Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

SIX5SIX ಜೊತೆಗೆ ಕೈಜೋಡಿಸಿದ KKR

ಬೆಂಗಳೂರು 21, 02, 2025: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲು ಹೊರಟಿದೆ. ಭಾರತದ ಮೊದಲ ಸ್ವದೇಶೀ ತಂಡದ ಉಡುಪು ಮತ್ತು ಸ್ಟ್ರೀಟ್‌ವೇರ್ ಬ್ರ್ಯಾಂಡ್‌ಗಳಲ್ಲಿ ಒಂದಾದ SIX5SIX ನೊಂದಿಗೆ ಕೆಕೆಆರ್ ಪಾಲುದಾರಿಕೆಯನ್ನು ಪ್ರಾರಂಭಿಸಿದ್ದು, ‘ಅಧಿಕೃತ ಕಿಟ್ ಪಾಲುದಾರ’ನಾಗಿ ಸಹಿ ಹಾಕಿದೆ. KKR joins hands with Six5six as official kitting partner for IPL 2025

SIX5SIX ತನ್ನ ವಿನ್ಯಾಸಕ್ಕೆ ಹೆಸರು ವಾಸಿಯಾಗಿದ್ದು, ಆನ್-ಫೀಲ್ಡ್ ಜರ್ಸಿಗಳಿಂದ ಟ್ರಾವೆಲ್   ಗೇರ್ ಮತ್ತು ಫ್ಯಾನ್ ಕಲೆಕ್ಷನ್ ಪ್ರತಿಯೊಂದು ಉತ್ಪನ್ನವನ್ನು ಪ್ರದರ್ಶಿಸಿ ಕೆಕೆಆರ್ ತಂಡದ ಅದ್ಭುತವಾದ ಪಯಣವನ್ನು ಸೆರೆಹಿಡಿಯಲಿದೆ. ಸ್ಟೈಲಿಶ್ ಮತ್ತು ಉತ್ತಮ ಗುಣಮಟ್ಟ ಮಾತ್ರವಲ್ಲದೆ ಕೈಗೆಟುಕುವ ಬೆಲೆಯಲ್ಲಿಯೂ ವಿಶೇಷವಾದ ತುಣುಕುಗಳನ್ನು ನೀಡುವ ಮೂಲಕ ಅಭಿಮಾನಿಗಳನ್ನು ತಂಡಕ್ಕೆ ಹತ್ತಿರ ತರುವುದೇ ಇದರ ಉದ್ದೇಶವಾಗಿದೆ.  ಕ್ರೀಡೆ ಮತ್ತು ಫ್ಯಾಷನ್ ಅನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸಲಾಗಿದೆ.

ಈ ಬಗ್ಗೆ ಮಾತನಾಡಿದ SIX5SIXನ ಸಹಸ್ಥಾಪಕ ಮತ್ತು ಸೃಜನಾತ್ಮಕ ನಿರ್ದೇಶಕಿ ಅವ್ನಿ ಅನೇಜಾ ‘ನಾವು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಸೇರಲು ಉತ್ಸುಕರಾಗಿದ್ದೇವೆ. ನಮ್ಮ ಉದ್ದೇಶ ಕೇವಲ ವಸ್ತ್ರ ವಿನ್ಯಾಸದ ಬಗ್ಗೆ ಅಲ್ಲ, ಆದರೆ ಪ್ರತಿ KKR ಅಭಿಮಾನಿಯ ಮನಸ್ಸಿಗೆ ತಟ್ಟುವಂತಹ ಕಥಾನಾಯಕತೆಯನ್ನು ನಿರ್ಮಿಸುವುದಾಗಿದೆ ಎಂದಿದ್ದಾರೆ.

ನೈಟ್ ರೈಡರ್ಸ್ ಸ್ಪೋರ್ಟ್ಸ್‌ ಗ್ರೂಪ್ ನ CMO ಬಿಂದಾ ಡೇ ಮಾತನಾಡಿ ‘ಕೆಕೆಆರ್ ನಲ್ಲಿ ನಮ್ಮ ಅಭಿಮಾನಿಗಳು ನಾವು ಮಾಡುವ ಪ್ರತಿಯೊಂದು ಕಾರ್ಯದ ಹೃದಯಭಾಗದಲ್ಲಿದ್ದಾರೆ. SIX5SIX ಜೊತೆಗಿನ ಈ ಪಾಲುದಾರಿಕೆಯು ನಮ್ಮ ಯುವ ಫ್ಯಾಶನ್-ಫಾರ್ವರ್ಡ್ ಅಭಿಮಾನಿಗಳ ವರ್ಗಕ್ಕೆ ಇಷ್ಟವಾಗಲಿದೆ.  ಕೇವಲ ಮರ್ಚಂಡೈಸ್ ಮಾತ್ರವಲ್ಲ ನಮ್ಮ ಅಭಿಮಾನಿಗಳೊಂದಿಗೆ ಆಳವಾದ ಭಾವನಾತ್ಮಕ ಸಂಪರ್ಕವನ್ನು ಸೃಷ್ಟಿಸುವುದಾಗಿದೆ.

ಅಭಿಮಾನಿಗಳು ವಿಶೇಷ KKR ಮರ್ಚಂಡೈಸ್ ಪಡೆದುಕೊಳ್ಳಲು www.six5six.in ವೆಬ್ಸೈಟ್ ಗೆ ಭೇಟಿ ನೀಡಬಹುದು ಹಾಗು  ರಿಟೇಲ್ ಅಂಗಡಿಗಳಲ್ಲೂ ಕೂಡ ಪಡೆದುಕೊಳ್ಳಬಹುದು.


administrator