ನಿಟ್ಟೆಯ NMAMITನಲ್ಲಿ ಮೂರು ದಿನಗಳ ಕಾಲ ನಿಟ್ಟೆ ಕ್ರಿಕೆಟ್ ಟೂರ್ನಮೆಂಟ್
ಕಾರ್ಕಳ: ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ (BACA) ಹಾಗೂ ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಇವರು ನಿಟ್ಟೆ ವಿಶ್ವವಿದ್ಯಾನಿಯಲದ ನೆರವಿನೊಂದಿಗೆ ಪ್ರತಿ ವರ್ಷ ನಡೆಸುತ್ತಿರುವ ನಿಟ್ಟೆ ಕ್ರಿಕೆಟ್ ಟೂರ್ನಮೆಂಟ್ 2025 ಜನವರಿ 24, 25 ಹಾಗೂ 26 ರಂದು ಕಾರ್ಕಳದಲ್ಲಿ ನಡೆಯಲಿದೆ. Three days annual cricket tournament will be held in B C Alva Sports Complex from 24th to 26th January at NITTE
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಬಿ.ಸಿ. ಆಳ್ವ ಸ್ಮಾರಕ ಕ್ರೀಡಾಂಗಣಲ್ಲಿ ಟೂರ್ನಿ ನಡೆಯಲಿದೆ. ತಮಿಳುನಾಡು, ಬೆಂಗಳೂರು, ಮಹಾರಾಷ್ಟ್ರ ಹಾಗೂ ಉಡುಪಿಯ ತಂಡಗಳು ಪ್ರತಿಷ್ಟಿತ ನಿಟ್ಟೆ ಕ್ರಿಕೆಟ್ ಟೂರ್ನಿಯ ಟ್ರೋಫಿಗಾಗಿ ಮೂರು ದಿನಗಳ ಕಾಲ ಪೈಟೋಟಿ ನಡೆಸಲಿವೆ. ಬೆಳ್ಳಿಪ್ಪಾಡಿ ಕ್ರಿಕೆಟ್ ಅಕಡೆಮಿ ಬ್ರಹ್ಮಾವರ ಇದರ ಪ್ರಧಾನ ಕೋಚ್ ವಿಜಯ ಆಳ್ವಾ ಹಾಗೂ ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಇದರ ಪ್ರಧಾನ ಕೋಚ್ ಉದಯ್ ಕುಮಾರ್ ಅವರು ಕಳೆದ ಮೂರು ವರ್ಷಗಳಿಂದ ಕಾರ್ಕಳದ ನಿಟ್ಟೆಯಲ್ಲಿ ಟೂರ್ನಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
50 ವರ್ಷ ಮೀರಿದವರಿಗಾಗಿ ಇರುವ ಈ ಟೂರ್ನಿಯ ಉದ್ಘಾಟನಾ ಸಮಾರಂಭಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಿರ್ವಹಣೆ ಹಾಗೂ ಅಭಿವೃದ್ಧಿಯ ನಿರ್ದೇಶಕರಾಗಿರುವ ಪ್ರೊ. ಎ. ಯೋಗೀಶ್ ಹೆಗ್ಡೆ, ಎನ್‌ಎಂಎಎಂಐಟಿ ನಿಟ್ಟೆ ಇದರ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್. ಚಿಪಳೂಣ್ಕರ್. ಉಡುಪಿ ಅಥ್ಲೆಟಿಕ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಶೋಕ್ ಅಡ್ಯಂತಾಯ ಹಾಗೂ ಉಡುಪಿ ಅಂಬಾಗಿಲಿನಲ್ಲಿರುವ ಚಾಲುಕ್ಯ ಹೊಟೇಲಿನ ಮಾಲಕರಾದ ದಿನೇಶ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.
Please Subscribe Our Sports Channel and Support
ತಮಿಳುನಾಡಿನ ಚೋಳಾ ಟೈಗರ್ಸ್, ಮಹಾರಾಜಾಸ್ ಆಫ್ ಬೆಂಗಳೂರು, ಉಡುಪಿಯ BCA ಮತ್ತು KRS, ಮತ್ತು ಮುಂಬಯಿಯ ಸೂಪರ್ ಸ್ಟಾರ್ ತಂಡಗಳು ಪಾಲ್ಗೊಳ್ಳಲಿವೆ.