ಫುಟ್ಬಾಲ್‌ಗೆ ಜೀವ ತುಂಬುವ ಬೈಂದೂರು ಯುವಕರು
ಕ್ರಿಕೆಟ್‌ನ ಅಬ್ಬರದಲ್ಲಿ ಇತರ ಕ್ರೀಡೆಗಳು ಮೂಲೆಗುಂಪಾಗುತ್ತಿವೆ ಎಂಬ ಕೂಗು ಕೇಳಿಬರುತ್ತಿರುವುದು ಸಹಜ. ಅದಕ್ಕೆ ಪೂರಕವಾಗಿ ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಪಂದ್ಯಗಳು ನಿರಂತರವಾಗಿ ನಡೆಯುತ್ತಿವೆ ವಿನಃ ಇತರ ಕ್ರೀಡಾ ಚಟುವಟಿಕೆಗಳು ವಿರಳ. ಆದರೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯುವಕರು ಫುಟ್ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಹೊನಲು ಬೆಳಕಿನ ಫುಟ್ಬಾಲ್ ಟೂರ್ನಿಯನ್ನು ಆಯೋಜಿಸುತ್ತಿದ್ದಾರೆ. ಈ ಬಾರಿ ಜನವರಿ 25 ರಂದು ತಿರುಮಲ ಟ್ರೋಫಿ ಹೊನಲು ಬೆಳಕಿನ ಫುಟ್ಬಾಲ್ ಟೂರ್ನಿ ಜನವರಿ 25 ರಂದು ಬೈಂದೂರಿನಲ್ಲಿ ನಡೆಯಲಿದೆ. Tirumala Football Club organizing Tirumala Trophy flood light football tourney on January 25th 2025.
ಬೈಂದೂರಿನ ತಗ್ಗರ್ಸೆಯಲ್ಲಿರುವ ತಿರುಮಲ ಫುಟ್ಬಾಲ್ ಕ್ಲಬ್ ಈ ಟೂರ್ನಿಯನ್ನು ಆಯೋಜಿಸಿದೆ. ಕ್ಲಬ್‌ನ ಪ್ರಮೋದ್ ಪೂಜಾರಿ, ರಾಘವೇಂದ್ರ ಪೂಜಾರಿ ಮತ್ತು ಮಹೇಂದ್ರ ಆಚಾರ್ಯ ಅವರೇ ಈ ಟೂರ್ನಿಯ ರೂವಾರಿಗಳು. ಈ www.sportsmail.net ಜೊತೆ ಮಾತನಾಡಿದ ಮಹೇಂದ್ರ ಆಚಾರ್ಯ, “ಕಾಲೇಜು ದಿನಗಳಿಂದಲೂ ಫುಟ್ಬಾಲ್ ಆಡುತ್ತಿದ್ದೆ, ಕನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವಾಗಲೂ ಫುಟ್ಬಾಲ್ ಆಡಿದ್ದೆ. ಈ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರೂ ಫುಟ್ಬಾಲ್ ಕ್ರೀಡೆಯನ್ನು ಜೀವಂತವಾಗಿಸಿಕೊಳ್ಳಬೇಕೆಂಬ ಹಂಬಲ, ಅದಕ್ಕಾಗಿಯೇ ಸಮಾನ ಮನಸ್ಕರಾದ ನಾವು ತಿರುಮಲ ಫುಟ್ಬಾಲ್ ಕ್ಲಬ್ ಸ್ಥಾಪಿಸಿದೆವು. ಕಳೆದ ಮೂರು ವರ್ಷಗಳಿಂದ ಟೂರ್ನಿಯನ್ನು ನಡೆಸುತ್ತಿದ್ದೇವೆ, ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ. 25-30 ತಂಡಗಳು ಪಾಲ್ಗೊಳ್ಳುತ್ತಿವೆ. ಜೂನಿಯರ್ ಮತ್ತು ಸಬ್ ಜೂನಿಯರ್ ಮಕ್ಕಳಿಗೂ ಅವಕಾಶ ನೀಡುತ್ತಿದ್ದೇವೆ. ಶಿವಮೊಗ್ಗ ಮತ್ತು ಭಟ್ಕಳ, ಉಡುಪಿ ಸೇರಿದಂತೆ ಕರಾವಳಿಯ ಪ್ರಮುಖ ತಂಡಗಳು ಪಾಲ್ಗೊಳ್ಳುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಫುಟ್ಬಾಲ್ ಉಳಿಯಬೇಕೆಂಬುದು ನಮ್ಮ ಉದ್ದೇಶ,ʼ ಎಂದು ಹೇಳಿದ್ದಾರೆ. ಪ್ರಮೋದ್ ಆಚಾರ್ಯ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರೂ ಫುಟ್ಬಾಲ್‌ಗಾಗಿ ಅವರ ಮನ ಮಿಡಿಯುತ್ತಿರುವುದು ಗಮನಾರ್ಹ. ಇದಕ್ಕೆ ತಗಲುವ ವೆಚ್ಚವನ್ನು ಕೂಡ ಈ ಗೆಳೆಯರೇ ಭರಿಸುತ್ತಿರುವುದು ಮತ್ತೊಂದು ವಿಶೇಷ.
25,555 ರೂ, ನಗದು ಬಹುಮಾನ: ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಯಸುವ ತಂಡಗಳು ಜನವರಿ 20ರ ಒಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. 2,500 ರೂ. ಪ್ರವೇಶ ಶುಲ್ಕವಿರುತ್ತದೆ. ಮೊದಲ ಬಹುಮಾನ ಗೆಲ್ಲುವ ತಂಡಕ್ಕೆ 25,555 ರೂ, ನಗದು ಬಹುಮಾನ ಹಾಗೂ ರನ್ನರ್‌ಅಪ್ ತಂಡಕ್ಕೆ 15, 555 ರೂ. ನಗದು ಬಹುಮಾನ ಸಿಗಲಿದೆ. ಹೆಚ್ಚಿನ ವಿವರಗಳಿಗೆ 8217662065 ಕರೆ ಮಾಡಿ, wats app 9742179341
ರಾಜ್ಯ ಫುಟ್ಬಾಲ್ ಸಂಸ್ಥೆಯ ಗಮನಕ್ಕೆ: ಫುಟ್ಬಾಲ್ ಕ್ರೀಡೆ ಬರೇ ಬೆಂಗಳೂರಿಗೆ ಸೀಮಿತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾನ್ವೇಷಣೆಯ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ. ಬೆಂಗಳೂರಿನ ಕ್ಲಬ್‌ಗಳಾದರೂ ಈ ಕೆಲಸವನ್ನು ಮಾಡಬಹುದು, ಆದರೆ ಅವರಿಗೆ ಅಲ್ಲಿರುವ ಮಕ್ಕಳೇ ಸಾಕಗುತ್ತಿರುಬಹುದು. ಕರ್ನಾಟಕದ ಜೂನಿಯರ್ ಮತ್ತು ಸೀನಿಯರ್ ತಂಡಗಳನ್ನು ನೋಡಿದಾಗ ನಮ್ಮ ಗ್ರಾಮೀಣ ಭಾಗದ ಆಟಗಾರರು ಕಾಣಸಿಗುವುದಿಲ್ಲ. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಇನ್ನಾದರೂ ಎಚ್ಚೆತ್ತುಕೊಂಡು ಈ ರೀತಿಯ ಟೂರ್ನಿಯಗಳನ್ನು ಆಯೋಜಿಸುವುದು ಅಥವಾ ಆಯೋಜಿಸುವವರಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನಾದರೂ ಮಾಡಬೇಕು.
ನಮ್ಮ ಕ್ರೀಡಾ ಚಾನೆಲ್‌ಗೆ subscribe ಆಗಿ