Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಜಯ ಹಜಾರೆ ಟ್ರೋಫಿ ಫೈನಲ್‌: ಮಯಾಂಕ್‌ ಎದುರಾಳಿ ಕರುಣ್‌

ವಡೋಧರ: ಮಹಾರಾಷ್ಟ್ರ ವಿರುದ್ಧ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ವಿದರ್ಭ ತಂಡ 69 ರನ್‌ ಅಂತರದಲ್ಲಿ ಜಯ ಗಳಿಸುವ ಮೂಲಕ ವಿಜಯ ಹಜಾರೆ ಟ್ರೋಫಿ ಫೈನಲ್‌ ತಲುಪಿದೆ. ಫೈನಲ್‌ ಪಂದ್ಯದಲ್ಲಿ ಕರ್ನಾಟಕದ ಮಯಾಂಕ್‌ ಅಗರ್ವಾಲ್‌ ಹಾಗೂ ವಿದರ್ಭ ತಂಡದ ನಾಯಕತ್ವ ವಹಿಸಿರುವ ಕನ್ನಡಿಗರೇ ಆದ ಕರುಣ್‌ ನಾಯರ್‌ ನಡುವೆ ಪ್ರಶಸ್ತಿಗಾಗಿ ಹೋರಾಟ ನಡೆಯಲಿದೆ. Vijay Hazare Trophy Final between Karun Nair and Mayank Agarwal.

ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಹಾಲಿ ಚಾಂಪಿಯನ್‌ ಹರಿಯಾಣದ ವಿರುದ್ಧ 5 ವಿಕೆಟ್‌ ಅಂತರದಲ್ಲಿ ಜಯ ಗಳಿಸಿ ಐದನೇ ಬಾರಿಗೆ ಫೈನಲ್‌‌ ಪ್ರವೇಶಿಸಿತ್ತು.

ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ವಿದರ್ಭ ನಾಯಕ ಕರುಣ್‌ ನಾಯರ್‌ ಅಜೇಯ 88 ರನ್‌ ಸಿಡಿಸಿ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ (752) ಗಳಿಸಿ ಹೆಗ್ಗಳಿಕೆಗೆ ಪಾತ್ರರಾದರು. ಆರಂಭಿಕ ಆಟಗಾರರಾದ ದ್ರುವ್‌ ಶೋರೆ (114) ಹಾಗೂ ಯಶ್‌ ರಾಥೋಡ್‌ (116) 224 ರನ್‌ ಜೊತೆಯಾಟವಾಡುವುದರೊಂದಿಗೆ ವಿದರ್ಭ 380 ರನ್‌ಗಳ ಬೃಹತ್‌ ಮೊತ್ತದ ಗುರಿಯನ್ನು ಮಹಾರಾಷ್ಟ್ರಕ್ಕೆ ನೀಡಿತ್ತು. ಮಹಾರಾಷ್ಟ್ರ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಜೊತೆಯಲ್ಲಿ ಆಡಿದ ಇಬ್ಬರು ಅನುಭವಿ ಆಟಗಾರರು ಶನಿವಾರ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ಆಡಿರುವ 7  ಪಂದ್ಯಗಳಲ್ಲಿ ಕರ್ನಾಟಕ 6 ಜಯ ಹಾಗೂ 1 ಸೋಲು ಕಂಡಿದೆ. ವಿದರ್ಭ ಆಡಿದ 7 ಪಂದ್ಯಗಳಲ್ಲೂ ಜಯ ಗಳಿಸಿ ಫೈನಲ್‌ ಪ್ರವೇಶಿಸಿದೆ.


administrator