Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕರಾಚಿಯಲ್ಲಿ ಭಾರತದ ಧ್ವಜ ಹಾರದಿರಲು ಐಸಿಸಿ ಕಾರಣ: ಪಿಸಿಬಿ

ಕರಾಚಿ: ಒಂದು ದೇಶ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸುತ್ತಿರುವಾಗ ಪಾಲ್ಗೊಳ್ಳುತ್ತಿರುವ ರಾಷ್ಟ್ರಗಳ ಧ್ವಜಗಳನ್ನು ಹಾರಿಸುವುದು ಕ್ರಮ. ಆದರೆ ಈ ಬಾರಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಆತಿಥ್ಯ ವಹಿಸಿರುವ ಪಾಕಿಸ್ತಾನ ಕರಾಚಿಯ ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸದಿರುವುದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದಕ್ಕೆ ಸ್ಪಷ್ಟೀಕರಣವನ್ನು ನೀಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಈ ತೀರ್ಮಾನವನ್ನು ಕೈಗೊಂಡಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಎಂದಿದೆ. International Cricket Council is responsible for missing Indian Flag at Karachi Stadium PCB clarifies.

 ಎಲ್ಲ ರಾಷ್ಟ್ರಗಳ ಧ್ವಜ ಹಾರುತ್ತಿರುವಾಗ ಭಾರತದ ಧ್ವಜವನ್ನು ಹಾರಿಸದಿರುವುದು ಭಾರತಕ್ಕೆ ಮಾಡಿದ ಅನ್ಯಾಯ. ಸರಿ, ಅಂತಾರಾಷ್ಟ್ರೀಯ ಕ್ರಿಕೆಟ್‌‌ ಮಂಡಳಿ (ಐಸಿಸಿ) ಇದಕ್ಕೆ ಕಾರಣ ಎಂದು ಪಿಸಿಬಿ ಹೇಳುವುದಾದರೆ, ಐಸಿಸಿಯಲ್ಲಿ ಉನ್ನತ ಹುದ್ದೆಯಲ್ಲಿ ಕುಳಿತಿರುವುದು ಯಾರು? ಭಾರತದ ಗೃಹ ಮಂತ್ರಿ ಅಮಿತ್‌ ಶಾ ಅವರ ಮಗ ಜೇ ಶಾ ಅಲ್ಲವೇ? ಐಸಿಸಿ ಅಷ್ಟು ಸುಲಭವಾಗಿ ಈ ತೀರ್ಮಾನ ಕೈಗೊಳ್ಳುವುದಿಲ್ಲ, ಏಕೆಂದರೆ ಇದು ಅತ್ಯಂತ ಸೂಕ್ಷ್ಮವಾದ ವಿಷಯ. ತಪ್ಪೆಸಗಿದ ಪಾಕಿಸ್ತಾನವೇ ಈಗ ಚೆಂಡನ್ನು ಐಸಿಸಿಯ ಅಂಗಣಕ್ಕೆ ಎಸೆದಿದೆ. ಐಸಿಸಿ ಆಧ್ಯಕ್ಷ ಜೇ ಶಾ ಇದಕ್ಕೆ ಸೂಕ್ತವಾದ ಸ್ಪಷ್ಟೀಕರಣ ನೀಡಿದರೆ ಸತ್ಯ ಏನೆಂಬುದು ಜನರಿಗೆ ಸ್ಪಷ್ಟವಾಗುತ್ತದೆ. ಎರಡು ದೇಶಗಳ ನಡುವೆ ಸಂಬಂಧ ಹದಗೆಟ್ಟಿರುವಾಗ ಐಸಿಸಿಯಾಗಲಿ, ಪಿಸಿಬಿಯಾಗಲೀ ಇಂಥ ಆಟ ಆಡುವುದು ಸೂಕ್ತವಲ್ಲ.

ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳದಿರಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಹಾಗಂತ ಭಾರತದ ಧ್ವಜವನ್ನು ಹಾರಿಸುವುದು ಬೇಡ ಎಂದು ಯಾರೂ ಹೇಳಿಲ್ಲ. ತಂಡಗಳು ಎಲ್ಲಿಯೇ ಆಡುತ್ತಿರಲಿ. ಪಾಕಿಸ್ತಾನ ಎಲ್ಲಿ ಇತರ ರಾಷ್ಟ್ರಗಳ ಧ್ವಜಗಳನ್ನು ಹಾರಿಸಿದೆಯೋ ಅಲ್ಲಿಯೇ ಹಾರಿಸಬೇಕಾದುದು ಕರ್ತವ್ಯ. ಅದು ಆ ರಾಷ್ಟ್ರಕ್ಕೆ ಕೊಡುವ ಗೌರವ ಆತಿಥೇಯ ರಾಷ್ಟ್ರದ ಕರ್ತವ್ಯ ಕೂಡ. ಪಂದ್ಯದ ದಿನ ದುಬೈನಲ್ಲಿ ಆಡುತ್ತಿರುವ ಎರಡು ರಾಷ್ಟ್ರಗಳ ಧ್ವಜ ಹಾರುತ್ತದೆ. ಮತ್ತು ಐಸಿಸಿ ಹಾಗೂ ಆತಿಥೇಯ ರಾಷ್ಟ್ರಧ್ವಜ ಇರುವುದು ಸಾಮಾನ್ಯ.

ಭಾರತ ತಂಡ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಹಾಗೂ ಲಾಹೋರ್‌ನಲ್ಲಿ ಆಡುವುದಿಲ್ಲ ಈ ಹಿನ್ನೆಲೆಯಲ್ಲಿ ಈ ಕ್ರೀಡಾಂಗಣಗಳಲ್ಲಿ ಭಾರತದ ಧ್ವಜವನ್ನು ಹಾರಿಸದಿರಲು ಪಿಸಿಬಿ ತೀರ್ಮಾನಿಸಿದಂತಿದೆ.

ಎ ಗುಂಪಿನಲ್ಲಿರುವ ಭಾರತ ಫೆಬ್ರವರಿ 20 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಫೆ. 23 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಭಾರತ, ಪಾಕಿಸ್ತಾನ ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ತಂಡಗಳು ಎ ಗುಂಪಿನಲ್ಲಿವೆ. ಫೆಬ್ರವರಿ 19 ರಂದು ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಮೂಲಕ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ ದೊರೆಯಲಿದೆ.


administrator