Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಲಕ್ಷ್ಯ ಸೇನ್‌ ವಿರುದ್ಧ ತನಿಖೆ ಮುಂದುವರಿಸಲು ಹೈಕೋರ್ಟ್‌ ಅಸ್ತು

ಬೆಂಗಳೂರು: ಕಡಿಮೆ ವಯಸ್ಸನ್ನು ತೋರಿಸಲು ನಕಲಿ ದಾಖಲೆಗಳನ್ನು ನೀಡಿದ ಅರೋಪದ ಮೇಲೆ ಭಾರತದ ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್‌ ವಿರುದ್ಧ ತನಿಖೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಇದರಿಂದಾಗಿ ಲಕ್ಷ್ಯ ಸೇನ್‌, ಅವರ ತಂದೆ-ತಾಯಿ, ಸಹೋದರ ಮತ್ತು ಕೋಚ್‌ ವಿರುದ್ಧ ಮತ್ತೆ ತನಿಖೆ ನಡೆಯಲಿದೆ. Karnataka High Court permits investigation against badminton player Lakshya Sen

2010ರಿಂದ ಜೂನಿಯರ್‌ ಹಂತದಲ್ಲಿ ಟೂರ್ನಿಗಳನ್ನು ಆಡಲು ಲಕ್ಷ್ಯ ಸೇನ್‌ ವಯಸ್ಸಿನ ಬಗ್ಗೆ ಸುಳ್ಳು ದೃಢೀಕರಣ ಪತ್ರಗಳನ್ನು ನೀಡಿದ್ದಾರೆ ಎಂದು ನಾಗರಾಜ್‌ ಎಂ.ಜಿ. ಎಂಬುವರು 2022ರ ರಲ್ಲಿ ದೂರು ದಾಖಲಿಸಿದ್ದರು. ಇದನ್ನು ಅರ್ಜುನ ಪ್ರಶಸ್ತಿ ವಿಜೇತ ಲಕ್ಷ್ಯ ಸೇನ್‌, ಅವರ ಸಹೋದರ ಚಿರಾಗ್‌ ಸೇನ್‌, ತಂದೆ ಧೀರೇಂದ್ರ ಕೆ ಸೇನ್‌, ತಾಯಿ ನಿರ್ಮಲ ಡಿ ಸೇನ್‌ ಹಾಗೂ ಕೋಚ್‌ ಯು. ವಿಮಲ್‌ ಕುಮಾರ್‌ ಪ್ರಶ್ನಿಸಿದ್ದರು. 2022ರ ಡಿಸೆಂಬರ್‌ 22 ರಂದು ಹೈಕೋರ್ಟ್‌ ತನಿಖೆಗೆ ತಡೆಯಾಜ್ಞೆ ತಂದಿತ್ತು. ಕೋಚ್‌ ವಿಮಲ್‌ ಕುಮಾರ್‌ ಅವರು ಲಕ್ಷ್ಯ ಹಾಗೂ ಚಿರಾಗ್‌ ಸೇನ್‌ಗೆ ಆಡಲು ಅನುವು ಮಾಡಿಕೊಟ್ಟಿದ್ದರು. ಯುವ ಸಬಲೀಕರಣ ಕ್ರೀಡಾ ಇಲಾಖೆಯ ತನಿಖೆಯ ಪ್ರಕಾರ ಡಿ ಕೆ ಸೇನ್‌ ಅವರು ತಪ್ಪು ದಾಖಲೆಗಳನ್ನು ನೀಡಿರುವುದು ಕಂಡುಬಂದಿತ್ತು. ಆದರೆ ಈ ಆರೋಪವು ಆಧಾರ ರಹಿತ, ಪ್ರಕಾಶ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ತಮ್ಮ ಮಗಳಿಗೆ ಅವಕಾಶ ಸಿಗದ ಕಾರಣ ಹತಾಷೆಗೊಂಡ ನಾಗರಾಜ್‌ ಅವರು ಈ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಲಾಗಿತ್ತು.

ಈ ಕುರಿತು ವಾದ ಮಾಡಲು ಸೇನ್‌ ಪರ ವಕೀಲರಿಗೆ ನ್ಯಾಯಾಲಯ ಹಲವು ಬಾರಿ ಅವಕಾಶಗಳನ್ನು ನೀಡಿತ್ತು. ಮನವಿಯನ್ನು ತಳ್ಳಿಹಾಕುವುದಕ್ಕೆ ಮುನ್ನ ಸೇನ್‌ ಪರ ವಕೀಲರಿಗೆ ನ್ಯಾಯಾಲಯವು 2024ರಿಂದ ಹಲವು ಬಾರಿ ಗಡುವನ್ನು ನೀಡಿತ್ತು. ಆದರೆ ವಕೀಲರು ಬೇರೆ ಬೇರೆ ಕಾರಣಗಳನ್ನು ನೀಡಿ ಹಾಜರಾಗಿರಲಿಲ್ಲ. ತಡೆಯಾಜ್ಞೆಯ ಲಾಭ ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯವು ಈಗ ಪ್ರಕರಣದ ತನಿಖೆಯನ್ನು ನಡೆಸಲು ಆದೇಶಿಸಿದೆ.


administrator