Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕ್ವಾರ್ಟರ್‌ ಫೈನಲ್‌ 1, ಸೆಮಿಫೈನಲ್‌ 2 ರನ್‌ ಕೇರಳದ ಅದೃಷ್ಟದ ರನ್‌

ಅಹಮದಾಬಾ:  ಕೇರಳ ತಂಡ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ ತಲುಪಿದೆ. ಕೊನೆಯ ದಿನದಲ್ಲಿ ಗುಜರಾತ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಣಲು 28 ರನ್‌ಗಳ ಅಗತ್ಯವಿದ್ದಿತ್ತು. ಆದರೆ 2 ರನ್‌ಗಳ ಅಂತರದಲ್ಲಿ ಗುಜರಾತ್‌ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಣುವಲ್ಲಿ ವಿಫಲವಾಯಿತು. Quarter Final 1 run Semi Final 2 run lead Kerala reached Ranji Final for the first time.

ಕೊನೆಯ ದಿನದ ಆರಂಭದಲ್ಲಿ ಕೇರಳದ ರನ್‌ ಸಮಬಲಗೊಳಿಸಲು ಗುಜರಾತ್‌ಗೆ 2 ರನ್‌ಗಳ ಅಗತ್ಯವಿದ್ದಿತ್ತು. ಆದಿತ್ಯ ಸಾರ್ವತೆ ಎಸೆದ ಚೆಂಡನ್ನು 10 ರನ್‌ ಗಳಿಸಿ ಆಡುತ್ತಿದ್ದ ಅರ್ಜಾನ್‌ ನಾಗ್ವಾಸ್ವಾಲ್ಲಾ ಫ್ಲಿಕ್‌ ಮಾಡಿದರು. ಚೆಂಡು ಶಾರ್ಟ್‌ ಲೆಗ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಸಲ್ಮಾನ್‌ ನಿಝಾರ್‌ ಅವರ ಹೆಲ್ಮೆಟ್‌ಗೆ ಬಡಿದು ಗಗನಕ್ಕೆ ಚಿಮ್ಮಿತು. ಸ್ಲಿಪ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಸಚಿನ್‌ ಬೇಬಿ ಅವರು ಸುಲಭವಾದ ಕ್ಯಾಚ್‌ ಕಬಳಿಸುವ ಮೂಲಕ ಕೇರಳ ಐತಿಹಾಸಿಕ ಪಂದ್ಯ ಗೆದ್ದಿತ್ತು.

ಕೇರಳ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ 457ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಗುಜರಾತ್‌ 455 ರನ್‌ಗೆ ಸರ್ವ ಪತನ ಕಂಡಿತ್ತು. ಕೇರಳ ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸುವುದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಮೊದಲ ಇನ್ನಿಂಗ್ಸ್‌ನ 2 ರನ್‌ಗಳ ಮುನ್ನಡೆಯ ಮೂಲಕ ಕೇರಳ ಫೈನಲ್‌ ತಲುಪಿತು. ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ 80 ರನ್‌ ಅಂತರದಲ್ಲಿ ಮುಂಬೈ ವಿರುದ್ಧ ಜಯ ಗಳಿಸಿದ ವಿದರ್ಭ ಫೈನಲ್‌ ತಲುಪಿದೆ.

ಕೇರಳ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ 1 ರನ್‌ ಅಂತರದಲ್ಲಿ ಮುನ್ನಡೆ ಕಂಡು ಸೆಮಿಫೈನಲ್‌ ತಲುಪಿತ್ತು. ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್‌ನಲ್ಲಿ 280 ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕೇರಳ 281 ರನ್‌ಗೆ ಆಲೌಟ್‌ ಆಗಿತ್ತು.

ಫೆಬ್ರವರಿ 26 ರಂದು ನಾಗ್ಪುರದಲ್ಲಿ ಕೇರಳ ಹಾಗೂ ವಿದರ್ಭ ತಂಡಗಳ ನಡುವೆ ಫೈನಲ್‌ ಪಂದ್ಯ ನಡೆಯಲಿದೆ.


administrator