Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಹಿಳಾ ಕ್ರಿಕೆಟ್‌ ತಂಡವನ್ನು ಸೋಲಿಸುವ ಅವಕಾಶಕ್ಕೆ ಪಾಕ್ ಮನವಿ!

ಕರಾಚಿ: ಭಾರತದೊಂದಿಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹೀನಾಯವಾಗಿ ಸೋತು ಹೊರತಳ್ಳಲ್ಪಟ್ಟಿರುವ ಆತಿಥೇಯ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇನ್ನು ಮುಂದೆ ಪಾಕಿಸ್ತಾನ ತಂಡಕ್ಕೆ ಭಾರತದ ವಿರುದ್ಧ ಪಂದ್ಯವಿದ್ದಾಗ ಆ ದೇಶದ ಮಹಿಳಾ ಕ್ರಿಕೆಟ್‌ ತಂಡದ ಜೊತೆ ಆಡಲು ಅವಕಾಶ ಕಲ್ಪಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿಕೊಂಡಿವೆ ಎಂದು ವಾಟ್ಸಪ್‌ ಸುದ್ದಿ ವರದಿ ಮಾಡಿದೆ. Pakistan requested UNESCO to allow Pakistan men cricket team to play with women cricket team.

ಈ ಬಗ್ಗೆ ಸೋಮವಾರ ನಡೆದ ವಿಶ್ವಸಂಸ್ಥೆಯ ತುರ್ತು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಹರ್ಕತ್‌ ಉಲ್‌ ಹಕ್‌, “ಭಾರತ ಕ್ರಿಕೆಟ್‌ ತಂಡದೊಂದಿಗೆ ನಮಗೆ ಗೆಲ್ಲಲು ಅಸಾಧ್ಯವೆಂಬುದನ್ನು ನಮ್ಮ ತಂಡ ಪ್ರತಿಬಾರಿಯೂ ಸಾಬೀತುಪಡಿಸುತ್ತಿದೆ. ಇದರಿಂದ ನಮಗೆ ಜಾಗತಿಕ ಮಟ್ಟದಲ್ಲಿ ಅವಮಾನ ಆಗುತ್ತಿದೆ. ಈ ಅವಮಾನವನ್ನು ತಪ್ಪಿಸಲು ನಾವು ಭಾರತದ ವಿರುದ್ಧ ಪಂದ್ಯ ಇದ್ದಾಗಲೆಲ್ಲ ಅಲ್ಲಿಯ ಮಹಿಳಾ ತಂಡದೊಂದಿಗೆ ಆಡುತ್ತೇವೆ. ಅಲ್ಲಿಯಾದರೂ ಗೆದ್ದು ನಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುತ್ತೇವೆ,” ಎಂದು ಹಕ್‌ ಹೇಳಿದರು.

ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಡ್‌ ಕೌನ್ಸಿಲ್‌ (ಐಸಿಸಿ)ಗೆ ತಿಳಿಸುವ ಬದಲು ವಿಶ್ವಸಂಸ್ಥೆಗೆ ತಿಳಿಸುವ ಉದ್ದೇಶವಾದರೂ ಏನು? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಕ್‌, “ಐಸಿಸಿಗೆ ಈ ವಿಷಯ ತಿಳಿಸಿದರೆ ನಮಗೆ ಆ ಅವಕಾಶವನ್ನೂ ನೀಡುವುದಿಲ್ಲ, ಏಕೆಂದರೆ ಅಲ್ಲಿರುವುದು ಈಗ ಅಮಿತ್‌ ಶಾ ಅವರ ಮಗ ಜೇ ಶಾ, ಅದಕ್ಕೆ ನಾವು ಮೊದಲು ವಿಶ್ವಸಂಸ್ಥೆಗೆ ಹೇಳಿರುವುದು, ಅಲ್ಲಿಂದ ನಮಗೆ ವಿಶ್ವ ಮಾನವ ಹಕ್ಕುಗಳ ಆಯೋಗಕ್ಕೆ ತಿಳಿಸಿ ಆ ಮೂಲಕ ನಮಗೊಂದು ನ್ಯಾಯ ಸಿಗುವ ಸಾಧ್ಯತೆ ಇದೆ,” ಎಂದರು.

ಈ ನಡುವೆ ಪಾಕಿಸ್ತಾನ ಪುರುಷರ ತಂಡ ಭಾರತ ಮಹಿಳಾ ಕ್ರಿಕೆಟ್‌ ತಂಡದೊಂದಿಗೆ ಆಡಲು ಮಾನವಿ ಮಾಡಿಕೊಂಡಿರುವುದನ್ನು ಅಲ್ಲಿಯ ಪ್ರಧಾನಿ ಅತ್ಯಂತ ಕ್ರೀಡಾಸ್ಫೂರ್ತಿಯಿಂದ ಸ್ವಾಗತಿಸಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ಸ್ಮೃತಿ ಮಂದಾನ, ಹರ್ಮನ್‌ಪ್ರೀತ್‌ ಕೌರ್‌, ರೋಡ್ರಿಗಸ್‌ ಮೊದಲಾದ ಆಟಗಾರರ ಮುಂದೆ ನಮ್ಮವರು ವೈಫಲ್ಯಗೊಂಡರೆ ಯಾವ ಕರೆ -ಬಾವಿ ಹಾರುವುದು? ಎಂದು ಪಿಸಿಬಿಯನ್ನು ಪ್ರಶ್ನಿಸಿದ್ದಾರೆ.

ಪಾಕ್‌ ಪುರುಷರ ತಂಡಕ್ಕೆ ಮಹಿಳಾ ಕೋಚ್‌: ಭಾರತ ಮಹಿಳಾ ತಂಡದ ವಿರುದ್ಧ ಪಾಕ್‌ ಪುರುಷರ ತಂಡವು ಆಡಬೇಕಾದರೆ ಅವರಿಗೆ ಉತ್ತಮ ರೀತಿಯಲ್ಲಿ ತರಬೇತಿಯ ಅಗತ್ಯವಿದೆ. ಅದಕ್ಕಾಗಿ ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್‌ನ ಮಾಜಿ ಅಂತಾರಾಷ್ಟ್ರೀಯ ಮಹಿಳಾ ಆಟಗಾರ್ತಿಯರನ್ನು ಪಾಕಿಸ್ತಾನ ಪುರುಷರ ತಂಡದ ಕೋಚ್‌ ಆಗಿ ಆಯ್ಕೆ ಮಾಡಲಾಗುವುದು ಎಂದು ಹಕ್‌ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ನಮ್ಮ ಕ್ರೀಡಾ ಚಾನೆಲ್‌ SportsMail ಗೆ subscribe ಆಗಿ ಪ್ರೋತ್ಸಾಹಿಸಿ

ಆಡಲು ನಿರಾಕರಿಸಿದ ಬಿಸಿಸಿಐ: ಪಾಕಿಸ್ತಾನ ಪುರುಷರ ತಂಡವು ಭಾರತದ ಮಹಿಳಾ ತಂಡದೊಂದಿಗೆ ಆಡಲು ಅವಕಾಶ ಮಾಡಿಕೊಡುವಂತೆ ವಿಶ್ವಸಂಸ್ಥೆಯನ್ನು ಮನವಿ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ, ಭಾರತೀಯ ಕ್ರಿಕೆಟ್‌‌ ನಿಯಂತ್ರಣ ಮಂಡಳಿಯು “ಪಾಕಿಸ್ತಾನದಂಥ ದುರ್ಬಲ ತಂಡದೊಂದಿಗೆ ನಮ್ಮ ಬಲಿಷ್ಠ ಮಹಿಳಾ ತಂಡ ಆಡಲು ಸಿದ್ಧವಿಲ್ಲ. ಸಾಧ್ಯವಾದರೆ ನಮ್ಮ ದೇಶೀಯ ಕ್ರಿಕೆಟ್‌ನಲ್ಲಿರುವ ಯಾವುದಾದರೂ ಮಹಿಳಾ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡಲು ಸಂಬಂಧ ಪಟ್ಟ ರಾಜ್ಯ ಕ್ರಿಕೆಟ್‌ ಸಂಸ್ಥೆಯೊಂದಿಗೆ ಚರ್ಚಿಸಿ ತಿಳಿಸಲಾಗುವುದು, ಇಲ್ಲವಾದಲ್ಲಿ ಕೀನ್ಯಾ, ಉಗಾಂಡ, ಚೀನಾ, ಜಪಾನ್‌ ರಾಷ್ಟ್ರಗಳ ಮಹಿಳಾ ತಂಡದೊಂದಿಗೆ ಆಡಲಿ, ಎಂದು ಸಲಹೆ ನೀಡಿದೆ.

ಬಾಬರ್‌ ಮಮ್ತಾಜ್‌ ಟ್ರೋಫಿ: ಪಾಕಿಸ್ತಾನ ಕ್ರಿಕೆಟ್‌‌ ತಂಡದ ಮಾಜಿ ನಾಯಕ ಬಾಬರ್‌ ಅಜಾಮ್‌ ಅವರು ಸದ್ಯದಲ್ಲಿಯೇ ನಿವೃತ್ತಿ ಘೋಷಿಸುವುದರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್‌- ಗವಾಸ್ಕರ್‌ ಟ್ರೋಫಿ ಇರುವಂತೆ ಪಾಕಿಸ್ತಾನ ಪುರುಷರು ಹಾಗೂ ಭಾರತ ಮಹಿಳಾ ತಂಡಗಳ ನಡುವಿನ ಸರಣಿಗೆ ಬಾಬರ್‌ ಹಾಗೂ ಮಮ್ತಾಜ ಸರಣಿ ಇಡುವುದು ಸೂಕ್ತ ಎಂದು ಪಿಸಿಬಿ ಮನವಿ ಮಾಡಿದೆ. ಆದರೆ ಬಿಸಿಸಿಐ ಈ ಎಲ್ಲ ಯೋಜನೆ ಮತ್ತು ಯೋಚನೆಗಳಿಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಸುದ್ದಿ ಕೇಳುತ್ತಲೇ ಉಲ್‌ ಹಕ್‌ಗೆ ಎಚ್ಚರಿಕೆಯಾಗಿ ಕಂಡ ಕನಸಿನ ಬಗ್ಗೆ ಮನದಲ್ಲೇ ನಕ್ಕರು.


administrator