ಮದುಮಗಳ ಉಡುಪಿನಲ್ಲಿ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್!
ಬೆಂಗಳೂರು: ಕರ್ನಾಟಕದ ಶ್ರೇಷ್ಠ ಮಹಿಳಾ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ಅವರು ಮದುಮಗಳ ಉಡುಪಿನಲ್ಲಿ ಕಾಣಿಸಿಕೊಂಡ ವೀಡಿಯೋ ಈಗ ದೇಶದಾದ್ಯಂತ ವೈರಲ್ ಆಗಿದೆ. Karnataka’s bodybuilder Chitra Purushottam caught everyone’s attention with her bridal look.
ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್, ರಗ್ಬಿಯಲ್ಲಿ ಚಿನ್ನ, ಬಾಡಿಬಿಲ್ಡಿಂಗ್‌ನಲ್ಲಿ ಮಿಸ್ ಇಂಡಿಯಾ, ಮಿಸ್ ಕರ್ನಾಟಕ ಹಾಗೂ ಮಿಸ್ ಬೆಂಗಳೂರು ಪ್ರಶಸ್ತಿ ಗೆದ್ದಿರುವ ಚಿತ್ರಾ ಅವರು ಭಾರತದ ಶ್ರೇಷ್ಠ ಬಾಡಿ ಬಿಲ್ಡರ್‌ಗಳಲ್ಲಿ ಒಬ್ಬರು. ಕಾಂಜೀವರಂ ಸೀರೆಯುಟ್ಟು, ಆಭರಣಗಳನ್ನು ಧರಿಸಿ ಮದುಮಗಳ ಉಡುಪಿನಲ್ಲಿ ಕಾಣಿಸಿಕೊಂಡ ಚಿತ್ರಾ ಪುರುಷೋತ್ತಮ್ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ.
ರಗ್ಬಿಯಲ್ಲಿ ರಾಷ್ಟ್ರೀಯ ತಂಡದ ಆಯ್ಕೆಶಿಬಿರದಲ್ಲಿ “ನಿಮಗೆ ರಗ್ಬಿ ಆಡುವ ಮೈಕಟ್ಟು ಇಲ್ಲ, ಎತ್ತರವೂ ಕಡಿಮೆ ಇದೆ, ಮುಂದಿನ ಹಂತಕ್ಕೆ ಹೋಗಲು ಕಷ್ಟವಾಗುತ್ತದೆ,” ಎಂದು ಯಾರೋ ಸಲಹೆ ನೀಡಿದಾಗ ಚಿತ್ರಾ ಬಾಡಿಬಿಲ್ಡಿಂಗ್‌ನತ್ತ ಮುಖ ಮಾಡಿದರು. ಖೇಲೋ ಇಂಡಿಯಾದಲ್ಲಿ ಚಿನ್ನದ ಪದಕ ಗೆದ್ದಿರುವ ಚಿತ್ರಾ ಅವರಿಗೆ ಗುಂಪು ಕ್ರೀಡೆಗಿಂತ ವೈಯಕ್ತಿಕ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ. ಅದಕ್ಕಾಗಿಯೇ ಬಾಡಿಬಿಲ್ಡಿಂಗ್ ಆಯ್ಕೆ ಮಾಡಿ ಯಶಸ್ಸು ಕಂಡರು.