Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕರ್ನಾಟಕ ಐದನೇ ಬಾರಿ ವಿಜಯ್‌ ಹಜಾರೆ ಟ್ರೋಫಿ ಚಾಂಪಿಯನ್‌

ವಡೋದರ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ನಾಟಕ ತಂಡ ವಿದರ್ಭ ವಿರುದ್ಧ 36 ರನ್‌ಗಳ ಜಯ ಗಳಿಸಿ ಐದನೇ ಬಾರಿಗೆ ವಿಜಯ ಹಜಾರೆ ಟ್ರೋಫಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka wins the 5th Vijay Hazare title beating Vidarbha by 36 runs.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ರವಿಚಂದ್ರನ್‌ ಸ್ಮರಣ್‌ (101) ಅವರ ಶತಕ ಹಾಗೂ ಕೃಷ್ಣನ್‌ ಶ್ರೀಜಿತ್‌ (78) ಹಾಗೂ ಅಭಿನವ್‌ ಮನೋಹರ್‌ (79) ಅವರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 348 ರನ್‌ ಗಳಿಸಿತು.

ಬೃಹತ್‌ ಮೊತ್ತವನ್ನು ಬೆಂಬತ್ತಿದ ವಿದರ್ಭ ಪರ ದ್ರುವ ಶೋರೆ 110 ರನ್‌ ಗಳಿಸಿದರೂ ಇತರ ಆಟಗಾರರು ಕರ್ನಾಟಕ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಪ್ರತಿಯೊಂದೂ ಪಂದ್ಯದಲ್ಲಿ ಮಿಂಚಿದ್ದ ಕರುಣ್‌ ನಾಯರ್‌ ಕೇವಲ 22 ರನ್‌ಗೆ ವಿಕೆಟ್‌ ಒಪ್ಪಿಸಿದ್ದು ವಿದರ್ಭಕ್ಕೆ ದೊಡ್ಡ ಆಘಾತವಾಯಿತು. ಕೊನೆಯ ಕ್ಷಣದಲ್ಲಿ ಹರ್ಷ್‌ ದುಬೆ 63 ರನ್‌ ಗಳಿಸಿ ಹೋರಾಟ ನೀಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಸ್ಪೋರ್ಟ್ಸ್‌‌ ಮೇಲ್‌ YouTube ಚಾನೆಲ್‌ಗೂ ಪ್ರೋತ್ಸಾಹಿಸಿ

ಕರ್ನಾಟಕದ ಪರ ಪ್ರಸೀಧ್‌ ಕೃಷ್ಣ, ಅಭಿಲಾಶ್‌ ಶೆಟ್ಟಿ  ಹಾಗೂ ಕೌಶಿಕ್‌ ವಾಸುಕಿ ತಲಾ 3 ವಿಕೆಟ್‌ ಗಳಿಸಿ ತಂಡಕ್ಕೆ 36 ರನ್‌ ಜಯ ತಂದಿತ್ತರು. ವಿದರ್ಭ ಅಂತಿಮವಾಗಿ 48.2 ಓವರ್‌ಗಳಲ್ಲಿ 312 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ನಿರೀಕ್ಷೆಯಂತೆ ಕರುಣ್‌ ನಾಯರ್‌ ಸರಣಿ ಶ್ರೇಷ್ಠ ಹಾಗೂ ರವಿಚಂದ್ರನ್‌ ಸ್ಮರಣ್‌‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.


administrator