Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಖೇಲೋ ಇಂಡಿಯಾ ಫುಟ್ಬಾಲ್‌: ಉಡುಪಿಗೆ ಮೂರನೇ ಸ್ಥಾನ

ಉಡುಪಿ: ಮಂಗಳೂರಿನ ಮರೆನಾ ಕ್ರೀಡಾಂಗಣದಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ 17 ವರ್ಷ ವಯೋಮಿತಿಯ ಬಾಲಕಿಯರ ಫುಟ್ಬಾಲ್‌ ಟೂರ್ನಮೆಂಟ್‌ನಲ್ಲಿ ಉಡುಪಿಯ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಮೂರನೇ ಸ್ಥಾನ ಗಳಿಸಿದೆ. Asmita Khelo India Football tourney Udupi District got third place.

2024ರ ಡಿಸೆಂಬರ್‌ 30 ರಿಂದ ಜನವರಿ 9, 2025ರ ವರೆಗೆ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು. ಸೇಂಟ್‌ ಜೊಸೆಫ್‌ ಬಜಪೆ, ಸ್ಪೋರ್ಟಿಂಗ್‌ ಮಂಗಳೂರು, ಜಾಯ್‌ಲ್ಯಾಂಡ್‌ ಕೊಯ್ಲಾ, ಮಣಿಪಾಲ್‌ ಸ್ಕೂಲ್‌ ಮಂಗಳೂರು, ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಉಡುಪಿ XI, ಪಾಂಡ್ಯಾರಾಜ ಬಲ್ಲಾಳ್‌ ಉಳ್ಳಾಲ್‌ ಭಾಗವಹಿಸಿದ ತಂಡಗಳು.

ಟೂರ್ನಿಯಲ್ಲಿ ಉಡುಪಿ ತಂಡದ ಮೃಣಾಲಿನಿ ಉತ್ತಮ ಆಟಗಾರ್ತಿ ಗೌರವಕ್ಕೆ ಪಾತ್ರರಾದರು. ಪ್ರತಿಯೊಂದು ತಂಡಗಳು ತಲಾ 10 ಪಂದ್ಯಗಳನ್ನು ಆಡಿದ್ದವು.ಉಡುಪಿ ತಂಡವು 4 ಜಯ, 3 ಡ್ರಾ ಹಾಗೂ 2 ಸೋಲಿನೊಂದಿಗೆ ಒಟ್ಟು 15 ಅಂಕಗಳನ್ನು ಗಳಿಸಿತ್ತು. ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ತಂಡದಲ್ಲಿ ನಿಟ್ಟೆ ಹೈಸ್ಕೂಲ್‌ ನಿಟ್ಟೆ, ಜೇಸೀಸ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಕಾರ್ಕಳ, ಸೇಂಟ್‌ ಜಾನ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌‌ ಶಂಕರಪುರ ಶಾಲೆಯ ವಿದ್ಯಾರ್ಥಿನಿಯರು ಸೇರಿದ್ದರು. ಮಣಿಪಾಲದಲ್ಲಿರುವ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಯಲ್ಲಿ ಆ ಆಟಗಾರ್ತಿಯರು ತರಬೇತಿ ಪಡಿದಿರುತ್ತಾರೆ. ಪ್ರಧಾನ ಕೋಚ್‌‌ ಮಿಲನ ಹಾಗೂ ಸುರೇಶ್‌ ಶೆಟ್ಟಿ ತಂಡವನ್ನು ಮುನ್ನಡೆಸಿದ್ದರು. ಸಹಾಯಕ ಕೋಚ್‌ ಆಗಿ ಪೂರ್ಣವಿ ಸನಿಲ್‌ ಕಾರ್ಯನಿರ್ವಹಿಸಿದ್ದರು. ತಂಡದ ತಾಂತ್ರಿಕ ಪ್ರಮುಖರಾಗಿ ಕ್ಲೈವ್‌ ಮಸ್ಕರೆನ್ಹಾಸ್‌ ಅವರು ಕಾರ್ಯನಿರ್ವಹಿಸಿದ್ದರು.

ಉಡುಪಿ ಜಿಲ್ಲೆಯಲ್ಲಿ ಪ್ರೋತ್ಸಾಹದ ಕೊರತೆ: ಉಡುಪಿ ಜಿಲ್ಲೆಯಲ್ಲಿ ಫುಟ್ಬಾಲ್‌ ಆಡುವ ಆಸಕ್ತರು ಇದ್ದರೂ ಇಲ್ಲಿಯ ಜಿಲ್ಲಾಡಳಿತ ಯಾವುದೇ ರೀತಿಯ ಪ್ರೋತ್ಸಾಹವನ್ನು ನೀಡುತ್ತಿಲ್ಲ. ಫುಟ್ಬಾಲ್‌ ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಯಾವುದೇ ರೀತಿಯ ಮೂಲಭೂತ ಸೌಕರ್ಯವಿಲ್ಲ. ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಯು ಜಿಲ್ಲೆಯಲ್ಲಿ ಫುಟ್ಬಾಲ್‌ ಚಟುವಟಿಕೆಗಳನ್ನು ನಡೆಸಲು ಉತ್ಸುಕವಾಗಿದ್ದು ಸರಕಾರ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಯ ತಾಂತ್ರಿಕ ಪ್ರಮುಖ ಕ್ಲೈವ್‌ ಮಸ್ಕರೆನ್ಹಾಸ್‌ ಅವರು ಸರಕಾರವನ್ನು ವಿನಂತಿ ಮಾಡಿಕೊಂಡಿದ್ದಾರೆ.


administrator