Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಕ್ರೀಡಾಕೂಟ: ಪದಕ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ

ಹಲ್ದ್ವಾನಿ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್‌ ಮತ್ತು ಈಜಿನಲ್ಲಿ ಪ್ರಭುತ್ವ ಸಾಧಸಿವುದರೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. Karnataka reached second position in medal tally after winning gold in Swimming and Badminton

ನಾಲ್ಕನೇ ದಿನದಂತ್ಯಕ್ಕೆ ಕರ್ನಾಟಕ ಒಟ್ಟು 13 ಚಿನ್ನ, 5 ಬೆಳ್ಳಿ ಹಾಗೂ 5 ಕಂಚಿನ ಪದಕಗಳೊಂದಿಗೆ ಒಟ್ಟು 23 ಪದಕಗಳ ಸಾಧನೆ ಮಾಡಿ ಎರಡನೇ ಸ್ಥಾನಕ್ಕೇರಿತು. ಸರ್ವಿಸಸ್‌ ಕ್ರೀಡಾ ನಿಯಂತ್ರಣ ಮಂಡಳಿ ಒಟ್ಟು 26 ಪದಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.

ಬ್ಯಾಡ್ಮಿಂಟನ್‌ ತಂಡ ವಿಭಾಗದಲ್ಲಿ ಕರ್ನಾಟಕ ಪುರುಷತ ತಂಡ ಆತಿಥೇಯ ಉತ್ತರಾಖಂಡ್‌ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿ ಚಿನ್ನ ಗೆದ್ದಿತು.

ಈಜಿನಲ್ಲಿ ವನಿತೆಯರ 200 ಮೀ ಬಟರ್‌ಫ್ಲೈ ವಿಭಾಗದಲ್ಲಿ ಕರ್ನಾಟಕದ ಸುಹಾಸಿನಿ ಘೋಷ್‌ 2 ನಿಮಿಷ 24.53 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಮಹಾರಾಷ್ಟ್ರದ ಧೃತಿ ಅಹೈರ್ವಾಲ್‌ ಚಿನ್ನ ಗೆದ್ದರು. ಪುರುಷರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಕರ್ನಾಟಕದ ವಿಧಿತ್‌ ಶಂಕರ್‌ 29.12 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಪುರುಷರ 4×200 ಮೀ ರಿಲೇಯಲ್ಲಿ ಕರ್ನಾಟಕ ತಂಡ 7 ನಿಮಿಷ 45.82 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿತು. ತಂಡದಲ್ಲಿ ಧಕ್ಷನ್‌ ಎಸ್‌, ಸೊಹನ್‌ ಗಂಗೂಲಿ, ಅನೀಶ್‌ ಎಸ್‌.ಗೌಡ ಹಾಗೂ ಶ್ರೀಹರಿ ನಟರಾಜ್‌ ಸೇರಿದ್ದರು. ವನಿತೆಯರ 4×200 ಫ್ರೀ ಸ್ಟೈಲ್‌ ರಿಲೇಯಲ್ಲಿ 8 ನಿಮಿಷ 54.87 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿತು. ತಂಡದಲ್ಲಿ ಶಿರಿನ್‌, ಶ್ರೀನಿ ಆರ್‌ ದೀಕ್ಷಿತ್‌, ಮೀನಾಕ್ಷಿ ಮೆನನ್‌ ಹಾಗೂ ಧೀನಿಧಿ ಧೇಸಿಂಘು ಸೇರಿದ್ದಾರೆ.


administrator