Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪತ್ನಿಯ ನೆನಪಲ್ಲಿ ಕ್ಯಾನ್ಸರ್‌ ಪೀಡಿತರಿಗಾಗಿ ಸುಜಿತ್‌ ಸದರ್ನ್‌ ಸಫಾರಿ

ಬೆಂಗಳೂರು: ಭಾರತ ಕಂಡ ಶ್ರೇಷ್ಠ ರ್‍ಯಾಲಿ ಪಟು ಸುಜಿತ್‌ ಕುಮಾರ್‌ ಅವರು ಸದರ್ನ್‌ ಸಫಾರಿ ಎಂಬ ಟಿಎಸ್‌ಡಿ ರ್‍ಯಾಲಿ ಹಮ್ಮಿಕೊಂಡಿದ್ದಾರೆ. ಈ ರ್‍ಯಾಲಿಯ ಉದ್ದೇಶವನ್ನು ನೆನದಾಗ ಹೃದಯ ಭಾರವಾಗುತ್ತದೆ. ಅವರ ಈ ಕಾರ್ಯಕ್ಕೆ ನೆರವು ಮಾಡಬೇಕೆಂದು ಮನಸ್ಸು ಹಂಬಲಿಸುತ್ತದೆ. ಕಾರಣ ಕ್ಯಾನ್ಸರ್‌ನಿಂದ ಮೃತ ಪಟ್ಟ ಪತ್ನಿ ಹೇಮಲತಾ ಅವರ ಸ್ಮರಣಾರ್ಥ ಸುಜಿತ್‌ ಈ ರ್‍ಯಾಲಿಯನ್ನು ಆಯೋಜಿಸುತಿದ್ದಾರೆ. ಬಂದ ಆದಾಯದಿಂದ ಕ್ಯಾನ್ಸರ್‌ ಪೀಡಿತ ಬಡ ರೋಗಿಗಳಿಗೆ ನೆರವು ನೀಡಲಿದ್ದಾರೆ. To help the poor cancer patients and cancer awareness former national rally champion Sujith Kumar organizing Southern Safari.  

ಸುಮಾರು 35 ವರ್ಷಗಳ ಕಾಲ ಭಾರತದ ರ್‍ಯಾಲಿಯಲ್ಲಿ ಸ್ಪರ್ಧಿಯಾಗಿ, ಆಡಳಿತ ತಜ್ಞರಾಗಿ ತಮ್ಮನ್ನು ತೊಡಗಿಸಿಕೊಂಡು, ಹಲವಾರು ಚಾಂಪಿಯನ್‌ ಪಟ್ಟಗಳನ್ನು ಗೆದ್ದಿರುವ ಸುಜಿತ್‌ ಕುಮಾರ್‌ ಅವರ ಪತ್ನಿ ಹೇಮಲತಾ ಒಂದೂವರೆ ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಇಹವನ್ನು ತ್ಯಜಿಸಿದ್ದರು. ಈಗ ಹೇಮಲತಾ ಅವರ ಮನೆಯವರು ಸುಜಿತ್‌ ಅವರ ಮಗಳು ಆರ್ನಾಳ ಆರೈಕೆ ನೋಡಿಕೊಳ್ಳುತ್ತಿದ್ದಾರೆ. ಹೇಮಲತಾ ಬೆಂಗಳೂರಿನ ಶಂಕರ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅಲ್ಲಿ ಬಡ ರೋಗಿಗಳು ಪಡುವ ಕಷ್ಟವನ್ನು ಕಣ್ಣಾರೆ ನೋಡಿದ್ದರು. ಸಾಯುವುದಕ್ಕೆ ಮುನ್ನ “ಈ ಬಡ ರೋಗಿಗಳಿಗಾಗಿ ಏನಾದರೂ ನೆರವು ಮಾಡಿ,” ಎಂದಿದ್ದರು. ಪತ್ನಿಯ ಆಸೆಯನ್ನು ಈಡೇರಿಸಲು ಸದರ್ನ್‌ ಸಫಾರಿ ರ್‍ಯಾಲಿ ಆಯೋಜಿಸಲು ತೀರ್ಮಾನಿಸಿದರು. ಏಪ್ರಿಲ್‌ ತಿಂಗಳ 18 ರಿಂದ 20 ರವರೆಗೆ ನಡೆಯಬೇಕಾಗಿದ್ದ ರ್‍ಯಾಲಿಯನ್ನು ಶಿವಮೊಗ್ಗದಲ್ಲಿ ಹೊಟೇಲ್‌ ಕೊಠಡಿಗಳ ಅಲಭ್ಯದ ಕಾರಣ ಮೇ 2 ರಿಂದ 4 ವರೆಗೆ ಆಯೋಜಿಸಲಾಗಿದೆ.

ಬೆಂಗಳೂರಿನಿಂದ ಆರಂಭಗೊಳ್ಳಲಿರುವ FMSCI ರ್‍ಯಾಲಿ ಶಿವಮೊಗ್ಗದ ಮೂಲಕ ಸಾಗಿ ಗೋವದಲ್ಲಿ ಕೊನೆಗೊಳ್ಳಲಿದೆ. ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವುದರ ಜೊತೆಯಲ್ಲಿ ಬಡ ರೋಗಿಗಳಿಗೆ ನೆರವು ನೀಡುವುದು ಈ ರ್‍ಯಾಲಿಯ ಪ್ರಮುಖ ಉದ್ದೇಶವಾಗಿದೆ.

ಓಪನ್‌ ಕ್ಲಾಸ್‌, ಮಹಿಳಾ ಎಕ್ಸ್‌ಪರ್ಟ್‌ ವಿಭಾಗ, ಮಹಿಳಾ ಅಮೆಚೂರ್ಸ್‌ ವಿಭಾಗ, ಕಪಲ್ಸ್‌ ವಿಭಾಗ, ಕಾರ್ಪೊರೇಟ್‌ ವಿಭಾಗಗಳಲ್ಲಿ ರ್‍ಯಾಲಿ‌ ನಡೆಯಲಿದೆ. ಸುಮಾರು 800 ಕಿಮೀ ದೂರದ ಟಿಎಸ್‌ಡಿ ರ್‍ಯಾಲಿ ಇದಾಗಿದೆ.

ನೋಂದಾಯಿಸಿಕೊಳ್ಳಲು ಸಂಪರ್ಕಿಸಿ: 9880539448

ಒಂದು ಉತ್ತಮ ಸಾಮಾಜಿಕ ಕಾಳಜಿಗಾಗಿ ನಡೆಯುತ್ತಿರುವ ಈ ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

1989ರಲ್ಲಿ ಮೋಟಾರ್‌ ಸ್ಪೋರ್ಟ್ಸ್‌ಗೆ ಪ್ರವೇಶ ಮಾಡಿದ ಸುಜಿತ್‌ ಕುಮಾರ್‌ ಕಳೆದ ವರ್ಷವೂ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಫೆಡರೆಷನ್‌ ಆಫ್ ಇಂಟರ್‌ನ್ಯಾಷನಲ್‌ ಮೋಟಾರ್‌ ಸ್ಪೋರ್ಟ್ಸ್‌ನ ಏಷ್ಯಾ ವಿಭಾಗದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.


administrator