ಮೊದಲ ಪಂದ್ಯದಲ್ಲೇ ಅಭಿಲಾಷ್ ಶೆಟ್ಟಿ 5 ಸ್ಟಾರ್
ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲೇ ಕರಾವಳಿಯ ವೇಗದ ಬೌಲರ್ ಅಭಿಲಾಷ್ ಶೆಟ್ಟಿ 5 ವಿಕೆಟ್ ಸಾಧನೆ ಮಾಡುವ ಮೂಲಕ ಕರ್ನಾಟಕ ತಂಡ ಪಂಜಾಬ್ ವಿರುದ್ಧ 1 ವಿಕೆಟ್ ಜಯ ಗಳಿಸಿದೆ. Abhilash Shetty took 5 wickets Karnataka won the match against Punjab.
ಲಿಸ್ಟ್ ಎ ಕ್ರಿಕೆಟ್‌ಗೆ ಕಾಲಿಟ್ಟ ಅಭಿಲಾಷ್ ಶೆಟ್ಟಿ ಗುರುವಾರ ಪಂಜಾಬ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 44 ರನ್‌ಗೆ 5 ವಿಕೆಟ್ ಗಳಿಸಿ ಕರ್ನಾಟಕದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 49.2 ಓವರ್‌ಗಳಲ್ಲಿ 247 ರನ್‌ಗೆ ಆಲೌಟ್ ಆಗಿತ್ತು. ಮೊದಲ ಲಿಸ್ಟ್ ಎ ಪಂದ್ಯವನ್ನಾಡಿದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗಿಳಿಯಾರಿನ ಅಭಿಲಾ಼ ಶೆಟ್ಟಿ 10 ಓವರ್‌ಗಳಲ್ಲಿ ಕೇವಲ 44 ರನ್ ನೀಡಿ 5 ಅಮೂಲ್ಯ ವಿಕೆಟ್ ಗಳಿಸಿದರು.
ನಾಯಕ ಮಯಾಂಕ್ ಅಗರ್ವಾಲ್ ಅಜೇಯ 139 ರನ್ ಗಳಿಸುವುದರೊಂದಿಗೆ ಕರ್ನಾಟಕ ತಂಡ 47.3 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು.