Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪಾಕಿಸ್ತಾನ ಔಟ್‌, ಭಯೋತ್ಪಾದನೆ ಇನ್‌!

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡ ಸೆಮಿಫೈನಲ್‌ ತಲಪುವಲ್ಲಿ ವಿಫಲವಾಗುತ್ತಿದ್ದಂತರ ಚಾಂಪಿಯನ್ಸ್‌ ಟ್ರೋಫಿಗೆ ಭಯೋತ್ಪಾದಕರ ಆತಂಕ ಆವರಿಸಿರುವ ಬಗ್ಗೆ ವರದಿಯಾಗಿದೆ. ಪಾಕಿಸ್ತಾನ ಎಲ್ಲ ರೀತಿಯ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲು ಸಜ್ಜಾಗಿದೆ. Pakistan’s Intelligence Alerts of Plot to Kidnap Foreign Guests at Champions Trophy

ತೆಹರಿಕ್‌ ಇ ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ), ಐಸಿಸ್‌ (ISIS) ಹಾಗೂ ಬಲೂಚಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳು ವಿದೇಶಿ ಅತಿಥಿಗಳನ್ನು ಅಪಹರಣ ಮಾಡುವುದಾಗಿ ಎಚ್ಚರಿಕೆ ನೀಡಿವೆ  ಎಂದು ಪಾಕಿಸ್ತಾನ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದೆ ಎಂದು ಸಿಎನ್‌ಎನ್‌-ನ್ಯೂಸ್‌18 ವರದಿ ಮಾಡಿದೆ. ಭಾರತ ಫೈನಲ್‌ ತಲುಪದಿದ್ದರೆ ಫೈನಲ್‌ ಪಂದ್ಯ ಪಾಕಿಸ್ತಾನದಲ್ಲೇ ನಡೆಯಲಿದೆ.

ಲಾಹೋರ್‌ ಹಾಗೂ ರಾವಲ್ಪಿಂಡಿಗಳಲ್ಲಿ ಪಂದ್ಯ ನಡೆಯುವಾಗ ಪಾಕಿಸ್ತಾನ 12,000ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳನ್ನು ನೇಮಿಸಿದೆ ಎಂದು ತಿಳಿದುಬಂದಿದೆ.

ಭಾರತ ಈ ಕಾರಣಕ್ಕಾಗಿಯೇ ಪಾಕಿಸ್ತಾನದಲ್ಲಿ ಯಾವುದೇ ಪಂದ್ಯಗಳನ್ನು ಆಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಭಾರತ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಈಗ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದು ಖಚಿತವಾಗುತ್ತಿದ್ದಂತೆ ಅಪರಹರಣ ಮಾಡುವ ಆರಂಕದ ಸುದ್ದಿ ಹಬ್ಬಿದೆ.


administrator