Friday, November 22, 2024

ಗಿರೀಶ್, ಗಹನ್‌ಗೆ ಚಾಂಪಿಯನ್ ಪಟ್ಟ

ಬೆಂಗಳೂರು:೧೬ನೇ ಬಿಎನ್‌ಸಿಎ್ ಮಾಸಿಕ ಚೆಸ್ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಶ್ರೇಯಾಂಕಿತ ಮೈಸೂರಿನ ಐಎಂ ಗಿರೀಶ್ ಕೌಶಿಕ್ ಹಾಗೂ ಗಹನ್ ಎಂಜಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.
ಫೈನಲ್ ಸುತ್ತಿನಲ್ಲಿ ಗಿರೀಶ್ ಎ ಗುಂಪಿನಲ್ಲಿ  ಕಲ್ಕಿ ಈಶ್ವರ್ ವಿರುದ್ಧ ಡ್ರಾ ಸಾಧಿಸಿ ಅಗ್ರ ಸ್ಥಾನ ಗಳಿಸಿಕೊಂಡರು. ಓಪನ್ ಗ್ರೂಪ್ ಬಿ ಗುಂಪಿನಲ್ಲಿ ಯಶಸ್ ದೋಂತಿ ವಿರುದ್ಧ ಜಯ ಗಳಿಸಿದ ಗಹನ್ ಅಗ್ರ ಸ್ಥಾನ ಗಳಿಸಿದರು.
೨೦೧೯ ಫೆಬ್ರರಿಯಲ್ಲಿ ಆರಂಭಗೊಳ್ಳಲಿರುವ ಬಿಎನ್‌ಸಿಎ್ ಗ್ರಾಂಡ್ ಪ್ರಿಕ್ಸ್ ಚಾಂಪಿಯನ್‌ಷಿಪ್‌ಗಾಗಿ ಆಟಗಾರರನ್ನು ಆಯ್ಕೆ ಮಾಡುವ ಉದ್ದೇಶದಿಂದ ಮುಕ್ತ ವಿ‘ಭಾಗವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಎ ಮತ್ತು ಬಿ ಗುಂಪಿನಲ್ಲಿ ಅಗ್ರ ಮೂರು ಸ್ಥಾನ ಪಡೆದ ಆಟಗಾರರು ಗ್ರ್ಯಾನ್ ಪ್ರಿಕ್ಸ್ ಆಯ್ಕೆಯಾಗುತ್ತಾರೆ.
ಹಿರಿಯ ಚೆಸ್ ಟ್ರೈನರ್ ಶ್ರೀಕಾಂತ ಉಡುಪ, ಅಕ್ಷಯ ಕಲ್ಪದ ಸಿಇಒ ಶಶಿ ಕುಮಾರ್ ಹಾಗೂ ಬಿಇಎಲ್ ಆಫಿಸರ್ಸ್ ಕ್ಲಬ್‌ನ ಬಿ.ಕೆ. ಮಂಜುನಾಥ್ ವಿಜೇತರಿಗೆ ಬಹುಮಾನ ವಿತರಿಸಿದರು. ಸುಮಾರು ೪೦ ಸಾವಿರ ರೂ. ಮೊತ್ತದ ಬಹುಮಾನ ನೀಡಲಾಯಿತು. ಬೆಂಗಳೂರು ನಾರ್ತ್ ಚೆಸ್ ಫೋರಂ, ‘ಭಾರತ ಎಲೆಕ್ಟ್ರಾನಿಕ್ಸ್ ಆಫಿಸರ್ಸ್ ಕ್ಲಬ್ ಹಾಗೂ ಅಕ್ಷಯ ಕಲ್ಪ ಆರ್ಗಾನಿಕ್ ಡೈರಿಯ ಆಶ್ರಯದಲ್ಲಿ ಚಾಂಪಿಯನ್‌ಷಿಪ್ ನಡೆಯಿತು.
ಫಲಿತಾಂಶ
ಗ್ರ್ಯಾನ್ ಪ್ರಿಕ್ಸ್ ಅರ್ಹತಾ ಸುತ್ತು- ಗಿರೀಶ್ ಎ. ಕೌಶಿಕ್, ಯಶಸ್ ದೋಂತಿ, ಕಲ್ಕಿ ಈಶ್ವರ್ ಡಿ., ಅರ್ಣವ್ ಮುರಳೀಧರ್, ಗಹನ್ ಎಂಜಿ ಮತ್ತು ಯಾದವ್ ಯಶಸ್ ಡಿ.
ಏಜ್ ಗ್ರೂಪ್ ವಿನ್ನರ್ಸ್- ಅಂಡರ್ ೦೮ ರ್ಯಾಂಕ್- ದಕ್ಷ ಜೈನ್ ೧, ಪ್ರಣವ್ ಪಿ. ಶೆಣೈ ೨. ಪ್ರಥಮೇಶ್ ಶಶಿಕಾಂತ್ ದೇಶಮುಖ್ ೩.
ಅಂಡರ್ ೮ ರ್ಯಾಂಕ್- ವಿನಯ ಶ್ರೀಧರ್ ೧, ಸನಿಕೊಮ್ಮು ಮನಸ್ವಿ ೨, ಪ್ರಣಿಕಾ ಪಿ. ೩.
ಅಂಡರ್ ೧೨ ರ್ಯಾಂಕ್- ಸ್ವರ ಲಕ್ಷ್ಮೀ ಎಸ್. ನೈರ್, ಡಿಯೋಟಾ ಶ್ರೀಯಾಂಶ್ ೨, ಸಂಕಾ ಘೋಷ್ ೩.

Related Articles