Saturday, November 23, 2024

೭೩೪ ಕ್ರೀಡಪಟುಗಳಿಗೆ ಖೇಲೋ ಇಂಡಿಯಾ ಸ್ಕಾಲರ್‌ಶಿಪ್

ಹೊಸದಿಲ್ಲಿ
ಖೇಲೋ ಇಂಡಿಯಾ ಮೂಲಕ ದೇಶದಲ್ಲಿ ಕ್ರೀಡಾ ಕ್ರಾಂತಿಯನ್ನು ಉಂಟು ಮಾಡಲು ಹೊರಟಿರುವ ಕೇಂದ್ರ ಸರಕಾರ ದೇಶದ ೭೩೪ ಯುವ ಕ್ರೀಡಾಪಟುಗಳನ್ನು ವಿದ್ಯಾರ್ಥಿ ವೇತನ ನೀಡಲು ಆಯ್ಕೆ ಮಾಡಿದೆ. ಯುವ ಪ್ರತಿಭೆಗಳನ್ನು ಪತ್ತೆ ಹಚ್ಚಿ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಇಂಡಿಯಾ ಟ್ಯಾಲೆಂಟ್ ಡೆವಲಪ್‌ಮೆಂಟ್ ಸ್ಕೀಮ್ ಅನ್ನು ಕ್ರೀಡಾ ಇಲಾಖೆ ಜಾರಿಗೆ ತಂದಿದೆ. ದೇಶದ ಕ್ರೀಡೆಯಲ್ಲಿ ಸಮಗ್ರ ಬದಲಾವಣೆ ತಂದು ಯಶಸ್ಸಿನತ್ತ ದಾಪುಗಾಲಿಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವ‘ರ್ನ ಸಿಂಗ್ ರಾಥೋಡ್ ಹೇಳಿದ್ದಾರೆ. ಯುವಕರನ್ನು ಪತ್ತೆ ಹಚ್ಚಿ ಬರೇ ಘೋಷ ವಾಕ್ಯವಾಗಿ ಉಳಿಯುವುದಿಲ್ಲ ಈ ಬಗ್ಗೆ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕ್ರೀಡಾಪಟುವನ್ನೇ ಕ್ರೀಡಾ ಸಚಿವರನ್ನಾಗಿ ಮಾಡಿದರೆ ಯಾವ ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಸ್ಥಳೀಯ ಕ್ರೀಡಾಪಟುಗಳಿಗೆ ಜಾಗತಿಕ ಮಟ್ಟದಲ್ಲಿ ವೇದಿಕೆ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕ್ರೀಡೆ ಎಂಬುದು ಪ್ರತಿಯೊಬ್ಬ ಭಾರತೀಯರ ಪಾಲಿಗೆ ಮನರಂಜನೆ. ಶಿಕ್ಷಣ ಹಾಗೂ ಸಾಧನೆಯ ಹಾದಿಯಾಗಬೇಕೆಂಬುದು ಇದರ ಉದ್ದೇಶ. ಈ ಯೋಜನೆಯಲ್ಲಿ ಬರುವ ಕ್ರೀಡಾಪಟುಗಳು ಸರಕಾರದಿಂದ ಮಾನ್ಯತೆ ಪಡೆದಿರುವ ಕ್ರೀಡಾತರಬೇತಿ ಕೇಂದ್ರಗಳಲ್ಲಿ ಅಭ್ಯಾಸ ಮಾಡಲಿದ್ದಾರೆ.
ವರ್ಷಕ್ಕೆ ೧.೨೦ ಲಕ್ಷ ರೂ.
ಈ ಯೋಜನೆಯ ಲಾನುಭವಿಗಳಿಗೆ ವರ್ಷಕ್ಕೆ ೧,೨೦,೦೦೦ ರೂ.ಗಳನ್ನು ನಾಲ್ಕು ಕಂತುಗಳಲ್ಲಿ ನೀಡಲಾಗುವುದು. ಇದು ಅವರ ದಿನದ ಭತ್ಯೆ, ಗಾಯಗೊಂಡರೆ ಚಿಕಿತ್ಸೆ ಹಾಗೂ ಇತರ ವೆಚ್ಚಗಳಿಗಾಗಿ ಈ ಹಣವನ್ನು ವಿನಿಯೋಗಿಸಬಹುದು. ಯುವ ಪ್ರತಿಭೆಗಳಿಗೆ ತರಬೇತಿ ನೀಡಲು ದೇಶದಲ್ಲಿರುವ ಖಾಸಗಿ, ರಾಜ್ಯ ಸರಕಾರ ಸ್ವಾಮ್ಯದ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಉನ್ನತ ಮಟ್ಟದ ಸಮಿತಿಯು ಭಾರತೀಯ ಕ್ರೀಡಾ ಪ್ರಾಧಿಕಾರದ ಹೊರತಾದ ೨೧ ಅಕಾಡೆಮಿಗಳನ್ನು ಆಯ್ಕೆ ಮಾಡಿದೆ. ಸರಕಾರ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅವರಿಗೆ ತರಬೇತಿ ಪಡೆಯಲು ಹತ್ತಿರವಾಗುವ ಇನ್ನೂ ಕೆಲವ ಅಕಾಡೆಮಿಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ

Related Articles