ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ಬೆಂಗಳೂರಿಗೆ ಜಯ
ಶಿಲಾಂಗ್: ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡ ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. Indian Super League Bengaluru FC clinch a 2-0 win against North East United at the Jawaharlal Nehru Stadium in Shillong.
ಈ ಜಯದೊಂದಿಗೆ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲುಪಿದ್ದು ಪ್ಲೇ ಆಫ್ ಹಂತವನ್ನು ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ರೆಯಾನ್ ವಿಲಿಯಮ್ಸ್ (3ನೇ ನಿಮಿಷ) ಹಾಗೂ ಅಲ್ಬೆರ್ಟೋ ನೊಗ್ವೆರಾ (81ನೇ ನಿಮಿಷ) ಬೆಂಗಳೂರು ತಂಡದ ಪರ ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.