ಜಯಕ್ಕಾಗಿ ರಾತ್ರಿಯೇ ಪಿಚ್ ತಿರುಚಿದ ಬರೋಡ: ಆರೋಪ
ವಡೋದರ: ಜಯಕ್ಕಾಗಿ ರಾತ್ರೋ ರಾತ್ರಿ ಪಿಚ್ ತಿರುಚಿದರು ಎಂದು ಜಮ್ಮು ಮತ್ತು ಕಾಶ್ಮೀರ ರಣಜಿ ತಂಡ ಪ್ರತಿಭಟನೆ ಮಾಡಿದ ಘಟನೆ ವಡೋದರದ ರಿಲಯನ್ಸ್ ಅಂಗಣದಲ್ಲಿ ನಡೆದಿದೆ. ಇಲ್ಲಿ ಬರೋಡ ಹಾಗೂ ಜಮ್ಮು ಮತ್ತು ಕಾಶ್ಮೀರದ ನಡುವೆ ಪಂದ್ಯ ನಡೆಯುತ್ತಿತ್ತು. Jammu and Kashmir refuses to play on day 3 against Baroda making allegation of Pitch tampering.
ಮೂರನೇ ದಿನದ ಆರಂಭದಲ್ಲಿ ಸುಮಾರು 1 ಗಂಟೆ 25 ನಿಮಿಷಗಳ ಕಾಲ ಪಂದ್ಯ ನಡೆದಿರಲಿಲ್ಲ. ಜಯ ಗಳಿಸುವುದಕ್ಕಾಗಿ ರಾತ್ರೋರಾತ್ರಿ ಪಿಚ್ ತಿರುಚಲಾಗಿದೆ. ನಾಕೌಟ್‌ಗೆ ತೇರ್ಗಡೆಯಾಗಲು ಬರೋಡಾ ತಂಡದವರು ಮಾಡಿದ ಕುತಂತ್ರ ಇದು ಎಂದು ಜಮ್ಮು ಕಾಶ್ಮೀರ ತಂಡ ಆರೋಪಿಸಿದೆ.
ಬರೋಡ ಕ್ರಿಕೆಟ್ ಸಂಸ್ಥೆ ಈ ಆರೋಪವನ್ನು ತಳ್ಳಿ ಹಾಕಿದೆ. ಚಳಿಗಾಲದಲ್ಲಿ ಪಿಚ್ ತೇವವಾಗಿರುವುದರಿಂದ ಕೆಲಸ ಮಾಡುವುದು ಸಹಜ ಎಂದಿದೆ. ಮ್ಯಾಚ್ ರೆಫರಿ ಅರ್ಜನ್ ಕೃಪಾಲ್ ಸಿಂಗ್ ಮಧ್ಯಸ್ಥಿಕೆ ವಹಿಸಿದ ನಂತರ ಪಂದ್ಯ ಮುಂದುವರಿಯಿತು.
ಕೊನೆಯ ದಿನದಲ್ಲಿ ಬರೋಡಕ್ಕೆ ಗೆಲ್ಲಲ್ಲು 365 ರನ್ ಗಳಿಸಬೇಕಾಗಿದೆ. ಜಮ್ಮು ಮತ್ತು ಕಾಶ್ಮೀರ ಡ್ರಾ ಗಳಿಸಿದರೂ ನಾಕೌಟ್ ಹಂತ ತಲಪುತ್ತದೆ.