Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಕ್ರೀಡಾಕೂಟದಿಂದ ಕಳರಿಪಯಟ್ಟು ಕೈ ಬಿಟ್ಟ ಐಒಎ!

ಹೊಸದಿಲ್ಲಿ: ಸ್ವಾತಂತ್ರ್ಯ ಬಂದು 77 ವರ್ಷಗಳೇ ಕಳೆದವು. ಆದರೆ ದೇಶ ಅಭಿವೃದ್ಧಿ ಹೊಂದಿದರೂ ನಮ್ಮ ಬುದ್ಧಿ ಮಾತ್ರ ಇನ್ನೂ ಅಭಿವೃದ್ಧಿ ಹೊಂದಿಲ್ಲ ಅನಿಸುತ್ತಿದೆ. ಸಮರ ಕಲೆಯಾದ ಕಳರಿಪಯಟ್ಟುವಿಗೆ ಹೆದರಿದ ಬ್ರಿಟಿಷರೇ ಅದನ್ನು 1805ರಲ್ಲಿ ನಿಷೇಧ ಮಾಡುತ್ತಾರೆ. ನಂತರ ಅದು ಕ್ರೀಡೆಯಾಗಿ ಹೊಸ ರೂಪ ಕಂಡುಕೊಳ್ಳುತ್ತದೆ. ಆದರೆ 38ನೇ ರಾಷ್ಟ್ರೀಯ ಕ್ರೀಡಾ ಕೂಟವನ್ನು ಆಯೋಜಿಸುತ್ತಿರುವ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಕೋರ್ಟ್‌ ಆದೇಶ ಬರುವವರೆಗೂ ಈ ಕ್ರೀಡೆಗೆ ಅವಕಾಶ ನೀಡುವುದಿಲ್ಲ ಎಂದು ತೀರ್ಮಾನಿಸಿದೆ. Kalarippayattu removed from Competition list in 38th National Games.

ದುರಂತವೆಂದರೆ ಕೇರಳದವರೇ ಆದ ಮಾಜಿ ಒಲಿಂಪಿಯನ್‌ ಪಿಟಿ ಉಷಾ ಅವರೇ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷರು. ಭಾರತದಲ್ಲಿ ಒಟ್ಟು 50ಕ್ಕೂ ಹೆಚ್ಚು ಮಾರ್ಷಲ್‌ ಆರ್ಟ್‌ಗಳಿವೆ. ಇತರ ದೇಶಗಳಲ್ಲಿ ಮಾರ್ಷಲ್‌ ಆರ್ಟ್‌ಗೆ ಸಾಕಷ್ಟು ಪ್ರಾಧಾನ್ಯತೆ ನೀಡುತ್ತಿದ್ದು, ನಾವು ಅವರನ್ನು ನಕಲು ಮಾಡುತ್ತೇವೆಯೇ ವಿನಃ ನಮ್ಮ ಕಲೆಯನ್ನು ಬೆಳೆಸಲು ಮನಸ್ಸು ಮಾಡುತ್ತಿಲ್ಲ.

ಬ್ರಿಟಿಷರು ಯಾಕೆ ಭಾರತದ ಸಮರ ಕಲೆಗಳನ್ನು ನಿಷೇಧಿಸಿದರು?

ಜನವರಿ 28 ರಿಂದ ಉತ್ತರಾಖಂಡ್‌ನಲ್ಲಿ ನಡೆಯಲಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಳರಿಪಯಟ್ಟು ಸಮರ ಕಲೆಯನ್ನು ಸ್ಪರ್ಧೆಯಾಗಿ ನಡೆಸಲು ತೀರ್ಮಾನಿಸಲಾಗಿತ್ತು. ಗೋವಾದಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಳರಿಪಯಟ್ಟುವಿಗೆ ಸ್ಪರ್ಧೆಯಲ್ಲಿ ಅವಕಾಶ ನೀಡಲಾಗಿತ್ತು. ಈ ಬಾರಿ ಪ್ರದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂಬ ಸುದ್ದಿ ಬಂದಿದೆ. 18 ರಾಜ್ಯಗಳಿಂದ ಸುಮಾರು 200ಕ್ಕೂ ಹೆಚ್ಚು ಕಳರಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ದೆಹಲಿ ಹೈಕೋರ್ಟ್‌‌ ಆದೇಶವನ್ನು ಆಧರಿಸಿ ಕಳರಿಪಯಟ್ಟು ಕ್ರೀಡೆಯ ಸ್ಪರ್ಧೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಐಒಎ ಅಧ್ಯಕ್ಷೆ ಪಿಟಿ ಉಷಾ ಹೇಳಿದ್ದಾರೆ.

ಓರ್ವ ಕಳರಿಪಯಟ್ಟು ವಿದ್ಯಾರ್ಥಿನಿ ಹರ್ಷಿತಾ ಯಾದವ್‌ ದೆಹಲಿ ಹೈಕೋರ್ಟ್‌ನಲ್ಲಿ ಕಳರಿಪಯಟ್ಟುವಿಗೆ ಸಂಬಂಧಿಸಿದಂತೆ ರಿಟ್‌ ಅರ್ಜಿಯೊಂದನ್ನು ಸಲ್ಲಿಸಿದ್ದು ಅದರ ತೀರ್ಪನ್ನು ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಷಾ ಹೇಳಿದ್ದಾರೆ.


administrator