಿಕೋಬಾರ್‌ಗೆ ಸುನಾಮಿ ಅಲೆಗಳು ಅಪ್ಪಳಿಸಿದಾಗ ದೆಬೋರಾ 9 ವರ್ಷದ ಬಾಲಕಿ. ತಾಯಿ ಎಬ್ಬಿಸಿದ್ದು ಮಾತ್ರ ಆಕೆಗೆ ಗೊತ್ತಿತ್ತು, ಮತ್ತೆ ಎಚ್ಚೆತ್ತಾಗ ಕಾರ್‌ ನಿಕೋಬಾರ್‌ ದ್ವೀಪದ ಮರವೊಂದರಲ್ಲಿ ಸಿಲುಕಿಕೊಂಡಿದ್ದಳು. ದೆಬೋರ ಅವರ ತಂದೆ ಅಂಡಮಾನ್‌ ನಿಕೋಬಾರ್‌ನಲ್ಲಿ ನೌಕಾಪಡೆಯ ಉದ್ಯೋಗಿ. ಮಗಳನ್ನು ಹುಡುಕಿ ಹುಡುಕಿ ಕೊನೆಯಲ್ಲಿ ಕೈ ಚೆಲ್ಲಿದರು. ಸುಮಾರು 7000 ಜನರೇ ಆ ದ್ವೀಪ ಸಮೂಹದಲ್ಲಿ ಶವವಾಗಿ ತೇಲುತ್ತಿರುವಾಗ ತನ್ನ ಮಗಳೆಲ್ಲಿ ಬದುಕಲು ಸಾಧ್ಯವೆಂದು ದೆಬೋರ ಅವರ ತಂದೆ ನೋವಿನಲ್ಲೇ ದಿನ ಕಳೆದರು.

ಆದರೆ ವಿಧಿ ಲಿಖಿತ ಬೇರೆಯೇ ಆಗಿತ್ತು. ಸುಮಾರು ಐದು ದಿನಗಳ ಕಾಲ ಮರದಲ್ಲೇ ಇದ್ದು, ಅಲ್ಲಿಯ ಸೊಪ್ಪು ತೊಗಟೆಗಳನ್ನು ತಿಂದು ಬದುಕಿದ್ದ ದೆಬೋರಳನ್ನು ಯಾರೋ ಗಮನಿಸಿ ದಡಕ್ಕೆ ತರುತ್ತಾರೆ. ಸೈಕ್ಲಿಂಗ್‌ ಬಗ್ಗೆ ಅರಿವೆಯೇ ಇಲ್ಲದ ದೆಬೊರ ಟೀವಿಗಳಲ್ಲಿ ಸೈಕ್ಲಿಂಗ್‌ ನೋಡಿಕೊಂಡು ಆಸಕ್ತಿ ಬೆಳೆಸಿಕೊಳ್ಳುತ್ತಾಳೆ. ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುವ ಅವಕಾಶ ಸಿಗುತ್ತದೆ. ಇದಕ್ಕಾಗಿ ನಿಕೋಬಾರ್‌ ದ್ವೀಪ ತೊರೆದು ದೆಹಲಿಗೆ ಬಂದು ವಾಸಿಸುತ್ತಾಳೆ.  2014ರ ಏಷ್ಯಾ ಕಪ್‌ನಲ್ಲಿ ಸ್ಪರ್ಧಿಸಿದ ದೆಬೋರ ಎರಡು ಚಿನ್ನದ ಪದಕಗಳನ್ನು ಗೆದ್ದು ಅಚ್ಚರಿ ಮೂಡಿಸುತ್ತಾರೆ. ಏಷ್ಯನ್‌ ಹಾಗೂ ಇತರ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಮಿಂಚಿದ ದೆಬೋರ ವಿಶ್ವ ರಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತದ ಮೊದಲ ಸೈಕ್ಲಿಸ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸುನಾಮಿಯ ಅಳುವಿನ ಸಾಗರದಲ್ಲಿ ತೇಲಿ ಬಂದ ನಗೆಯ ಹಾಯಿದೋಣಿ ದೆಬೋರ ಇಂದು ಜಗತ್ತಿನ ಸಾಧಕರಿಗೆ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಾರೆ. ದೆಬೋರ ಈಗ ಅಂಡಮಾನ್‌ ನಿಕೋಬಾರ್‌ ಪೊಲೀಸ್‌ ಇಲಾಖೆಯಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


administrator