Wednesday, January 15, 2025

ಬೆಂಗಳೂರಿನ ಶ್ವಾರ್ಜ್ನೆಗರ್ ಮನೋಜ್

ಸ್ಪೋರ್ಟ್ಸ್ ಮೇಲ್ ವರದಿ:ಆತ ನಡೆದು ಬಂದರೆ ಅಲ್ಲೊಂದು ಗಾಂಭೀರ್ಯ, ಆತ ಎದೆಯುಬ್ಬಿಸಿ ಮೈಕಟ್ಟನ್ನು ಪ್ರದರ್ಶಿಸಿದರೆ ಜನರು ನಿಬ್ಬೆರಗಾಗುತ್ತಾರೆ….ಆತ ಸ್ಪರ್ಧೆಗಿಳಿದರೆ ಇತರರು ಎರಡನೇ ಸ್ಥಾನಕ್ಕಾಗಿ ಯೋಚಿಸುವ ಪರಿಸ್ಥಿತಿ, ಆತನನ್ನು ನೋಡಿದರೆ ಜಾಗತಿಕ ದೇಹದಾರ್ಢ್ಯದಲ್ಲಿ ಖ್ಯಾತಿ ಪಡೆದ ಅರ್ನಾಲ್ಡ್ ಶ್ವಾರ್ಜ್ನೆಗರ್ ಅವರನ್ನು ನೆನಪಿಸುತ್ತದೆ. ಆತ ಬೇರೆ ಯಾರೂ ಅಲ್ಲ ಇತ್ತೀಚಿಗೆ ವಿಶ್ವ ಬಾಡಿಬಿಲ್ಡಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ .
೨೦೦೯ರಲ್ಲಿ ನಡೆದ ಕರ್ನಾಟಕ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ  ‘ಕರ್ನಾಟಕ ಕಿಶೋರ್’ ಗೌರವಕ್ಕೆ ಪಾತ್ರರಾದ ಮನೋಜ್ ಮತ್ತೆ ಹಿಂದಿರುಗಿ ನೋಡಲಿಲ್ಲ. ಮಿ.ಇಂಡಿಯಾ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವಾಗ ಅನೇಕರು ತಮಾಷೆ ಮಾಡಿದ್ದರು. ಆದರೂ ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ  ಮಿ.ಇಂಡಿಯಾ ಎಂಬ ಗೌರವಕ್ಕೆ ಪಾತ್ರರಾದರು. ‘‘ಮಿ.ಇಂಡಿಯಾದಲ್ಲಿ ರ್ಸ್ಪಸುವುದೆಂದರೆ ತಮಾಷೆಯಲ್ಲ. ದೇಶದ ಪ್ರಮುಖ ಬಾಡಿ ಬಿಲ್ಡರ್‌ಗಳು ಪಾಲ್ಗೊಳ್ಳುತ್ತಾರೆ. ಅವರ ಮುಂದೆ ನೀನು ‘ಬಚ್ಚಾ’ ಎಂದು ಗೇಲಿ ಮಾಡಿದ್ದರು. ಆದರೆ ಪಾಲ್ಗೊಳ್ಳುವ ಹಂಬಲ ನನ್ನಲ್ಲಿತ್ತು. ೧೫ನೇ ವಯಸ್ಸಿನಲ್ಲಿ ಮಿ.ಇಂಡಿಯಾ ಗೆದ್ದ ಅತ್ಯಂತ ಕಿರಿಯ ರ್ಸ್ಪರ್ಧಿ  ಎಂಬ ಹೆಮ್ಮೆ ಇದೆ,’’ ಎಂದು ಈಗ ೧೦೦ ಕೆಜಿ ಭಾರವುಳ್ಳ ಮನೋಜ್ ಹೇಳಿದರು.
ಅರ್ನಾಲ್ಡ್ ಮನೋಜ್!
ಮನೋಜ್ ಕುಮಾರ್ ಎಂದು ಬೆಂಗಳೂರಿನಲ್ಲಿ ವಿಳಾಸ ಹುಡುಕುತ್ತ ಹೊರಟರೆ ನಿಮಗೆ ಬಾಡಿ ಬಿಲ್ಡರ್ ಮನೋಜ್ ಕುಮಾರ್ ಸಿಗುವುದೇ ಇಲ್ಲ. ಏಕೆಂದರೆ ಮನೋಜ್ ಕುಮಾರ್ ಆರ್ನಾಲ್ಡ್ ಮನೋಜ್ ಎಂದೇ ಖ್ಯಾತಿ. ಇದಕ್ಕೆ ಕಾರಣವೂ ಇದೆ. ವಿಶ್ವ ಕಂಡ ಮಹಾನ್ ದೇಹದಾರ್ಢ್ಯ ಪಟು ಅರ್ನಾಲ್ಡ್ ಶ್ವಾರ್ಜ್ನೆಗರ್ ವೃತ್ತಿಬದುಕನ್ನು ಆರಂಭಿಸಿದ್ದು ೧೪ನೇ ವಯಸ್ಸಿನಲ್ಲಿ. ಮನೋಜ್ ಕೂಡ ಹಾಗೆ.೧೪ನೇ ವಯಸ್ಸಿನಲ್ಲಿ ಅಖಾಡಕ್ಕಿಲಿದರು. ಅದೇ ರೀತಿಯ ಕೇಶವಿನ್ಯಾಸ, ಆಹಾರ ಪದ್ಧತಿ. ಅರ್ನಾಲ್ಡ್ ಅವರಂತೆಯೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರಂಭದಲ್ಲಿ ವಿಫಲರಾಗಿ ನಂತರ ಯಶಸ್ಸು ಕಂಡಿದ್ದಾರೆ.
‘‘ನನ್ನ ಶೈಲಿಯನ್ನು ನೋಡಿ ಅಭಿಮಾನಿಗಳು ಹಾಗೂ ಜಿಮ್ ವಲಯದಲ್ಲಿ ಅರ್ನಾಲ್ಡ್ ಮನೋಜ್ ಎಂದೇ ಕರೆಯುತ್ತಾರೆ. ನನ್ನ ಹೆಸರಿಗೆ ಅರ್ನಾಲ್ಡ್ ಸೇರಿಸಿರುವುದು ಖುಷಿ ಕೊಟ್ಟಿದೆ. ಮೊನ್ನೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ವಿದೇಶಿ ಸ್ಪರ್ಧಿಗಳು ಕೂಡ ನೀವು ಅರ್ನಾಲ್ಡ್ ಅವರನ್ನು ಹೋಲುತ್ತೀರಿ ಎಂದು ಹೇಳಿದ್ದರು,’’
ಎಂದು ಮನೋಜ್ ತಿಳಿಸಿದರು.

Related Articles