ಮೊದಲ ಪಂದ್ಯದಲ್ಲೇ 150 ರನ್, ಮ್ಯಾಥ್ಯೂ ಬ್ರೀಡ್ಜ್‌ಕೀ ದಾಖಲೆ
ಲಾಹೋರ್: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಡ್ಜ್‌ಕೀ ಚೊಚ್ಚಲ ಪಂದ್ಯದಲ್ಲೇ 150 ರನ್ ಏಕದಿನ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದಿದ್ದಾರೆ. South Africa opener Matthew Breetzke becomes first batter to score 150 on men’s ODI debut
ಚೊಚ್ಚಲ ಪಂದ್ಯದಲ್ಲೇ 150 ರನ್ ಸಿಡಿಸಿದ ಮೊದಲ ಆಟಗಾರ ಎನಿಸಿದರು ಮಾತ್ರವಲ್ಲ, 47 ವರ್ಷಗಳ ಹಿಂದೆ ವೆಸ್ಟ್‌ಇಂಡೀಸ್ ಡೆಸ್ಮಂಡ್ ಹೇನ್ಸ್ ಅವರ ದಾಖಲೆಯನ್ನು ಮುರಿದರು.
ಹೇನ್ಸ್ 1978 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಳಿಸಿದ್ದ 148 ರನ್ ಇದುವರೆಗಿನ ದಾಖಲೆಯಾಗಿತ್ತು. ಬ್ರೀಡ್ಜ್‌ಕೀ ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಮೊದಲ ಪಂದ್ಯವನ್ನಾಡುತ್ತ ಈ ದಾಖಲೆ ಬರೆದಿದ್ದಾರೆ. 148 ಎಸೆತಗಳನ್ನೆದುರಿಸಿದ ಮ್ಯಾಥ್ಯೂ ಬ್ರೀಡ್ಜ್‌ಕೀ 11 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 150 ರನ್ ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದರು.